ದೂರು ಕೊಟ್ಟಿದ್ರೆ ಸಿದ್ದರಾಮಯ್ಯ ನನ್ನ ಬಳಿ ಮಾತನಾಡಲಿ: ರೇವಣ್ಣ

Recommended Video

      ಎಚ್ ಡಿ ರೇವಣ್ಣ ಬಗ್ಗೆ ಸಿದ್ದರಾಮಯ್ಯಗೆ ಹೋಗಿರುವ ದೂರಿನ ಬಗ್ಗೆ ದಿನೇಶ್ ಗುಂಡೂರಾವ್ ಸ್ಪಷ್ಟನೆ | Oneindia Kannada

      ಬೆಂಗಳೂರು, ನವೆಂಬರ್ 29: ನಾನೂ ಯಾವತ್ತೂ ದ್ವೇಷ ರಾಜಕಾರಣ ಮಾಡಿಲ್ಲ ಹಾಗೇನಾದರೂ ಯಾರಾದರೂ ಸಿದ್ದರಾಮಯ್ಯ ಬಳಿ ದೂರು ಕೊಟ್ಟಿದ್ದರೆ ಅವರು ನನ್ನ ಬಳಿ ಮಾತನಾಡಲಿ ಎಂದು ಸಚಿವ ಎಚ್‌ಡಿ.ರೇವಣ್ಣ ಹೇಳಿದ್ದಾರೆ.

      ಸಿದ್ದರಾಮಯ್ಯ ಅವರನ್ನು ಇಂದು ಭೇಟಿ ಮಾಡಿದ್ದ ಹಾಸನ ಕಾಂಗ್ರೆಸ್ ಮುಖಂಡರು ರೇವಣ್ಣ ಅವರು ಹಾಸನದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ದೂರು ನೀಡಿದ್ದರು ಈ ಬಗ್ಗೆ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.

      ದೂರು ಕೊಟ್ಟವರು ಯಾರು, ಯಾವ ಕಾರಣಕ್ಕಾಗಿ ದೂರು ನೀಡಿದ್ದಾರೆ ಎಂಬುದು ಗೊತ್ತಿಲ್ಲ, ಹಾಗೇನಾದರೂ ಇದ್ದರೆ ಸಿದ್ದರಾಮಯ್ಯ ನನ್ನನ್ನು ಕರೆಸಿ, ದೂರು ಕೊಟ್ಟವರನ್ನೂ ಕರೆಸಿ ಮುಂದೆ ಕೂರಿಸಿ ಮಾತನಾಡಲಿ, ಉತ್ತರ ಕೊಡುತ್ತೇನೆ ಎಂದು ರೇವಣ್ಣ ಹೇಳಿದ್ದಾರೆ.

      I did not do any revenge politics in Hassan: HD Revanna

      ಹಾಸನದಲ್ಲಿ ಯಾವ ಗೊಂದಲವೂ ಇಲ್ಲ, ಸಣ್ಣದನ್ನು ದೊಡ್ಡದು ಮಾಡುವ ಅಗತ್ಯವಿಲ್ಲ. ಜಿಲ್ಲೆಯಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತಿದ್ದೇವೆ ಎಂದು ರೇವಣ್ಣ ಹೇಳಿದರು.

      ಇದೇ ವೇಳೆ, ಹಾಸನ, ಮೈಸೂರು, ರಾಮನಗರ, ಮಂಡ್ಯ ಜಿಲ್ಲೆಗಳಿಗೆ ಹೆಚ್ಚಿನ ಅನುದಾನ ತೆಗೆದುಕೊಂಡಿರುವ ಬಗ್ಗೆ ಮಾತನಾಡಿದ ಅವರು, ಹಾಗೇನೂ ಪಕ್ಷಪಾತ ಮಾಡಿಲ್ಲ ಎಲ್ಲ ಜಿಲ್ಲೆಗಳಿಗೂ ಅವಶ್ಯಕತೆಗೆ ಅನುಗುಣವಾಗಿ ಅನುದಾನ ಪಡೆಯಲಾಗಿದೆ ಎಂದರು.

      ಯಾವ ಜಿಲ್ಲೆಯಲ್ಲಿ ಯಾವ ಕಾಮಗಾರಿಗಳು ಪ್ರಗತಿಯಲ್ಲಿವೆ, ಯಾವ ಜಿಲ್ಲೆಗೆ ಎಷ್ಟು ಅನುದಾನವನ್ನು ಇಲಾಖೆಯಿಂದ ಹಂಚಿಕೆ ಮಾಡಿದ್ದೇವೆ ಮತ್ತು ಪಡೆದಿದ್ದೇವೆ ಎಂಬುದರ ಬಗ್ಗೆ ಶೀಘ್ರವಾಗಿ ನಾನೇ ಅಂಕಿ-ಅಂಶಗಳ ಜೊತೆ ಮಾಧ್ಯಮದವರ ಮುಂದೆ ಹಾಜರಾಗುತ್ತೇನೆ ಎಂದು ಅವರು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+