ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಧ್ಯಕ್ಷ ಸ್ಥಾನಕ್ಕೆ ನಾನು ಲಾಬಿ ನಡೆಸಿಲ್ಲ: ಡಿಕೆ ಶಿವಕುಮಾರ್

ಅಧ್ಯಕ್ಷ ಸ್ಥಾನಕ್ಕೆ ನಾನು ಅರ್ಜಿ ಹಾಕಿಲ್ಲ, ಹೈಕಮಾಂಡ್ ಎದುರು ಸ್ಥಾನಕ್ಕಾಗಿ ಲಾಬಿ ನಡೆಸಿಲ್ಲ. ಆದರೆ, ಪಕ್ಷ ನೀಡುವ ಯಾವುದೇ ಸ್ಥಾನವನ್ನು ನಿಷ್ಠೆಯಿಂದ ನಿಭಾಯಿಸುವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

By Mahesh
|
Google Oneindia Kannada News

ಬೆಂಗಳೂರು, ಏಪ್ರಿಲ್ 17: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ಹೆಸರುಗಳು ಕೇಳಿ ಬಂದಿರುವ ಹಿನ್ನಲೆಯಲ್ಲಿ ಸೋಮವಾರದಂದು ತಮ್ಮ ನಿವಾಸದಲ್ಲಿ ಇಂಧನ ಸಚಿವ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.

'ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ಲಾಬಿ ನಡೆಸಲು ದೆಹಲಿಗೆ ತೆರಳುವುದಿಲ್ಲ. ಆದರೆ, ಪಕ್ಷ ನೀಡುವ ಯಾವುದೇ ಸ್ಥಾನವನ್ನು ನಿಷ್ಠೆಯಿಂದ ನಿಭಾಯಿಸುವೆ' ಎಂದು ಡಿಕೆ ಶಿವಕುಮಾರ್ ಹೇಳಿದರು.[ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ಹೆಸರು ಸೇರ್ಪಡೆ?]

I am not lobbying for KPCC president post : DK Shivakumar

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಚಿವ. ಎಂ.ಬಿ. ಪಾಟೀಲ್ ಹಾಗೂ ಹೆಚ್ ಸಿ. ಮಹಾದೇವಪ್ಪ ಹೆಸರುಗಳು ಕೇಳಿ ಬಂದಿದ್ದು, ಸಿಎಂ ಸಿದ್ದರಾಮಯ್ಯ ಒಲವು ಹೊಂದಿದ್ದಾರೆ ಎಂಬ ಸುದ್ದಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಯಾರೇ ಅಧ್ಯಕ್ಷರಾದರೂ ನನಗೆ ಬೇಸರವಿಲ್ಲ. ಸಿಎಂ ಸಿದ್ದರಾಮಯ್ಯ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಾನು ಬೇಡ ಎಂದು ಎಲ್ಲಿಯೂ ಹೇಳಿಲ್ಲ. ಆದರೆ, ಪಕ್ಷ ಕೊಟ್ಟ ಎಲ್ಲ ಜವಾಬ್ದಾರಿಯನ್ನು ಇದುವರೆಗೂ ಸಮರ್ಥವಾಗಿ ನಾನು ನಿಭಾಯಿಸಿದ್ದೇನೆ. ಈಗಲೂ ನಿರ್ವಹಿಸುತ್ತೇನೆ ಎಂದು ಹೇಳಿದರು.

'ಕೆಲವರು ನನ್ನ ಮುಂದೆ ಚೆನ್ನಾಗಿ ಮಾತಾಡಿ, ಹಿಂದೆ ಪಿತೂರಿ ಮಾಡುತ್ತಾರೆ. ಕೆಲವರು ನಾನು ಅಧ್ಯಕ್ಷರಾಗಬೇಕೆಂದು ಹೇಳುತ್ತಾರೆ. ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ ಅಧ್ಯಕ್ಷ ಸ್ಥಾನಕ್ಕೆ ನಾನು ಅರ್ಜಿ ಹಾಕ್ಕೊಂಡು ಕುಳಿತಿಲ್ಲ. ಹೈಕಮಾಂಡ್ ಬಳಿ ಕೂಡ ಹೋಗೊಲ್ಲ ಎಂದರು.

ಕೆಲವರು ನನ್ನ ಮುಂದೆ ಚೆನ್ನಾಗಿ ಮಾತಾಡಿ, ಹಿಂದೆ ಪಿತೂರಿ ಮಾಡುತ್ತಾರೆ. ಕೆಲವರು ನಾನು ಅಧ್ಯಕ್ಷರಾಗಬೇಕೆಂದು ಹೇಳುತ್ತಾರೆ. ಮತ್ತೆ ಕೆಲವರು ವಿರೋಧ ವ್ಯಕ್ತಪಡಿಸುತ್ತಾರೆ. ಆದರೆ ಅಧ್ಯಕ್ಷ ಸ್ಥಾನಕ್ಕೆ ನಾನು ಅರ್ಜಿ ಹಾಕ್ಕೊಂಡು ಕುಳಿತಿಲ್ಲ. ಹೈಕಮಾಂಡ್ ಬಳಿ ಕೂಡ ಹೋಗೊಲ್ಲ ಎಂದರು.

English summary
I am not lobbying for KPCC president post and I have not applied for it said Energy minister DK Shivakumar today at his residence in Bengaluru. He clarified that he will work in any position given by the party high command.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X