• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಚಾಪ್ಟರ್ -2: ಸ್ವಲ್ಪ ಎಚ್ಚರ ತಪ್ಪಿದರೂ ಈ 10 ವಾರ್ಡ್ ಕಂಟೇನ್ಮೆಂಟ್ ಝೋನ್ ವ್ಯಾಪ್ತಿಗೆ?

|

ಬೆಂಗಳೂರು, ಫೆ 23: "ಲಾಕ್ ಡೌನ್, ಸೀಲ್ ಡೌನ್ ಅಥವಾ ನೈಟ್ ಕರ್ಫ್ಯೂ ಮಾಡುವಂತಹ ಪರಿಸ್ಥಿತಿ ಸದ್ಯ ರಾಜ್ಯದಲ್ಲಿ ಇಲ್ಲ. ಆದರೆ, ಸಾರ್ವಜನಿಕರು ಎಚ್ಚರಿಕೆಯಿಂದ ಇದ್ದು, ಮಾರ್ಗಸೂಚಿಯನ್ನು ಪಾಲಿಸಬೇಕು"ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೊನಾ ಹೊಸ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆದರೂ, ಬಿಡುಗಡೆಯಾಗುತ್ತಿರುವವರ ಸಂಖ್ಯೆಯೂ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ.

ಜನರ ನೆಮ್ಮದಿ ಹಾಳು ಮಾಡಲು ಮತ್ತೆ ಚಿಗುರುತ್ತಿದೆ ಕೊರೊನಾ ವೈರಸ್!

ನಗರದ ಕೆಲವೊಂದು ವಾರ್ಡಗಳಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವುದರಿಂದ, ಐದರಿಂದ ಹೆಚ್ಚು ಸೋಂಕಿತರು ಇದ್ದರೆ, ಅಂತಹ ಪ್ರದೇಶವನ್ನು ಹಿಂದಿನಂತೆ ಕಂಟೇನ್ಮೆಂಟ್ ಝೋನ್ ಮಾಡಲು ಬಿಬಿಎಂಪಿ ನಿರ್ಧರಿಸಿದೆ.

ಸದ್ಯಕ್ಕೆ ಬೊಮ್ಮನಹಳ್ಳಿ ವಲಯದಲ್ಲಿ ಸೋಂಕಿತರ ಪ್ರಮಾಣ ಹೆಚ್ಚಿದ್ದು, ಇದಾದ ನಂತರ ಬೆಂಗಳೂರು ದಕ್ಷಿಣ, ಮಹದೇವಪುರ ಮತ್ತು ಬೆಂಗಳೂರು ಪೂರ್ವ ಭಾಗದಲ್ಲೀ ಸೋಂಕಿತರ ಸಂಖ್ಯೆ ಹೆಚ್ಚಿದೆ. ಪರಿಸ್ಥಿತಿ ಹತೋಟಿಗೆ ಬರದೇ ಇದ್ದಲ್ಲಿ, ಹತ್ತು ವಾರ್ಡಿನ ಕೆಲವು ಪ್ರದೇಶಗಳನ್ನು ಕಂಟೇನ್ಮೆಂಟ್ ಝೋನ್ ಮಾಡುವ ಸಾಧ್ಯತೆಯಿದೆ. ಆ ವಾರ್ಡುಗಳ ಪಟ್ಟಿಯನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ:

ಸಿಹಿಸುದ್ದಿ: ಭಾರತದ 19 ರಾಜ್ಯಗಳಲ್ಲಿ ಕೊರೊನಾದಿಂದ ಮೃತಪಟ್ಟವರೇ ಇಲ್ಲ!

ಬಿಬಿಎಂಪಿ ವ್ಯಾಪ್ತಿಯ ವಿವಿಧ ವಿಭಾಗಗಳು

ಬಿಬಿಎಂಪಿ ವ್ಯಾಪ್ತಿಯ ವಿವಿಧ ವಿಭಾಗಗಳು

ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಹೋಂ ಕ್ವಾರಂಟೈನ್ ನಲ್ಲಿ 187 ಮತ್ತು ಆಸ್ಪತ್ರೆಯಲ್ಲಿ 54, ಇನ್ನು, ಬೆಂಗಳೂರು ಪೂರ್ವದಲ್ಲಿ ಕ್ರಮವಾಗಿ 110, 41, ಬೆಂಗಳೂರು ದಕ್ಷಿಣದಲ್ಲಿ 187, 36, ಮಹದೇವಪುರದಲ್ಲಿ 161, 54 ಬೆಂಗಳೂರು ಪಶ್ಚಿಮದಲ್ಲಿ 78, 30, ರಾಜರಾಜೇಶ್ವರಿ ನಗರದಲ್ಲಿ 73, 23 ಮತ್ತು ಯಲಹಂಕ ವಿಭಾಗದಲ್ಲಿ 65 ಮತ್ತು 24 ಕೊರೊನಾ ಸೋಂಕಿತರು ಇದ್ದಾರೆ.

ಕಂಟೇನ್ಮೆಂಟ್ ಝೂನ್

ಕಂಟೇನ್ಮೆಂಟ್ ಝೂನ್

ಕೆಲವು ಪ್ರದೇಶಗಳನ್ನು ಕಂಟೇನ್ಮೆಂಟ್ ಝೂನ್ ಮಾಡುವ ಸಾಧ್ಯತೆ - ವಾರ್ಡ್ ಗಳು

1. ಕಾವಲ್ ಭೈರಸಂದ್ರ - ವಾರ್ಡ್ ನಂಬರ್ 32

2. ಎಚ್.ಎಸ್.ಆರ್ ಲೇಔಟ್ - ವಾರ್ಡ್ ನಂಬರ್ 174

3. ಹೊರಮಾವು - ವಾರ್ಡ್ ನಂಬರ್ 25

4. ಬೇಗೂರು - ವಾರ್ಡ್ ನಂಬರ್ 192

ಉತ್ತರಹಳ್ಳಿ

ಉತ್ತರಹಳ್ಳಿ

ಕೆಲವು ಪ್ರದೇಶಗಳನ್ನು ಕಂಟೇನ್ಮೆಂಟ್ ಝೂನ್ ಮಾಡುವ ಸಾಧ್ಯತೆ - ವಾರ್ಡ್ ಗಳು

5. ಉತ್ತರಹಳ್ಳಿ - ವಾರ್ಡ್ ನಂಬರ್ 184

6. ದೊಡ್ಡನೆಕ್ಕುಂದಿ - ವಾರ್ಡ್ ನಂಬರ್ 85

7. ಹಗದೂರು - ವಾರ್ಡ್ ನಂಬರ್ 84

ಬೆಳ್ಳಂದೂರು

ಬೆಳ್ಳಂದೂರು

8. ಬಿಳೇಕಹಳ್ಳಿ - ವಾರ್ಡ್ ನಂಬರ್ 188

9. ಬೆಳ್ಳಂದೂರು - ವಾರ್ಡ್ ನಂಬರ್ 150

10. ಅರಕೆರೆ - ವಾರ್ಡ್ ನಂಬರ್ 193

   ಚಿಕ್ಕಬಳ್ಳಾಪುರ ಜಿಲೆಟಿನ್ ಸ್ಫೋಟ ದುರಂತಕ್ಕೆ ಪ್ರಧಾನಿ ಮೋದಿ ಸಂತಾಪ | Oneindia Kannada

   English summary
   If Covid 19 Cases Increases Ten Ward Of BBMP Limit May Go Under Containment Zone
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X