Government Jobs: ಕರ್ನಾಟಕದಲ್ಲೇ ಕೇಂದ್ರ ಸರ್ಕಾರಿ ಉದ್ಯೋಗವಕಾಶ: ಜು.23ಕ್ಕೆ ನೇರ ಸಂದರ್ಶನ

ಬೆಂಗಳೂರು, ಜುಲೈ 18: ಕೇಂದ್ರ ಸರ್ಕಾರಿ ಕೆಲಸವನ್ನು ಕರ್ನಾಟಕದಲ್ಲಿ ಹುಡುಕುತ್ತಿದ್ದವರಿಗೆ ಇಲ್ಲೊಂದು ಸುವರ್ಣ ಅವಕಾಶ ಇದೆ. ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣೆ ಸಂಸ್ಥೆ (IISWC)ಯು ತನ್ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ.

ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣೆ ಸಂಸ್ಥೆಯಲ್ಲಿ (IISWC) ಒಟ್ಟು 1 ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆ ಖಾಲಿ ಇದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಇದೇ ಜುಲೈ 23 ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದು.

IISWC Recruitment Eligible Candidate Can Apply Project Assistant Post in IISWC

ಇದಕ್ಕೂ ಮೊದಲು ಆಸಕ್ತ ಅಭ್ಯರ್ಥಿಗಲೂ ಹುದ್ದೆಯ ಕುರಿತ ಮಾಹಿತಿ, ಶೈಕ್ಷಣಿಕ ಅರ್ಹತೆ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಇನ್ನಿತರ ಸಂಪೂರ್ಣ ನೇಮಕಾತಿ ಪ್ರಕ್ರಿಯೆ ಇಲ್ಲಿ ತಿಳಿಯಿರಿ.

ನೇಮಕಾತಿ ಪೂರ್ಣ ಮಾಹಿತಿ

ಸಂಸ್ಥೆ ಹೆಸರು: ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣೆ ಸಂಸ್ಥೆ (IISWC)

ಹುದ್ದೆ ಹೆಸರು: ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆ

ಒಟ್ಟು ಹುದ್ದೆ: ಒಂದು

ಸಂದರ್ಶನ ದಿನಾಂಕ: ಜುಲೈ 23

ಪೋಸ್ಟಿಂಗ್: ಬಳ್ಳಾರಿ, ಕರ್ನಾಟಕ

ವೇತನ: ನಿಯಮಾನುಸಾರ

ವಿದ್ಯಾರ್ಹತೆ ಏನಿರಬೇಕು?

ಆಸಕ್ತ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಅಗ್ರಿಕಲ್ಚರಲ್ ಎಂಜಿನಿಯರಿಂಗ್​/ ಸಿವಿಲ್ ಎಂಜಿನಿಯರಿಂಗ್​​ನಲ್ಲಿ ಬಿಇ/ಬಿ.ಟೆಕ್ ಪೂರ್ಣಗೊಳಿಸಿರಬೇಕು ಎಂದು ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣೆ ಸಂಸ್ಥೆಯಲ್ಲಿ (IISWC) ನೇಮಕಾತಿ ಅಧಿಸೂಚನೆ ತಿಳಿಸಿದೆ.

IISWC Recruitment Eligible Candidate Can Apply Project Assistant Post in IISWC

ವಯಸ್ಸಿನ ಮಿತಿ ಮಾಹಿತಿ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಇದೇ 2024 ಜುಲೈ 23ಕ್ಕೆ ಗರಿಷ್ಠ 50 ವರ್ಷ ಮೀರಿರಬಾರದು ಎಂದು ಹೇಳಲಾಗಿದ್ದು, ಜಾತಿ ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳಿಗೆಳಿ ವಯೋಮಿತಿ ಸಡಿಲಿಕೆ ಸಿಗಲಿದೆ ಎಂದು ಸಂಸ್ಥೆ ಹೇಳಿದೆ.

ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಇದೇ ಜುಲೈ 23 ರಂದು ನಡೆಯಲಿರುವ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕು. ಬಳಿಕ ಸಂಸ್ಥೆಯಿಂದ ನಡೆಲಿರುವ ಲಿಖಿತ ಪರೀಕ್ಷೆಯಲ್ಲಿ ಹಾಜರಾಗಬೇಕು. ಆಯ್ಕೆ ಆದವರಿಗೆ ಮಾಸಿಕವಾಗಿ ರೂ.20,000 ವೇತನ ಸಹಿತ ಬಳ್ಳಾರಿಯಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ.

ಸಂದರ್ಶನ ನಡೆಯುವ ಸ್ಥಳ

ICAR-ಭಾರತೀಯ ಮಣ್ಣು ಮತ್ತು ಜಲ ಸಂರಕ್ಷಣೆ ಸಂಸ್ಥೆ, ಸಂಶೋಧನಾ ಕೇಂದ್ರ, ಬಳ್ಳಾರಿ, ಕರ್ನಾಟಕ. ಇಲ್ಲಿಗೆ ತಪ್ಪದೇ ಸೂಕ್ತ ದಾಖಲೆಗಳ ಸಮೇತ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬೇಕು.

ನೆನಪಿಡಬೇಕಾದ ದಿನಗಳು

ಅಧಿಸೂಚನೆ ಬಿಡುಗಡೆ ಆಗಿದ್ದು: ಜೂನ್ 27

ಸಂದರ್ಶನ ದಿನಾಂಕ: ಜುಲೈ 23 ಬೆಳಗ್ಗೆ 11 ಗಂಟೆಗೆ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+