IAS; ಪ್ರೀತಿ ಗೆಹ್ಲೋಟ್, ಮೌನೀಶ್ ಮೌದ್ಗಿಲ್‌ಗೆ ಹೆಚ್ಚುವರಿ ಹೊಣೆ
ಬೆಂಗಳೂರು, ಅಕ್ಟೋಬರ್ 12: ಕರ್ನಾಟಕ ಸರ್ಕಾರ ಆಡಳಿತ ಯಂತ್ರ ಚುರುಕುಗೊಳಿಸಲು ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆ ನೀಡಿದೆ. ಪ್ರಧಾನ ಕಾರ್ಯದರ್ಶಿ, ಕಾರ್ಯಕಾರಿ ನಿರ್ದೇಶಕ, ನಿರ್ದೇಶಕರು, ವಿಶೇಷ ಆಯುಕ್ತರು ಹೀಗೆ ಹಲವು ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆಯನ್ನು ನೀಡಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶಿಸಿದೆ.
ಬುಧವಾರ ಕರ್ನಾಟಕ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ಮೌನೀಶ್ ಮೌದ್ಗಿಲ್, ಪ್ರೀತಿ ಗೆಹ್ಲೋಟ್, ವಿನೋತ್ ಪ್ರಿಯ, ಸ್ನೇಹಲ್ ಆರ್., ಇಬ್ರಾಹಿಂ ಮೈಗೂರ್ ಸೇರಿ ಒಟ್ಟು 6 ಐಎಎಎಸ್ ಅಧಿಕಾರಿಗಳಿಗೆ ಈಗ ಇರುವ ಹುದ್ದೆಗಳ ಜೊತೆಗೆ ಹೆಚ್ಚುವರಿ ಹೊಣೆ ನೀಡಲಾಗಿದೆ.

ಮೌನೀಶ್ ಮೌದ್ಗಿಲ್ (ಕೆಎನ್ 1998) ಸರ್ಕಾರದ ಪ್ರಧಾನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಡಳಿತ ಸುಧಾರಣೆ), ಬೆಂಗಳೂರು ಈಗಿರುವ ಹುದ್ದೆಯ ಜೊತೆಗೆ ವಿಶೇಷ ಆಯುಕ್ತರು (ಕಂದಾಯ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಜವಾವ್ದಾರಿ ನೀಡಲಾಗಿದೆ.
ವಿನೋತ್ ಪ್ರಿಯ ಆರ್. (ಕೆಎನ್ 2012) ಕಾರ್ಯಕಾರಿ ನಿರ್ದೇಶಕರು, ಸುವರ್ಣ ಆರೋಗ್ಯ ಟ್ರಸ್ಟ್ ಬೆಂಗಳೂರು. ಈಗಿರುವ ಹುದ್ದೆಯ ಜೊತೆಗೆ ವಲಯ ಆಯುಕ್ತರು (ದಕ್ಷಿಣ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಹೆಚ್ಚುವರಿ ಹೊಣೆ ನೀಡಲಾಗಿದೆ.
ಪ್ರೀತಿ ಗೆಹ್ಲೋಟ್ (ಕೆಎನ್ 2016) ವಿಶೇಷ ಆಯುಕ್ತರು (ಪೂರ್ವ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು. ಈಗಿರುವ ಹುದ್ದೆಯ ಜೊತೆಗೆ ವಲಯ ಆಯುಕ್ತರು (ದಾಸರಹಳ್ಳಿ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಹೆಚ್ಚುವರಿ ಹೊಣೆ.
ಕರೆ ಗೌಡ (ಕೆಎನ್ 2012) ನಿರ್ದೇಶಕರು, ಅಟಲ್ ಜನಸೇವಾ ಕೇಂದ್ರ, ಬೆಂಗಳೂರು. ವಲಯ ಆಯುಕ್ತರು (ಯಲಹಂಕ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಹೆಚ್ಚುವರಿ ಹೊಣೆ ನೀಡಲಾಗಿದೆ.
ಸ್ನೇಹಲ್ ಆರ್. (ಕೆಎನ್ 2013) ನಿರ್ದೇಶಖರು (ಐಟಿ), ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ಬೆಂಗಳೂರು. ವಿಶೇಷ ಆಯುಕ್ತರು (ಪೂರ್ವ), ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಹೆಚ್ಚುವರಿ ಹೊಣೆ.
ಇಬ್ರಾಹಿಂ ಮೈಗೂರು (ಕೆಎನ್ 2017), ಕಾರ್ಯದರ್ಶಿ ರಿಯಲ್ ಎಸ್ಟೇಟ್ ರೆಗ್ಯುಲೆಟ್ರಿ ಅಥಾರಿಟಿ, ಬೆಂಗಳೂರು. ವಲಯ ಆಯುಕ್ತರು (ಮಹದೇವಪುರ) ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಹೆಚ್ಚುವರಿ ಹೊಣೆ ನೀಡಲಾಗಿದೆ.












Click it and Unblock the Notifications