ಹಿಪ್ನೋ ಥೆರಪಿ: ಪೂರ್ವ ಜನ್ಮಯಾನ, ಏನಿದು ಚಿಕಿತ್ಸಾ ವಿಧಾನ?
ಬೆಂಗಳೂರು, ಮಾರ್ಚ್ 9: ಹಿಪ್ನೋ ಥೆರಪಿ ಎಂಬ ಚಿಕಿತ್ಸಾ ವಿಧಾನದ ಬಗ್ಗೆ ಒಂದು ಸಂದರ್ಶನವನ್ನು ಒನ್ ಇಂಡಿಯಾ ಕನ್ನಡದಿಂದ ಮಾಡಲಾಗಿದೆ. ನೀವೆಲ್ಲಾದರೂ ಪುನರ್ಜನ್ಮ ಎಂಬ ಕಾರ್ಯಕ್ರಮವನ್ನು ಟಿವಿಯಲ್ಲಿ ನೋಡಿದ್ದರೆ, ಎಲ್ಲಾದರೂ ಓದಿದ್ದರೆ ಈಗಿನ ಸಂದರ್ಶನ ಮತ್ತಷ್ಟು ಸುಲಭವಾಗಿ ಅರ್ಥವಾಗುತ್ತದೆ.
ಬನಶಂಕರಿ 3ನೇ ಹಂತದಲ್ಲಿ ವಾಸವಿರುವ, ಹಿಪ್ನೋ ಥೆರಪಿ ಅಭ್ಯಾಸ ಮಾಡುತ್ತಿರುವ ಸುಬ್ರಹ್ಮಣ್ಯ ಸ್ವಾಮಿ ಎಂಬುವರನ್ನು ಸಂದರ್ಶನ ಮಾಡಲಾಗಿದೆ. ಇಲ್ಲಿ ವ್ಯಕ್ತವಾಗಿರುವ ಎಲ್ಲ ಅಂಶಗಳು ಅವರದೇ. ಈ ಚಿಕಿತ್ಸೆಯ ಪ್ರಚಾರವನ್ನು ಒನ್ ಇಂಡಿಯಾ ಕನ್ನಡ ಮಾಡುತ್ತಿಲ್ಲ. ಚಿಕಿತ್ಸೆ ಆಯ್ಕೆಯು ಓದುಗರಿಗೆ ಬಿಟ್ಟಿದ್ದು.

ಆದರೆ, ಹೀಗೊಂದು ಚಿಕಿತ್ಸಾ ವಿಧಾನವಿದೆ ಎಂಬ ಮಾಹಿತಿ ಮೇರೆಗೆ ತಜ್ಞರೊಬ್ಬರನ್ನು ಮಾತನಾಡಿಸಿ, ವಿವರವನ್ನು ಇಲ್ಲಿ ದಾಖಲಿಸುತ್ತಿದ್ದೇವೆ. ಅವರೇ ಹೇಳುವಂತೆ ಗಾಂಧಿ ಬದುಕಿದ್ದಾಗಲೇ ಈ ಬಗ್ಗೆ ಚರ್ಚೆಯಾಗಿ, ಪುನರ್ಜನ್ಮ ಅನ್ನೋದು ಇದೆ ಎಂದು ಆಗ ರಚನೆ ಮಾಡಿದ್ದ ಸಂಸದೀಯ ಸಮಿತಿಯೊಂದು ವರದಿ ಕೂಡ ಕೊಟ್ಟಿತ್ತಂತೆ. ಸುಬ್ರಹ್ಮಣ್ಯ ಸ್ವಾಮಿ ಅವರ ಸಂಪರ್ಕ ಸಂಖ್ಯೆ 9844083407.
ಪ್ರಶ್ನೆ: ಇದು ತುಂಬ ಪ್ರಚಲಿತದಲ್ಲಿರುವ ಚಿಕಿತ್ಸಾ ವಿಧಾನವೆ?
ಉತ್ತರ: ಕಳೆದ ಹತ್ತು ವರ್ಷಕ್ಕೆ ಹೋಲಿಸಿದರೆ ಈಗ ಹೆಚ್ಚು ಪ್ರಚಾರ ಪಡೆಯುತ್ತಿದೆ.
ಪ್ರಶ್ನೆ: ಈ ಚಿಕಿತ್ಸಾ ವಿಧಾನದಿಂದ ಯಾರಿಗೆ ಅನುಕೂಲ?
