ಸದನಕ್ಕೆ ಬರುವುದಿಲ್ಲ: ಸ್ಪೀಕರ್‌ಗೆ ಆಸ್ಪತ್ರೆಯಿಂದ ಶಾಸಕ ಶ್ರೀಮಂತ ಪಾಟೀಲ್ ಪತ್ರ

ಬೆಂಗಳೂರು, ಜುಲೈ 19: ರಾತ್ರೋರಾತ್ರಿ ಕಾಂಗ್ರೆಸ್‌ಗೆ ಕೈಕೊಟ್ಟು ರೆಸಾರ್ಟ್‌ನಿಂದ ನಾಪತ್ತೆಯಾಗಿ ಮುಂಬೈ ಆಸ್ಪತ್ರೆಯಲ್ಲಿ ಬೆಡ್‌ ಮೇಲೆ ಮಲಗಿದ ಶಾಸಕ ಶ್ರೀಮಂತ ಪಾಟೀಲ್ ಅವರು ಇಂದು ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಮೇಲ್ ಮೂಲಕ ಪತ್ರ ರವಾನಿಸಿದ್ದಾರೆ. ಪತ್ರವನ್ನು ಸದನಕ್ಕೆ ರಮೇಶ್ ಕುಮಾರ್ ಅವರು ಓದಿ ತಿಳಿಸಿದರು.

Photos : ಸದನದಲ್ಲಿ ಗದ್ದಲ, ಅಹೋರಾತ್ರಿ ಧರಣಿ, ಮಾರ್ನಿಂಗ್ ವಾಕ್

ನಿನ್ನೆ ಸದನದಲ್ಲಿ ಶ್ರೀಮಂತ ಪಾಟೀಲ್ ಅವರು ಆಸ್ಪತ್ರೆಯ ಬೆಡ್‌ ಮೇಲೆ ಮಲಗಿದ ಚಿತ್ರಗಳು ರಾರಾಜಿಸಿದುವು. ಅಷ್ಟೆ ಅಲ್ಲದೆ, ಶ್ರೀಮಂತ ಪಾಟೀಲ್ ಅವರು ನಿನ್ನೆ ಸ್ಪೀಕರ್ ಅವರಿಗೆ ಕೈಬರಹದಲ್ಲಿ ಕಳುಹಿಸಿದ್ದ ಪತ್ರ ನಿಯಬದ್ಧವಾಗಿಲ್ಲವೆಂದು ಸ್ಪೀಕರ್ ಅವರೂ ಸಹ ಬೇಸರ ವ್ಯಕ್ತಪಡಿಸಿದ್ದರು. ಹಾಗಾಗಿ ಇಂದು ಶ್ರೀಮಂತ ಪಾಟೀಲ್ ಅವರು ಪತ್ರ ರವಾನಿಸಿದ್ದಾರೆ.

ಗುರುವಾರ ರಾತ್ರಿ ರೆಸಾರ್ಟ್‌ನಿಂದ ತುರ್ತು ಕೆಲಸದ ಮೇರೆಗೆ ಚೆನ್ನೈಗೆ ತೆರಳುತ್ತಿದ್ದೆ ಆಗ ಏಕಾ-ಏಕಿ ಎದೆನೋವು ಕಾಣಿಸಿಕೊಂಡಿತು. ಕೂಡಲೇ ಮುಂಬೈನ ನನ್ನ ಆಪ್ತ ವೈದ್ಯರಿಗೆ ಸಲಹೆ ಕೇಳಿದೆ ಅವರು ಆಸ್ಪತ್ರೆಗೆ ಆಗಮಿಸುವಂತೆ ಹೇಳಿದರು ಹಾಗಾಗಿ ನಾನು ರಾತ್ರಿಯೇ ಆಸ್ಪತ್ರೆಗೆ ಬಂದೆ ಎಂದು ಪತ್ರದಲ್ಲಿ ಶ್ರೀಮಂತ ಪಾಟೀಲ್ ವಿವರಿಸಿದ್ದಾರೆ.

ನಿನ್ನೆ ಸದನದಲ್ಲಿ ಆರೋಪ ಮಾಡಿದಂತೆ ನನ್ನನ್ನು ಯಾವ ಬಿಜೆಪಿ ಸದಸ್ಯರು ಸಂಪರ್ಕ ಮಾಡಿಲ್ಲ, ನನ್ನನ್ನು ಯಾರೂ ಅಪಹರಣ ಸಹ ಮಾಡಿಲ್ಲ, ನಾನು ಕಾಂಗ್ರೆಸ್‌ ಪಕ್ಷದ ಸದಸ್ಯನೇ ಆಗಿದ್ದೇನೆ ಎಂದು ಶ್ರೀಮಂತ ಪಾಟೀಲ್ ಅವರು ಪತ್ರದಲ್ಲಿ ಹೇಳಿದ್ದಾರೆ.

