ಪ್ರಧಾನಿ ಅಭ್ಯರ್ಥಿ ಮೋದಿಗೆ ರಾಜೀವ್ ಬೆಂಬಲ
ಬೆಂಗಳೂರು, ಮಾ. 27: ಸಂಸದ ಹಾಗೂ ಸುವರ್ಣ ಚಾನೆಲ್ ನ ಮುಖ್ಯಸ್ಥ ರಾಜೀವ್ ಚಂದ್ರಶೇಖರ್ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಜೈ ಕಾರ ಹಾಕಿದ್ದಾರೆ. ಚುನಾವಣೆ ಬಗ್ಗೆ, ಸಾಮಾಜಿಕ ಕಳಕಳಿ ಬಗ್ಗೆ ಸಾರ್ವಜನಿಕರಿಗೆ ನಿರಂತರವಾಗಿ ಜಾಗೃತಿ ಮೂಡಿಸುತ್ತಾ ಬಂದಿರುವ ರಾಜ್ಯಸಭೆ ರಾಜೀವ್ ಚಂದ್ರಶೇಖರ್ ಅವರು ಮೋದಿ ಅವರಿಗೆ ಬೆಂಬಲ ಸೂಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹಾಕಿದ್ದಾರೆ.
2006 ರಲ್ಲಿ ಪ್ರಥಮ ಬಾರಿಗೆ ಸಂಸತ್ತು ಪ್ರವೇಶಿಸಿದ ನಾನು 2012ರಲ್ಲಿ ಎರಡನೇ ಬಾರಿಗೆ ರಾಜ್ಯಸಭೆಗೆ ಆಯ್ಕೆಯಾದೆ. ನಾನು ಭಾರತದ ಚುನಾವಣಾ ಪ್ರಕ್ರಿಯೆ ಹಾಗೂ ಪ್ರಜಾಪ್ರಭುತ್ವವನ್ನು ಬಲವಾಗಿ ಪ್ರತಿಪಾದಿಸುವ ನಾಗರಿಕನಾಗಿದ್ದೇನೆ. ಪಕ್ಷೇತರ ಅಭ್ಯರ್ಥಿಯಾಗಿದ್ದುಕೊಂಡು ಯುಪಿಎ ಸರ್ಕಾರದ ಕೆಲವು ನಿರ್ಣಯಗಳನ್ನು ಬೆಂಬಲಿಸಿದ್ದೇನೆ ಉದಾ. ಎಫ್ ಡಿಐ, ಆದರೆ, ಬಿಜೆಪಿ ಕೈಗೊಂಡ ಜನಹಿತ ನಿರ್ಧಾರಕ್ಕೂ ನಾನು ಸಹಕರಿಸಿದ್ದೇನೆ ಎಂದು ತಮ್ಮ ವೆಬ್ ತಾಣದಲ್ಲಿ ರಾಜೀವ್ ಬರೆದುಕೊಂಡಿದ್ದಾರೆ. ಫೇಸ್ ಬುಕ್ ಪುಟದಲ್ಲಿ ರಾಜೀವ್ ಹಾಕಿರುವ ಪೋಸ್ಟ್ ನೋಡಿ... ಇನ್ನಷ್ಟು ವಿವರ ಮುಂದಿದೆ...

ಎಂಎಂಎಸ್ ದುರ್ಬಳಕೆ ಕಡಿವಾಣಕ್ಕೆ ಮಸೂದೆ
ಖಾಸಗಿ ಹಕ್ಕು ಮಸೂದೆ, 2011 ಅಡಿಯಲ್ಲಿ ಮೊಬೈಲ್ ಫೋನ್ ಮೂಲಕ ಮಲ್ಟಿ ಮೀಡಿಯಾ ಸಂದೇಶಗಳನ್ನು ದುಷ್ಕೃತ್ಯಗಳಿಗೆ ಬಳಸುವುದನ್ನು ತಡೆಗಟ್ಟಲು ಖಾಸಗಿ ಹಕ್ಕು ಮಸೂದೆಯನ್ನು ರಾಜ್ಯಸಭೆಯಲ್ಲಿ ರಾಜೀವ್ ಚಂದ್ರಶೇಖರ್ ಅವರು ಮಂಡಿಸಿದ್ದಾರೆ. ಸಂಗಾತಿಗಳ ಪ್ರಣಯ ಚೇಷ್ಟೆಗಳು, ಏಕಾಂತ ಚಿತ್ರಗಳು ಹಾಗೂ ಕ್ಲಿಪ್ಪಿಂಗ್ ಗಳನ್ನು ತೆಗೆದು ನಂತರ ಅವರನ್ನು ಬ್ಲ್ಯಾಕ್ ಮೇಲ್ ಮಾಡುವಂಥವರಿಗೆ ಕಠಿಣ ಶಿಕ್ಷೆ ನೀಡಲು ಕಾನೂನು ಜಾರಿಗೆ ತರಬೇಕು ಎಂದು ರಾಜ್ಯ ಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಈ ಖಾಸಗಿ ಹಕ್ಕು ಮಸೂದೆ ಮೂಲಕ ಪ್ರತಿಪಾದಿಸಿದ್ದರು.

