ನಿಯಮ ಉಲ್ಲಂಘಿಸಿದ NCC : ಪ್ರಕಾಶ್ ಜಾವಡೇಕರ್ ಗೆ ದೂರು
ಬೆಂಗಳೂರು : ಸೆ.12ರಂದು ನಡೆದ 'ನಾನು ಗೌರಿ' ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ಸೆಂಟ್.ಜಾನ್ಸ್ ಕಾಲೇಜಿನ NCC ತಂಡವು, ಘೋಷಣಾ ಪತ್ರಗಳನ್ನು ಪ್ರದರ್ಶಿಸುವ ಮೂಲಕ ಪ್ರತಿಭಟನೆಯಲ್ಲಿ ತನ್ನ ದನಿಯನ್ನು ಸೇರಿಸಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಿಟಿಜನ್ಸ್ ಆಫ್ ಡೆಮಾಕ್ರಸಿ (Citizens for Democracy) ಸಂಘಟನೆಯು, ಪ್ರಕರಣಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೇಂದ್ರ ಮಾನವಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ದೂರು ನೀಡಿದ್ದಾರೆ.

NCC act 1948ರ ಅನ್ವಯ, ಯಾವುದೇ ವಿದ್ಯಾರ್ಥಿಯು NCC ಸಮವಸ್ತ್ರವನ್ನು ಧರಿಸಿ ಪ್ರತಿಭಟನೆಗಳು, ರಾಜಕೀಯ ಸಭೆಗಳಲ್ಲಿ ಭಾಗವಹಿಸುವಂತಿಲ್ಲ. ಆದರೆ ಸೆಂಟ್ರಲ್ ಕಾಲೇಜು ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸೆಂಟ್ ಜೋಸೆಫ್ ಕಾಲೇಜಿನ NCC ತಂಡವು ಪ್ರತಿಭಟನಾಕಾರರ ಪರವಾಗಿ ಚಟುವಟಿಕೆಯಿಂದ ಓಡಾಡುತ್ತಾ, ಕರಪತ್ರಗಳನ್ನು, ಘೋಷಣಾ ಪತ್ರಗಳನ್ನು ಪ್ರದರ್ಶಿಸಿತ್ತು.

ಸಾಮಾಜಿಕ ಜಾಲತಾಣಗಳಲ್ಲೂ ಈ ವಿಡಿಯೋ ಹರಿದಾಡಿ ಓಡಾಡಿ ಸಾರ್ವಜನಿಕರ ಹುಬ್ಬೇರಿಸಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಇದೀಗ ಸಿಟಿಜನ್ ಫಾರ್ ಡೆಮಾಕ್ರಸಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ದೂರು ನೀಡಿ, ದೂರಿನ ಪ್ರತಿಯನ್ನು ಪ್ರಧಾನಮಂತ್ರಿ ಕಚೇರಿ, ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ನೀಡಿದೆ.











Click it and Unblock the Notifications