ಉತ್ತರ: ಕೆಲವು ಮಾನಸಿಕ ಕಾಯಿಲೆ ಅಥವಾ ನೋವಿಗೆ ಯಾವುದೇ ಚಿಕಿತ್ಸೆಯಲ್ಲೂ ಫಲಿತಾಂಶ ಸಿಕ್ಕಲಿಲ್ಲ ಅಂದಾಗ ಹಿಮ್ನೋ ಥೆರಪಿಯನ್ನು ಪ್ರಯತ್ನಿಸಬಹುದು. ಶೇ 97 ಪ್ರಕರಣಗಳಲ್ಲಿ ಫಲಿತಾಂಶ ಸಿಕ್ಕಿವೆ.
ಪ್ರಶ್ನೆ: ಮಾನಸಿಕ ರೋಗ ತಜ್ಞರು ಅನುಸರಿಸುವ ವಿಧಾನಕ್ಕಿಂತ ಹೇಗೆ ಭಿನ್ನ?
ಉತ್ತರ: ಮೊದಲಿಗೆ ನಾವು ವೈದ್ಯರಲ್ಲ. ಅವರಷ್ಟು ವೈಜ್ಞಾನಿಕ ಅಂಶಗಳು ಇಲ್ಲಿಲ್ಲ. ಆದರೆ ಫಲಿತಾಂಶ ಖಂಡಿತಾ ಸಿಗುತ್ತದೆ.
ಪ್ರಶ್ನೆ: ಚಿಕಿತ್ಸಾ ವಿಧಾನದ ಬಗ್ಗೆ ಇನ್ನಷ್ಟು ವಿವರವಾಗಿ ಹೇಳಿ
ಉತ್ತರ: ಈ ಜನ್ಮದ ಮಾನಸಿಕ-ದೈಹಿಕ ಬಾಧೆಗಳಿಗೆ ಮೂಲ ನಮ್ಮ ಹಿಂದಿನ ಜನ್ಮದಲ್ಲಿರುತ್ತದೆ. ಹಿಪ್ನೋ ಥೆರಪಿ ಮೂಲಕ ಹಿಂದಿನ ಜನ್ಮಕ್ಕೆ ಕರೆದುಕೊಂಡು ಹೋಗಿ, ಆ ಸಮಸ್ಯೆಯನ್ನು ದೇಹ ಹಾಗೂ ಮನಸ್ಸಿನಿಂದ ಹೊಡೆದೋಡಿಸುವ ಚಿಕಿತ್ಸಾ ಪದ್ಧತಿ ಇದು.
ಪ್ರಶ್ನೆ: ಸಮಸ್ಯೆ ಸರಿಹೋಗಲು ಎಷ್ಟು ಸಮಯ ಬೇಕಾಗುತ್ತದೆ?
ಉತ್ತರ: ನೂರಕ್ಕೆ ಅರವತ್ತರಷ್ಟು ಮಂದಿ ಈ ಚಿಕಿತ್ಸೆಗೆ ಸಹಕರಿಸುವುದು ಕಷ್ಟ. ತಾರ್ಕಿಕ ಚಿಂತನೆ ಮಾಡುವವರು, ನಂಬಿಕೆ ಇಲ್ಲದವರನ್ನು ಹಿಪ್ನೊಟೈಸ್ ಮಾಡುವುದು ಸಲೀಸಲ್ಲ. ಒಮ್ಮೆ ಚಿಕಿತ್ಸೆ ಆದರೆ ಕೆಲವು ಸಲ ತಕ್ಷಣವೇ ಸರಿಹೋಗುತ್ತದೆ. ಇನ್ನು ಕೆಲ ಸಲ ಎರಡು ಮೂರು ಸಿಟ್ಟಿಂಗ್ ಬೇಕಾಗುತ್ತದೆ.
ಪ್ರಶ್ನೆ: ಈ ಚಿಕಿತ್ಸಾ ವಿಧಾನದಲ್ಲಿ ಹೆಸರು ಮಾಡಿದವರನ್ನು ಹೇಳಬಹುದಾ?
ಉತ್ತರ: ಶ್ರೀರಾಮಚಂದ್ರ ಗುರೂಜಿ, ಬಾಲಕೃಷ್ಣ ಗುರೂಜಿ, ಹೈದರಾಬಾದ್ ನ ಪ್ರದೀಪ್ ಅಗರ್ ವಾಲ್, ಮೋಹನ್ ಕುಮಾರ್, ತೃಪ್ತಿ ಜೈನ್ ಹಾಗೂ ನನ್ನನ್ನೂ ಒಳಗೊಂಡಂತೆ ಕೆಲವರಿದ್ದೇವೆ.
