• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯಾವುದೇ ರಾಜೀನಾಮೆ ಸ್ವೀಕರಿಸಿಲ್ಲ: ರಮೇಶ್ ಕುಮಾರ್ ಸ್ಪಷ್ಟನೆ

|

ಬೆಂಗಳೂರು, ಜುಲೈ 10: "ನಾನು ಯಾವುದೇ ರಾಜೀನಾಮೆಯನ್ನೂ ಸ್ವೀಕರಿಸಿಲ್ಲ. ಒಂದೇ ದಿನ ಎಲ್ಲವನ್ನೂ ಮಾಡುವುದಕ್ಕೆ ಸಾಧ್ಯವಿಲ್ಲ" ಎಂದು ವಿಧಾನಸಭೆ ಸ್ಪೀಕರ್ ರಮೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸ್ಪೀಕರ್ ರಮೇಶ್ ವಿರುದ್ಧ ಸುಪ್ರೀಂ ಮೊರೆ ಹೋದ ಭಿನ್ನಮತೀಯ ಶಾಸಕರು

ಈಗಾಗಲೇ ಕಾಂಗ್ರೆಸ್-ಜೆಡಿಎಸ್ ನ 13 ಶಾಸಕರು ನೀಡಿದ ರಾಜೀನಾಮೆ ಪತ್ರದಲ್ಲಿ 8 ಅನೂರ್ಜಿತ ಎಂದಿದ್ದ ರಮೇಶ್ ಕುಮಾರ್, ಐವರ ರಾಜೀನಾಮೆ ಪತ್ರ ಮಾತ್ರ ಕ್ರಮಬದ್ಧವಾಗಿದೆ ಎಂದಿದ್ದರು. ಇದೀಗ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜು, ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಅವರು ರಾಜೀನಾಮೆ ನೀಡಿದ್ದು, ಅವರ್ಯಾರ ರಾಜೀನಾಮೆಯನ್ನೂ ತಾವು ಸ್ವೀಕರಿಸಿಲ್ಲ ಎಂದಿದ್ದಾರೆ.

ಅಂದು ಬೋಪಯ್ಯ ಆಡಿದ ಆಟ ಸರಿ, ಈಗ ಸ್ಪೀಕರ್ ಮಾಡುತ್ತಿರುವುದು ತಪ್ಪಾ?

"ನಾನು ಅವರಗೆ(ರಾಜೀನಾಮೆ ನೀಡಿದ ಅತೃಪ್ತ ಶಾಸಕರಿಗೆ) ಜುಲೈ 17ಕ್ಕೆ ಸಮಯ ನಿಗದಿ ಪಡಿಸಿದ್ದೇನೆ. ನಾನು ಕಾನೂನು ಪ್ರಕಾರವೇ ನಿರ್ಧಾರ ತೆಗೆದುಕೊಳ್ಳುತ್ತೇನೆ" ಎಂದು ರಮೇಶ್ ಕುಮಾರ್ ಹೇಳಿದರು.

ಎಂಟು ಶಾಸಕರ ರಾಜೀನಾಮೆಯನ್ನು ಅನೂರ್ಜಿತಗೊಳಿಸಿದ ಸ್ಪೀಕರ್ ಅವರ ಕ್ರಮದ ವಿರುದ್ಧ ಈಗಾಗಲೇ ಅತೃಪ್ತರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು ಈ ಕುರಿತು ಸರ್ವೋಚ್ಚ ನ್ಯಾಯಾಲಯದಲ್ಲಿ ಗುರುವಾರ ವಿಚಾರಣೆ ನಡೆಯಲಿದೆ.

English summary
Karnataka Assembly Speaker KR Ramesh Kumar: I have not accepted any resignation, I can't do it overnight like that. I have given them time on 17th. I'll go through the procedure and take a decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X