ಸಂಸದ ರಾಜೀವ್ ಪಕ್ಷಾತೀತವಾಗಿ ನೆರವು
* 2009 ರ ಲೋಕಸಭೆ ಚುನಾವಣೆಯಲ್ಲಿ ಅನಂತ್ ಕುಮಾರ್ ಅವರು ಸಮರ್ಥ ಅಭ್ಯರ್ಥಿ ABIDe ಸಂಸ್ಥೆ ಪರ ಕಾರ್ಯ ನಿರ್ವಹಿಸುವಾಗ ಹತ್ತಿರದಿಂದ ಬಲ್ಲೆ. ಶ್ರಮಜೀವಿ ಅನಂತ್ ಗೆ ಮತ ನೀಡಿ ಎಂದು ಬೆಂಬಲ ನೀಡಿದ್ದರು.
* 2013ರ ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲೂ ಬಿಜೆಪಿ ಸರ್ಕಾರ ರಚನೆಗೆ ರಾಜೀವ್ ನೆರವು
* 2013ರಲ್ಲಿ ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಪರ ದನಿ ಎತ್ತಿದ್ದರು.

ಭಾರತೀಯ ಯೋಧರಿಗೆ ಮತದಾನದ ಹಕ್ಕು
ಲೋಕಸಭೆ ಚುನಾವಣೆ ವೇಳೆಯಲ್ಲಿ ಕರ್ತವ್ಯ ನಿರತ ಭಾರತೀಯ ಯೋಧರು ತಾವು ಇರುವ ಊರಿನಲ್ಲೇ ಮತದಾನದ ಮಾಡುವ ಹಕ್ಕು ನೀಡುವಂತೆ ಆಯೋಗಕ್ಕೆ, ಸರ್ಕಾರಕ್ಕೆ ಮನವಿ ಸಲ್ಲಿಸಿದ್ದ ರಾಜೀವ್ ಅವರ ಪರ ಕೋರ್ಟಿನಿಂದ ಆದೇಶ ಹೊರಬಂದಿದೆ. ಯೋಧರಿಗೆ ಮತದಾನದ ಹಕ್ಕು ಕೊಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.

ಫೇಸ್ ಬುಕ್, ಟ್ವಿಟ್ಟರ್ ಮೂಲಕ ಮತದಾನದ ಬಗ್ಗೆ
Awakened, Aware , Active, Informed & determined citizens can create change. Voting in Elections 2014 can create a new Government & new direction for our country! Register to vote. If you are a resident of Karnataka, click http://voterreg.kar.nic.in/ & register before Sunday, March 16, the last date for voter registration. ಎಂದು ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಮತದಾನದ ಹಕ್ಕಿನ ಬಗ್ಗೆ ಜಾಗೃತಿ ಮೂಡಿಸುತ್ತಿರುವ ರಾಜೀವ್
| Array |
ಆಧಾರ್ ಬಗ್ಗೆ ರಾಜೀವ್ ಅವರ ಅಭಿಮತ
ನಂದನ್ ನಿಲೇಕಣಿ ಅವರು ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಬಗ್ಗೆ ಎರಡು ಮಾತನಾಡದ ರಾಜೀವ್ ಅವರು ಆಧಾರ್ ಯೋಜನೆಯ ಹುಳುಕುಗಳನ್ನು ಸಾರ್ವಜನಿಕರ ಮುಂದಿಟ್ಟಿದ್ದಾರೆ.

ಎಎಪಿಯಿಂದ ಲೋಕಸಭೆ ಟಿಕೆಟ್ ಆಫರ್
ಎಎಪಿಯಿಂದ ಲೋಕಸಭೆ ಟಿಕೆಟ್ ಆಫರ್ ಬಂದಿದ್ದು ನಿಜ. ಆಮ್ ಆದ್ಮಿ ಪಕ್ಷದ ಕಾಳಜಿಯನ್ನು ನಾನು ಮೆಚ್ಚಿದ್ದೇನೆ. ಪಾರ್ಟಿ ಫಂಡ್ ನೀಡಿದ್ದೇನೆ. ಆದರೆ, ಲೋಕಸಭೆ ಚುನಾವಣೆಗೆ ಬೆಂಗಳೂರಿನಿಂದ ಸ್ಪರ್ಧಿಸುವಂತೆ ಎಎಪಿ ಮಾಡಿಕೊಂಡ ಮನವಿಯನ್ನು ತಿರಸ್ಕರಿಸಿದ್ದೇನೆ ಎಂದು ರಾಜೀವ್ ಹೇಳಿಕೊಂಡಿದ್ದಾರೆ.

ಅಭಿಮಾನಿಗಳಿಂದ ರಾಜೀವ್ ಗೆ ಬಹುಪರಾಕ್
ಬಿಜೆಪಿ ಅಭ್ಯರ್ಥಿ ಮೋದಿ ಅವರನ್ನು ನಾನು ಬೆಂಬಲಿಸುತ್ತೇನೆ ಎಂದು ಫೇಸ್ ಬುಕ್ ನಲ್ಲಿ ರಾಜೀವ್ ಹಾಕಿರುವ ಪೋಸ್ಟ್ ಗೆ ಈ ಸಮಯಕ್ಕೆ 16,460ಕ್ಕೂ ಅಧಿಕ ಲೈಕುಗಳು 1935 ಷೇರುಗಳು ಹಾಗೂ 882ಕ್ಕೂ ಅಧಿಕ ಕಾಮೆಂಟುಗಳು ಬಂದಿವೆ. ಇದೇ ಟ್ವಿಟ್ಟರ್ ನಲ್ಲೂ 622 ರೀಟ್ವೀಟ್ 302 ಜನ ಫೇವರೀಟ್ ಮಾಡಿದ್ದಾರೆ.
ಮೋದಿಯನ್ನು ರಾಜೀವ್ ಏಕೆ ಬೆಂಬಲಿಸುತ್ತಿದ್ದಾರೆ ಎಂಬುದರ ಬಗ್ಗೆ ಅವರ ವೆಬ್ ತಾಣದಲ್ಲಿ ವಿವರ ಇದೆ ಓದಿ












Click it and Unblock the Notifications