ಅಧಿವೇಶನಕ್ಕೆ ಗೈರಾಗುತ್ತೇನೆ: ಶ್ರೀಮಂತ ಪಾಟೀಲ್

ಅಧಿವೇಶನಕ್ಕೆ ಗೈರಾಗುತ್ತೇನೆ: ಶ್ರೀಮಂತ ಪಾಟೀಲ್

ನಿನ್ನೆಯ ಘಟನೆ ಅಚಾನಕ್ಕಾಗಿ ಆಗಿದ್ದ ಕಾರಣ ನಾನು ಸೂಕ್ತ ನಿಯಮದ ಪ್ರಕಾರ ಲೆಟರ್‌ ಹೆಡ್‌ನಲ್ಲಿ ಗೈರುಹಾಜರಿ ಪತ್ರವನ್ನು ಕಳುಹಿಸಲು ಆಗುತ್ತಿಲ್ಲ ಎಂದಿರುವ ಶ್ರೀಮಂತ ಪಾಟೀಲ್, ಅನಾರೋಗ್ಯದ ಕಾರಣ ಆಸ್ಪತ್ರೆಯಲ್ಲಿರುವ ನಾನು ಅಧಿವೇಶನದ ಇನ್ನುಳಿದ ಅವಧಿಗೆ ಗೈರಾಗುತ್ತೇನೆ ಎಂದು ಸ್ಪೀಕರ್ ಅವರಿಗೆ ಮಾಹಿತಿ ನೀಡಿದ್ದಾರೆ.

ರೆಸಾರ್ಟ್‌ನಿಂದ ಏಕಾ-ಏಕಿ ಕಾಣೆಯಾಗಿದ್ದ ಶ್ರೀಮಂತ್ ಪಾಟೀಲ್

ರೆಸಾರ್ಟ್‌ನಿಂದ ಏಕಾ-ಏಕಿ ಕಾಣೆಯಾಗಿದ್ದ ಶ್ರೀಮಂತ್ ಪಾಟೀಲ್

ಕಾಂಗ್ರೆಸ್ ಶಾಸಕ ಶ್ರೀಮಂತ ಪಾಟೀಲ್ ಅವರು ದೇವನಹಳ್ಳಿ ಬಳಿಯ ಪ್ರಕೃತಿ ರೆಸಾರ್ಟ್‌ನಿಂದ ಗುರುವಾರ ರಾತ್ರಿ ಕಾಣೆ ಆಗಿದ್ದರು. ಆ ನಂತರ ಬೆಳಿಗ್ಗೆ ಅವರು ಮುಂಬೈನ ಆಸ್ಪತ್ರೆಯಲ್ಲಿ ದಾಖಲಾಗಿರುವ ವಿಷಯ ಬಹಿರಂಗವಾಯಿತು. ಸದನದಲ್ಲಿ ಈ ವಿಷಯ ಪ್ರಸ್ತಾಪ ಮಾಡಿದ್ದ ಡಿ.ಕೆ.ಶಿವಕುಮಾರ್, ಬಿಜೆಪಿಯು ನಮ್ಮ ಶಾಸಕನನ್ನು ಅಪಹರಣ ಮಾಡಿದೆ ಎಂದು ಆರೋಪಿಸಿದರು.

ಶ್ರೀಮಂತ ಪಾಟೀಲ್ ಅಪಹರಣ ಆಗಿದೆಯೆಂದು ದೂರು

ಶ್ರೀಮಂತ ಪಾಟೀಲ್ ಅಪಹರಣ ಆಗಿದೆಯೆಂದು ದೂರು

ಶ್ರೀಮಂತ ಪಾಟೀಲ್ ಅವರನ್ನು ಬಿಜೆಪಿಯು ಅಪಹರಿಸಿದೆ ಎಂದು ಕಾಂಗ್ರೆಸ್‌ ಪೊಲೀಸ್ ದೂರು ಸಹ ನೀಡಿತ್ತು. ಸದನದಲ್ಲಿಯೂ ಸಹ ಸ್ಪೀಕರ್ ಅವರು ಗೃಹ ಸಚಿವರಿಗೆ ಘಟನೆಯ ತನಿಖೆ ನಡೆಸುವಂತೆ ಸೂಚಿಸಿದರು. ಅಂತೆಯೇ ಇಂದು ಬೆಳಿಗ್ಗೆ ಕರ್ನಾಟಕ ಪೊಲೀಸ್ ಅಧಿಕಾರಿಗಳು ಶ್ರೀಮಂತ ಪಾಟೀಲ್ ಅವರು ಇರುವ ಆಸ್ಪತ್ರೆಗೆ ಹೋಗಿ ಅಲ್ಲಿ ಅವರ ಹೇಳಿಕೆ ಪಡೆದುಕೊಂಡಿದ್ದಾರೆ.

ಸದನದಲ್ಲಿ ನಿನ್ನೆ ರಾರಾಜಿಸಿದ ಶ್ರೀಮಂತ್ ಪಾಟೀಲ್ ಚಿತ್ರ

ಸದನದಲ್ಲಿ ನಿನ್ನೆ ರಾರಾಜಿಸಿದ ಶ್ರೀಮಂತ್ ಪಾಟೀಲ್ ಚಿತ್ರ

ನಿನ್ನೆ ಭೋಜನ ವಿರಾಮದ ನಂತರ ಸದನದಲ್ಲಿ ಶ್ರೀಮಂತ್ ಪಾಟೀಲ್ ಬೆಡ್ ಮೇಲೆ ಮಲಗಿರುವ ಚಿತ್ರ, ಹಾಗೂ ಇಂಡಿಗೋ ವಿಮಾನದಲ್ಲಿ ಬಿಜೆಪಿಯ ಲಕ್ಷ್ಮಣ ಸವಧಿ ಅವರೊಂದಿಗೆ ಶ್ರೀಮಂತ್ ಪಾಟೀಲ್ ಪ್ರಯಾಣಿಸಿರುವ ಟಿಕೆಟ್‌ನ ಚಿತ್ರಗಳನ್ನು ಹಿಡಿದು ಆಡಳಿತ ಪಕ್ಷದ ಸದಸ್ಯರು ಪ್ರತಿಭಟನೆ ಮಾಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+