IIMB Recruitment 2023: 12ಲಕ್ಷ ಪ್ಯಾಕೇಜ್ ಹುದ್ದೆಗೆ ಫೆ.6 ರೊಳಗೆ ಅರ್ಜಿ ಸಲ್ಲಿಸಿ, ವಿಧಾನ ತಿಳಿಯಿರಿ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರಿನಲ್ಲಿ (IIMB) ಖಾಲಿ ಇರುವ ಹುದ್ದೆಗಳ ನೇಮಕ ಪ್ರಕ್ರಿಯೆ ಆರಂಭವಾಗಿದೆ. ಈ ಸಂಬಂಧ ಅರ್ಹರಿಂದ ಅರ್ಜಿ ಸಲ್ಲಿಸುವಂತೆ ಆಹ್ವಾನಿಸಲಾಗಿದೆ. ಈ ಹುದ್ದೆಗೆ ಅರ್ಜಿ ಹೇಗೆ ಸಲ್ಲಿಸಬೇಕು, ಅರ್ಹತೆಗಳೇನು, ವೇತನ ಎಷ್ಟು ಎಂ
ಬೆಂಗಳೂರು, ಜನವರಿ 26: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರಿನಲ್ಲಿ (IIMB) ಖಾಲಿ ಇರುವ ಹುದ್ದೆಗಳ ನೇಮಕ ಪ್ರಕ್ರಿಯೆ ಆರಂಭವಾಗಿದೆ. ಈ ಸಂಬಂಧ ಅರ್ಹರಿಂದ ಅರ್ಜಿ ಸಲ್ಲಿಸುವಂತೆ ಆಹ್ವಾನಿಸಲಾಗಿದೆ.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರಿನಲ್ಲಿ (IIMB) ಒಟ್ಟು ಎರಡು ಅಸೋಸಿಯೇಟ್ ಮ್ಯಾನೇಜರ್ ಹಾಗೂ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗಳು ಖಾಲಿ ಇವೆ. ಆಸಕ್ತರು ಮುಂದಿನ ತಿಂಗಳ ಫೆಬ್ರುವರಿ 06 ರೊಳಗೆ ಅರ್ಜಿ ಸಲ್ಲಿಸಬೇಕಿದೆ.
ವಿಶೇಷವೆಂದರೆ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾಗುವವರಿಗೆ ರಾಜಧಾನಿ ಬೆಂಗಳೂರಿನಲ್ಲಿ ಉದ್ಯೋಗವಕಾಶ ನೀಡಲಾಗುವುದು. ಈ ಕೂಡಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದೆ. ಅರ್ಜಿ ಸಲ್ಲಿಸುವ ವಿಧಾನ, ವೇತನ, ವಿದ್ಯಾರ್ಹತೆ, ಪ್ರಮುಖ ದಿನಾಂಕಗಳ ಕುರಿತು ಸಂಪೂರ್ಣ ಮಾಹಿತಿ ಇಲ್ಲಿ ತಿಳಿದುಕೊಳ್ಳಬಹುದು.

ಹುದ್ದೆಗಳ ಸಂಪೂರ್ಣ ಮಾಹಿತಿ
ಖಾಲಿ ಹುದ್ದೆ- 02
ಹುದ್ದೆ ಹೆಸರು- ಅಸೋಸಿಯೇಟ್ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್
ವಿದ್ಯಾರ್ಹತೆ- ಪದವಿ, ಸ್ನಾತಕೋತ್ತರ ಪದವಿ
ವೇತನ ಎಷ್ಟು- 7 ಲಕ್ಷ ರೂ. ನಿಂದ 12ವರೆಗೆ (ವಾರ್ಷಿಕ)
ಉದ್ಯೋಗ ಸ್ಥಳ- ಬೆಂಗಳೂರು
ಶೈಕ್ಷಣಿಕ ಅರ್ಹತೆ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು ಹೊರಡಿಸಿರುವ ಅಧಿಸೂಚನೆಯಂತೆ, ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಇಲ್ಲವೇ ಮಂಡಳಿಯಿಂದ ಕಡ್ಡಾಯವಾಗಿ ಪದವಿ ಅಥವಾ ಸ್ನಾತಕೋತ್ತರ ಪದವಿ ಹೊಂದಿರಬೇಕು.
ವಯಸ್ಸಿನ ಮೀತಿ- ವೇತನ ವಿವರ
ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳ ವಯಸ್ಸು ಎಷ್ಟು ಎಂದು ಸಂಸ್ಥೆ ತಿಳಿಸಿಲ್ಲ. ಬದಲಾಗಿ ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುವುದು ಎಂದು ತಿಳಿಸಿದೆ.

ಇನ್ನೂ ವೇತನ ನೋಡುವುದಾದರೆ ಆಯ್ಕೆ ಯಾಗುವ ಅಭ್ಯರ್ಥಿಗಳಿಗೆ ಹುದ್ದೆಗಳನ್ವಯ ಅಂದರೆ ಅಸಿಸ್ಟೆಂಟ್ ಮ್ಯಾನೇಜರ್ ಗೆ 7 ಲಕ್ಷ ರೂ.ನಿಂದ 9.20 ಲಕ್ಷ ರೂ.ವರೆಗೆ ವಾರ್ಷಿಕ ಪ್ಯಾಕೇಜ್ ನೀಡಲಾಗುವುದು. ಅಸೋಸಿಯೇಟ್ ಮ್ಯಾನೇಜರ್ ಗೆ 10.70 ಲಕ್ಷ ರೂ.ನಿಂದ 12.30 ಲಕ್ಷ ರೂಪಾಯಿ ವರೆಗೆ ವಾರ್ಷಿಕ ಪ್ಯಾಕೇಜ್ ಘೋಷಿಸಲಾಗಿದೆ.
ಪರೀಕ್ಷೆ ಮೂಲಕ ಆಯ್ಕೆ
ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಇರಲಿದೆ. ಅದಾದ ಬಳಿಕ ಸಂರ್ದನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕ ಇಲ್ಲ ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಬೆಂಗಳೂರು ಮಾಹಿತಿ ನೀಡಿದೆ.












Click it and Unblock the Notifications