"ಹಿಂದಿಯವರು ಕರ್ನಾಟಕದಿಂದ ಹೋದ್ರೆ ಕನ್ನಡಿಗರ ಬಳಿ ₹10 ಕೂಡ ಗತಿ ಇರಲ್ಲ"
ಬೇರೆ ಊರಿನಿಂದ ಬಂದು ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿರುವ ಉತ್ತರ ಭಾರತೀಯರ ದರ್ಪ, ಅಟ್ಟಹಾಸ ದಿನೇ ದಿನೇ ಮಿತಿ ಮೀರಿದೆ. ಇಂತಹ ಘಟನೆ ದಿನಕ್ಕೊಂದು ಬೆಳಕಿಗೆ ಬರುತ್ತಿದ್ದು, ಬೆಂಗಳೂರಿನಲ್ಲಿ ಮತ್ತೊಬ್ಬ ನಾರ್ಥಿ ಕನ್ನಡಿಗರು, ಕರ್ನಾಟಕದ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಾನೆ. ಡೆಲಿವರಿ ಬಾಯ್‌ಗೆ ಮನಬಂದಂತೆ ನಿಂದಿಸಿದ್ದಲ್ಲದೆ, ಹಿಂದಿ ಭಾಷಿಕರು ಬೆಂಗಳೂರು ಬಿಟ್ಟರೆ ನಿಮ್ಮ ಬಳಿ ಟೊಮ್ಯಾಟೋ ಖರೀದಿಸಲೂ ಹತ್ತು ರೂಪಾಯಿ ಇರೋದಿಲ್ಲ ಎಂದಿದ್ದಾನೆ.
ಕನ್ನಡ ಮತ್ತು ಕನ್ನಡಿಗರನ್ನು ನಿಂದಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಭಾರತ ಮೂಲದ ಮಸಾಜ್ ಥೆರಪಿಸ್ಟ್ ಮಿಥುನ್ ಸರ್ಕಾರ್ ಎಂಬಾತನನ್ನು ಬೇಗೂರು ಪೊಲೀಸರು ಬಂಧಿಸಿದ್ದಾರೆ. ಡೆಲಿವರಿ ಬಾಯ್ ರಂಜಿತ್ ಎಂಬುವವರಿಗೆ ನಿಂದಿಸಿ, ಇಲ್ಲಿ ಕನ್ನಡ ಸೂಪರ್‌ಸ್ಟಾರ್ ಅಲ್ಲ. ಹಿಂದಿ ಭಾಷಿಕರು ಬೆಂಗಳೂರು ತೊರೆದರೆ ಹತ್ತು ರೂಪಾಯಿ ಇರಲ್ಲ ಎಂದು ಎಗರಾಡಿದ್ದಾನೆ. ಕೊನೆಗೆ ಪೊಲೀಸರು ಮಿಥುನ್ ಸರ್ಕಾರ್ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು ಕರ್ನಾಟಕದ ರುಚಿ ತೋರಿಸಿದ್ದಾರೆ.

ಕನ್ನಡಿಗರು ತುಂಬಾ ನೌಟಂಕಿ ಜನ!
ಈ ಘಟನೆ ಬೀಗೂರು ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಡೆಲಿವರಿ ಬಾಯ್ ರಂಜಿತ್ ಅವರೊಂದಿಗೆ ಮಸಾಜ್ ಥೆರಪಿಸ್ಟ್ ಟೀ-ಶರ್ಟ್ ಪಾರ್ಸೆಲ್ ಡೆಲಿವರಿ ಕುರಿತು ಮಾತುಕತೆ ನಡೆಸಿದ ವೇಳೆ ಈ ವಾಗ್ವಾದ ಉಂಟಾಗಿದೆ. ಬೆಂಗಳೂರಲ್ಲಿ ಶೇ 70ರಷ್ಟು ಹಿಂದಿಯವರೇ ಇದ್ದೇವೆ. ನಾವು ಇಲ್ಲಿಂದ ಹೋದರೆ ಕನ್ನಡಿಗರ ಬಳಿ ಟೊಮೆಟೊ ತೆಗೆದುಕೊಳ್ಳೋಕೂ 10 ರೂಪಾಯಿ ಕೂಡ ಗತಿ ಇರೋದಿಲ್ಲ, ಕನ್ನಡಿಗರು ತುಂಬಾ ನೌಟಂಕಿ ಜನ ಎಂದಿದ್ದಾನೆ. ಈ ವಿಡಿಯೋ ಅನ್ನು ಡೆಲಿವರಿ ಬಾಯ್ ರೆಕಾರ್ಡ್ ಮಾಡಿಕೊಂಡಿದ್ದ.
ಈ ಘಟನೆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಕನ್ನಡಿಗರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಕನ್ನಡ ಭಾಷೆ ಮತ್ತು ಕರ್ನಾಟಕ ಜನರ ಗೌರವಕ್ಕೆ ತಡೆಗಾಗಿ ಸರ್ಕಾರ ಮತ್ತು ಸಂಘಟನೆಗಳು ಕ್ರಮ ತೆಗೆದುಕೊಂಡಿದ್ದಾರೆ. ಬಳಿಕ ಮಿಥುನ್ ವಿರುದ್ಧ ಕರವೇ ದೂರು ದಾಖಲಿಸಿತ್ತು. ಈ ಹಿನ್ನೆಲೆ ಎಫ್ಐಆರ್ ದಾಖಲಿಸಿಕೊಂಡಿದ್ದ ಬೊಮ್ಮನಹಳ್ಳಿ ಪೋಲಿಸರು ರಾತ್ರಿಯಿಡೀ ಆತನ ಟವರ್ ಲೋಕೆಷನ್ ಪತ್ತೆ ಹಚ್ಚಿದ್ದಾರೆ. ಕನ್ನಡಿಗರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದಕ್ಕೆ ಚೆನ್ನಾಗಿ ಬೆಂಡೆತ್ತಿದ್ದಾರೆ.
ಆರೋಪಿ ಬೇಗೂರು ಮುಖ್ಯ ರಸ್ತೆಯ ಹೊಂಗಸಂದ್ರದ ನಿವಾಸಿ, ಕಳೆದ ಒಂಬತ್ತು ವರ್ಷಗಳಿಂದ ಸಲೂನ್ ಮತ್ತು ಸ್ಪಾದಲ್ಲಿ ಮಸಾಜ್ ಥೆರಪಿಸ್ಟ್ ಆಗಿ ಬೆಂಗಳೂರಿನಲ್ಲೇ ಕೆಲಸ ಮಾಡುತ್ತಿದ್ದಾನೆ. ಆದರೂ ಕನ್ನಡಿಗರು, ಕರ್ನಾಟಕದವರ ಮೇಲೆ ದರ್ಪ ತೋರಿರುವುದು ಕೋಪಕ್ಕೆ ಕಾರಣವಾಗಿದೆ. ಇಂತವರನ್ನು ಮೊದಲು ಕರ್ನಾಟಕದಿಂದ ಹೊರಗೆ ಓಡಿಸಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.












Click it and Unblock the Notifications