ಪ್ರಶ್ನೆ: ಇದರಿಂದ ಯಾವುದೇ ಅಡ್ಡಪರಿಣಾಮ ಇರುವುದಿಲ್ಲವಾ?
ಉತ್ತರ: ಮೊದಲನೆಯದಾಗಿ ನಮ್ಮ ಬಳಿ ಬರುವವರ ಸಮಸ್ಯೆಗಳನ್ನು ವೈದ್ಯಕೀಯ ವಿಜ್ಞಾನದಲ್ಲಿ ಪರಿಹರಿಸಲು ಸಾಧ್ಯವಾಗಿರುವುದಿಲ್ಲ. ಅಂತಹವರನ್ನು ನಾವು ಹಿಪ್ನಟೈಸ್ ಮಾಡಿ, ಹಿಂದಿನ ಯಾವುದೋ ಜನ್ಮದಲ್ಲಿ ಆಗಿದ್ದ ಯಾವ ಘಟನೆ ಇಂದಿನ ಸ್ಥಿತಿಗೆ ಕಾರಣ ಅಂತ ತಿಳಿದು, ಅದೇ ಅವಸ್ಥೆಯಲ್ಲೇ ನಿವಾರಿಸುತ್ತೀವಿ. ಯಾವುದೇ ಅಡ್ಡ ಪರಿಣಾಮ ಇರೋದಿಲ್ಲ. ಸಮಸ್ಯೆ ಇರುವವರ ಇಚ್ಛೆಗೆ ವಿರುದ್ಧವಾಗಿ ನಾವು ಏನೂ ಮಾಡುವುದಿಲ್ಲ.
ಪ್ರಶ್ನೆ: ಈ ಚಿಕಿತ್ಸಾ ವಿಧಾನಕ್ಕೆ ಎಷ್ಟು ಖರ್ಚಾಗುತ್ತದೆ?
ಉತ್ತರ: ಒಬ್ಬೊಬ್ಬರು ಒಂದೊಂದು ರೀತಿ ಫೀ ಪಡೆಯುತ್ತಾರೆ. ಒಂದು ಸಿಟ್ಟಿಂಗ್ ಗೆ ಎರಡರಿಂದ ಹತ್ತು ಸಾವಿರ ರುಪಾಯಿ ಪಡೆಯುವವರಿದ್ದಾರೆ. ಒಬ್ಬ ವ್ಯಕ್ತಿಗೆ ಎರಡರಿಂದ ಐದು ಸಿಟ್ಟಿಂಗ್ ವರೆಗೆ ಬೇಕಾಗುತ್ತದೆ.
ಪ್ರಶ್ನೆ: ಯಾವ ಸಮಸ್ಯೆಗಳಿಗೆ ಈ ಚಿಕಿತ್ಸಾ ವಿಧಾನ ಹೆಚ್ಚು ಪರಿಣಾಮಕಾರಿ?
ಉತ್ತರ: ಸ್ಕಿಜೋಫ್ರೇನಿಯಾ, ಡಿಪ್ರೆಷನ್, ಭಯ, ಬ್ಲಾಕ್ ಮ್ಯಾಜಿಕ್..ಹಲವು ಮಾನಸಿಕ ಹಾಗೂ ದೈಹಿಕ ಸಮಸ್ಯೆಗಳಿಗೆ ಪರಿಣಾಮಕಾರಿ.
ಪ್ರಶ್ನೆ: ಯಾವುದಾದರೂ ಒಂದು ಉದಾಹರಣೆ ಹೇಳಬಹುದಾ?
