ಸ್ವದೇಶಿ ಐಟಿ ಕಂಪೆನಿಗಳ ಮೇಲೆ ಗ್ರೀನ್‌ಪೀಸ್ ಕಣ್ಣು!
ನವದೆಹಲಿ, ಜೂ.12: ಪರಿಸರ ಸಂರಕ್ಷಣೆ ಹೆಸರಿನಲ್ಲಿ ಹೋರಾಟ ನಡೆಸುತ್ತಿರುವ ಸರ್ಕಾರೇತರ ಸಂಸ್ಥೆ ಗ್ರೀನ್‌ಪೀಸ್ ದೇಶದ ಆರ್ಥಿಕ ಭದ್ರತೆಗೆ ಅಪಾಯಕಾರಿ ಎನ್ನುವ ವರದಿಯನ್ನು ಕೇಂದ್ರ ಗುಪ್ತಚರ ದಳ (ಐಬಿ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿದೆ.
ದೇಶ ವಿದೇಶಗಳಲ್ಲಿ ಪರಿಸರ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಗ್ರೀನ್‌ಪೀಸ್ ಸಂಘಟನೆ ಬೆಂಗಳೂರು ಸೇರಿದಂತೆ ಸ್ವದೇಶಿ ಐಟಿ ಕಂಪೆನಿಗಳ ಮೇಲೆ ಗುರಿ ಇಟ್ಟಿದ್ದು, ಈ ಕಂಪೆನಿಗಳ ಇ ತ್ಯಾಜ್ಯ ವಿಚಾರವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಲು ತಯಾರಿ ನಡೆಸುತ್ತಿದೆ ಎನ್ನವ ಮಾಹಿತಿ ಐಬಿ ಸಲ್ಲಿಸಿರುವ ವರದಿಯಲ್ಲಿದೆ.
ಐಬಿ ವರದಿಗೆ ಗ್ರೀನ್ ಪೀಸ್ ಸಂಘಟನೆ ಪ್ರತಿಕ್ರಿಯೆ ನೀಡಿದ್ದು ನಾವು ಯಾವುದೇ ದುರುದ್ದೇಶ ಪೂರ್ವಕವಾಗಿ ಹೋರಾಟ ನಡೆಸುವುದಿಲ್ಲ. ಜನರ ಕಷ್ಟಗಳಿಗೆ ಸ್ಪಂದಿಸಿ ಹೋರಾಟ ನಡೆಸುತ್ತಿದ್ದೇವೆ. ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂದು ತಿಳಿಸಿದೆ.[ಝೊಮೊಟೋ ಜಾಹೀರಾತಿನಲ್ಲಿ ಬೆಂಗಳೂರಿಗೆ ಅವಮಾನ]
ಕೇಂದ್ರ ಗುಪ್ತಚರ ದಳ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿರುವ ವರದಿಯಲ್ಲಿರುವ ಅಂಶಗಳನ್ನು ಮುಂದಿನ ಪುಟದಲ್ಲಿ ನೀಡಲಾಗಿದೆ.

ಇ ತ್ಯಾಜ್ಯ ವಿಚಾರದ ಬಗ್ಗೆ ಪ್ರತಿಭಟನೆ:
ಗ್ರೀನ್ ಪೀಸ್ ಸಂಘಟನೆ ದೇಶದಲ್ಲಿರುವ ಐಟಿ ಕಂಪೆನಿಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಆರಂಭಿಸಿದೆ. ಈ ಕಂಪೆನಿಗಳ ಇ -ತ್ಯಾಜ್ಯ ವಿಷಯವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿ ಮಾಡಲು ಪ್ರತಿಭಟನೆ ನಡೆಸಲು ಮುಂದಾಗುತ್ತಿದೆ ಎಂಬ ಮಾಹಿತಿ ಗುಪ್ತಚರ ಇಲಾಖೆಯ ವರದಿಯಲ್ಲಿದೆ.

ದೇಶೀಯ ಕಂಪೆನಿಗಳು ಮಾತ್ರ ಟಾರ್ಗೆಟ್:
ಗ್ರೀನ್ ಪೀಸ್ ದೇಶಿಯ ಕಂಪೆನಿಗಳ ಬಗ್ಗೆ ಮಾತ್ರ ಮಾಹಿತಿ ಸಂಗ್ರಹಣೆ ಆರಂಭಿಸಿದ್ದು ವಿದೇಶಿ ಕಂಪೆನಿಗಳ ವಿಚಾರದಲ್ಲಿ ಮೌನಕ್ಕೆ ಶರಣಾಗಿದೆ.

