ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ ಇಡ್ಲಿ!
ಬೆಂಗಳೂರು, ಅಕ್ಟೋಬರ್ 01; ದಕ್ಷಿಣ ಭಾರತದ ಬಹುತೇಕ ಜನರ ನೆಚ್ಚಿನ ಉಪಹಾರ ಇಡ್ಲಿ. ಈಗಾಗಲೇ ತಟ್ಟೆ ಇಡ್ಲಿ, ಸಣ್ಣ ಇಡ್ಲಿ, ಬಟನ್ ಇಡ್ಲಿ ಹೀಗೆ ವಿವಿಧ ಮಾದರಿ ಇಡ್ಲಿಗಳು ಖ್ಯಾತಿಗಳಿಸಿವೆ. ಸಾಮಾಜಿಕ ಜಾಲತಾಣಗಳಲ್ಲಿ ಐಸ್ ಕ್ರೀಂ ಮಾದರಿ ಇಡ್ಲಿಯ ಫೋಟೋಗಳು ವೈರಲ್ ಆಗಿವೆ.
ಬೆಂಗಳೂರಿನ ಹೋಟೆಲ್‌ವೊಂದರಲ್ಲಿ ಐಸ್ ಕ್ರೀಂ ಕಡ್ಡಿ ಹಾಕಿ ಕೊಡುವ ಮಾದರಿಯ ಇಡ್ಲಿ ಮಾಡಲಾಗಿದೆ. ಸಾಂಬಾರ್, ಚಟ್ನಿ ಜೊತೆ ಅದನ್ನು ಸವಿಯಲು ಕೊಡಲಾಗಿದೆ. ಈ ಇಡ್ಲಿ ಬಗ್ಗೆ ಈಗ ಬಿಸಿ-ಬಿಸಿ ಚರ್ಚೆಯಾಗುತ್ತಿದೆ.
ಹೊಸ ಮಾದರಿ ಇಡ್ಲಿಯನ್ನು ಹಲವಾರು ಜನರು ಸ್ವಾಗತಿಸಿದ್ದಾರೆ. ಇನ್ನೂ ಕೆಲವು ಪುರಾತನ ಇಡ್ಲಿಯ ಸವಿಯನ್ನು ನೆನೆದು, ಕಡ್ಡಿ ಇರುವ ಇಡ್ಲಿ ನೋಡಿ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ಕಡ್ಡಿ ಇರುವ ಇಡ್ಲಿ ನೋಡಿ ಕೆಲಸವು ಕುಲ್ಫಿ ಎಂದು ಗೊಂದಲಕ್ಕೆ ಒಳಗಾದರು. ಕುಲ್ಫಿ ತಿನ್ನಲು ಯಾವಾಗಿನಿಂದ ಸಾಂಬಾರ್, ಚಟ್ನಿ ನೀಡಲು ಆರಂಭಿಸಿದರು? ಎಂದು ಪ್ರಶ್ನೆಯನ್ನು ಎಸೆದಿದ್ದಾರೆ.
ಉಡುಪಿಯ ಇಡ್ಲಿಗೆ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಬ್ರ್ಯಾಂಡ್ ಟ್ರೇಡ್ ಮಾರ್ಕ್ ಗೌರವ, ಸ್ಥಾನಮಾನ ಸಿಕ್ಕಿದೆ ಎಂಬ ಸುದ್ದಿಯ ನಡುವೆಯೇ ಈ ಕುಲ್ಫಿ ಮಾದರಿ ಇಡ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Innovative food technology of how the Idli got attached to the Ice cream stick.
— Mahendrakumar (@BrotherToGod) September 30, 2021
Bengaluru and it's food innovations are always synonymous!@vishalk82 pic.twitter.com/IpWXXu84XV
ಇಡ್ಲಿ ದಕ್ಷಿಣ ಭಾರತದ ಜನರ ಹಾಟ್ ಫೆವರೀಟ್. ಆದರೆ ಕಾಲ ಬದಲಾದಂತೆ ಇಡ್ಲಿಯ ಹೊಸ ಅವತಾರಗಳು ಜನರ ಮುಂದೆ ಬಂದು ನಿಂತಿವೆ. ಹಲವಾರು ಕಾಂಬಿನೇಷನ್ ಇಡ್ಲಿಗಳು ಈಗ ಸಿಗುತ್ತವೆ. ಆರೋಗ್ಯದ ದೃಷ್ಟಿಯಿಂದಲೂ ಬಿಸಿ ಇಡ್ಲಿ, ಚಟ್ನಿ, ಸಾಂಬಾರ್ ಅತ್ಯುತ್ತಮ ಎಂಬ ವರದಿಗಳು ಸಹ ಇವೆ.
ಯಾವುದೇ ರೋಗದಿಂದ ಚೇತರಿಸಿಕೊಳ್ಳುವ ಜನರಿಗೆ ವೈದ್ಯರು ಸಲಹೆ ನೀಡುವ ಮೊದಲ ಆಹಾರ ಇಡ್ಲಿ. ಇದು ಬಹಳ ಬೇಗ ಜೀರ್ಣವಾಗುತ್ತದೆ ಮತ್ತು ಹೊಟ್ಟೆ ಭಾರ ಎನ್ನಿಸಿದೇ ದಿನಪೂರ್ತಿ ಚಟುವಟಿಕೆಯಿಂದ ಇರುವಂತೆ ಮಾಡುತ್ತದೆ.
ಇಡ್ಲಿಯಲ್ಲಿ ಫೈಬರ್ ಹೆಚ್ಚಾಗಿರುತ್ತದೆ. ಪ್ರೊಟೀನ್ ಅಂಶ ಸಹ ಬೇಕಾದಷ್ಟಿದೆ. ತೂಕ ಇಳಿಸಬೇಕು ಎನ್ನುವವರಿಗೆ ಇಡ್ಲಿಯೇ ಬೆಸ್ಟ್. ಇಡ್ಲಿಯ ಜೊತೆ ನಾವು ಚಟ್ನಿ, ಸಾಂಬಾರ್ ತಿನ್ನುತ್ತೇವೆ. ತೆಂಗಿನ ಕಾಯಿ ಅಂಶಗಳು ಇದರಲ್ಲಿ ಸೇರಿರುತ್ತದೆ. ಇವುಗಳು ಸಹ ಫೈಬರ್ ಯುಕ್ತವಾಗಿವೆ ಎಂದು ಅಧ್ಯಯನ ಹೇಳುತ್ತದೆ.












Click it and Unblock the Notifications