ಉತ್ತರ: ಒಬ್ಬ ಹೆಣ್ಣುಮಗಳಿಗೆ ವಿಪರೀತ ತಲೆ ನೋವು ಬರ್ತಿತ್ತು. ಸ್ವತಃ ಆಕೆಯ ಅಕ್ಕನೇ ಆಯುರ್ವೇದ ವೈದ್ಯೆಯಾಗಿದ್ದರು. ಆದರೂ ಆಕೆ ತಲೆ ನೋವು ವಾಸಿಯಾಗಿರಲಿಲ್ಲ. ನಮ್ಮ ಬಳಿ ಚಿಕಿತ್ಸೆಗೆ ಬಂದರು. ಹಿಪ್ನಟೈಸ್ ಮಾಡಿದಾಗ ತಿಳಿದದ್ದೇನೆಂದರೆ, ಹಿಂದಿನ ಜನ್ಮದಲ್ಲಿ ಆಕೆ ತಾಯಿ ಬಿಂದಿಗೆಯಿಂದ ತಲೆಗೆ ಹೊಡೆದಿದ್ದರು. ಅದಕ್ಕೂ ಮುಂಚೆ ಮೊಸಳೆಯೊಂದು ಬಾಯಿ ಹಾಕಿತ್ತು. ಎರಡೂ ಘಾತ ಈಗ ಯಾವ ಭಾಗದಲ್ಲಿ ತಲೆ ನೋವು ಬರುತ್ತಿದೆಯೋ ಅದೇ ಜಾಗದಲ್ಲಿ ಆಗಿತ್ತು. ನಮ್ಮ ಚಿಕಿತ್ಸೆ ನಂತರ ಆಕೆಗೆ ತಲೆ ನೋವು ಸಂಪೂರ್ಣ ನಿವಾರಣೆಯಾಯಿತು.
ಪ್ರಶ್ನೆ: ಈ ಚಿಕಿತ್ಸೆಗೆ ಸಂಬಂಧಿಸಿದ ಹಾಗೆ ಇನ್ನಷ್ಟು ವಿವರ ಹೇಳ್ತೀರಾ?
ಉತ್ತರ: ವಾಸಿ ಮಾಡಲಾಗದ ದೈಹಿಕ-ಮಾನಸಿಕ ಸಮಸ್ಯೆಗಳಿಗೆ ಹಿಪ್ನೋ ಥೆರಪಿಯಲ್ಲಿ ಚಿಕಿತ್ಸೆ ಮಾಡಬಹುದು. ಆದರೆ ಸಮಸ್ಯೆ ಇರುವವರು ಯಾವುದೇ ಸಂಶಯ, ತರ್ಕದ ಹಂಗಿಲ್ಲದೆ ಸಹಕರಿಸಬೇಕು. ಇಲ್ಲಿ ಮಾತ್ರೆ, ಔಷಧಗಳಿಲ್ಲ. ಹಿಂದಿನ ಜನ್ಮಗಳಲ್ಲಿ ಆದ ಯಾವ ಘಟನೆ ಇಂದಿನ ಸಮಸ್ಯೆಗೆ ಕಾರಣ ಎಂದು ತಿಳಿದು ಅದನ್ನು ಸರಿಪಡಿಸ್ತೀವಿ.
-
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
SWR: ಪ್ರಶಾಂತಿ ಎಕ್ಸ್ಪ್ರೆಸ್ ರೈಲಿಗೆ ಹೆಚ್ಚುವರಿ ಬೋಗಿ: ರೈಲುಗಳ ನಿಲುಗಡೆಯಲ್ಲಿ ಬದಲಾವಣೆ -
SWR: ಏಪ್ರಿಲ್ 2-5 ಬೆಂಗಳೂರು, ಹುಬ್ಬಳ್ಳಿಯಿಂದ ವಿಶೇಷ ಎಕ್ಸ್ಪ್ರೆಸ್ ರೈಲು ಕಾರ್ಯಾಚರಣೆ, ವೇಳಾಪಟ್ಟಿ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
Vastu Tips: ಈ ವಾಸ್ತು ಟಿಪ್ಸ್ ಪಾಲಿಸಿದರೆ ಧನ ಮತ್ತು ಯಶಸ್ಸು ನಿಮ್ಮದೇ -
Vastu Plants: ಮನೆಯಲ್ಲೇ ಐಶ್ವರ್ಯ ಹೆಚ್ಚಿಸಬೇಕಾ? ಈ 5 ಸಸ್ಯಗಳನ್ನು ಬೆಳೆಸಿ -
ಬೇಸಿಗೆಯಲ್ಲಿ ತಣ್ಣೀರಿನ ಸ್ನಾನ ಮಾಡುವ ಮೊದಲು ತಿಳಿದುಕೊಳ್ಳಬೇಕಾದ ವಿಷಯಗಳು -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
Vastu Tips: ವಾಸ್ತು ಪ್ರಕಾರ ನಮ್ಮ ಮನೆಯ ಸುತ್ತಮುತ್ತಲಿನ ವಿನ್ಯಾಸ ಹೇಗಿರಬೇಕು -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್












Click it and Unblock the Notifications