ದೇಶದಲ್ಲಿ ಪ್ರತಿಭಟನೆ
ಗ್ರೀನ್‌ಪೀಸ್ ದೇಶದಲ್ಲಿರುವ ಇರುವ ಹಲವಾರು ಸಂಘಟನೆಗಳೊಂದಿಗೆ ಕೈ ಜೋಡಿಸಿದ್ದು ಅಣುಸ್ಥಾವರ, ಕಲ್ಲಿದ್ದಲು ಗಣಿಗಾರಿಕೆ, ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ ವಿರುದ್ಧ ಪ್ರತಿಭಟನೆ ನಡೆಸಿದ್ದು ಮುಂದೆ ದೇಶಿಯ ಐಟಿ ಕಂಪೆನಿಗಳ ಇ ತ್ಯಾಜ್ಯದ ಬಗ್ಗೆ ಪ್ರತಿಭಟನೆ ನಡೆಸಲು ಸಿದ್ದತೆ ನಡೆಸುತ್ತಿದೆ ಎಂದು ಗುಪ್ತಚರ ದಳದ ಜಂಟಿ ನಿರ್ದೆಶಕ ಎಸ್.ಎ ರಿಜ್ವಿ ಅವರು ಸಹಿ ಮಾಡಿದ ವರದಿಯಲ್ಲಿದೆ.

ದೇಶದ ಆರ್ಥಿಕ ಭದ್ರತೆಗೆ ಅಪಾಯಕಾರಿ
ಗ್ರೀನ್‌ಪೀಸ್ ಸೇರಿದಂತೆ ಹಲವಾರು ಸಂಘಟನೆಗಳ ಪ್ರತಿಭಟನೆಯಿಂದಾಗಿ ದೇಶದ ಆಂತರಿಕ ಉತ್ಪನ್ನದ(ಜಿಡಿಪಿ) ಮೇಲೆ ಶೇ.2 ರಿಂದ ಶೇ.3ರಷ್ಟು ಪರಿಣಾಮ ಉಂಟಾಗುತ್ತಿದೆ ಎಂದು ಐಬಿ ತನ್ನ ವರದಿಯಲ್ಲಿ ತಿಳಿಸಿದೆ.

ರಾಜಕೀಯಕ್ಕೆ ಎಂಟ್ರಿ:
ವಿದೇಶಗಳಿಂದ ದೇಣಿಗೆ ಸ್ವೀಕರಿಸುವ ಸರ್ಕಾರೇತರ ಸಂಸ್ಥೆಗಳು ರಾಜಕೀಯ ಕ್ಷೇತ್ರದಲ್ಲಿ ತೊಡಗಬಾರದು ಎಂದು ವಿದೇಶಿ ಕೊಡುಗೆ (ನಿಯಂತ್ರಣ) ಕಾಯ್ದೆ 2010[Foreign Contribution (Regulation) Act of 2010] ಹೇಳುತ್ತದೆ. ಆದರೆ ಗ್ರೀನ್ ಪೀಸ್‌ನ ಸಲಹೆಗಾರ ಪಂಕಜ್ ಸಿಂಗ್ ಮಧ್ಯಪ್ರದೇಶ ಸಿದ್ದಿ ಲೋಕಸಭಾ ಕ್ಷೇತ್ರದಿಂದ ಆಮ್ ಆದ್ಮಿ ಪಕ್ಷದ ಪರವಾಗಿ ಸ್ಪರ್ಧಿಸಿದ್ದರು. ಗ್ರೀನ್ ಪೀಸ್ ಪ್ರತಿಭಟನೆ ನಡೆಸಿದ ಸಿಂಗರುಲಿ ಕಲ್ಲಿದ್ದಲು ಗಣಿ ಸಿದ್ದಿ ಲೋಕಸಭಾ ಕ್ಷೇತ್ರದಲ್ಲಿ ಇತ್ತು ಎಂದು ಹೇಳುವ ಮಾಹಿತಿ ವರದಿಯಲ್ಲಿದೆ.

ದೇಶ ವಿರೋಧಿ ಕೃತ್ಯದಲ್ಲಿ ಭಾಗಿಯಾಗಿಲ್ಲ
ನಾವು ಯಾವುದೇ ದುರುದ್ದೇಶ ಪೂರ್ವಕವಾಗಿ ಹೋರಾಟ ನಡೆಸುವುದಿಲ್ಲ. ಜನರ ಕಷ್ಟಗಳಿಗೆ ಸ್ಪಂದಿಸಿ ಹೋರಾಟ ನಡೆಸುತ್ತಿದ್ದೇವೆ. ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿಲ್ಲ.
ಐಬಿ ವರದಿಗೆ ಗ್ರೀನ್‌ಪೀಸ್ ಪ್ರತಿಕ್ರಿಯೆ












Click it and Unblock the Notifications