ಹಣ ನೀಡಲು ನಿರಾಕರಣೆ: ಪತ್ನಿಯನ್ನು ಕಲ್ಲಿನಿಂದ ಚಚ್ಚಿಕೊಂದ ಪತಿ
ಬೆಂಗಳೂರು, ಜು.6: ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರು ಹೊರವಲಯದ ಚಿಕ್ಕಸಂದ್ರದಲ್ಲಿ ನಡೆದಿದೆ.
ಮಧ್ಯಪ್ರದೇಶ ಮೂಲದ ರಾಜಾಸಿಂಗ್ ಆರೋಪಿ, ಮದ್ಯ ಸೇವನೆಗೆ ಹಣ ನೀಡುತ್ತಿಲ್ಲ ಎಂಬ ಕಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ, ರಾಜಾಸಿಂಗ್ ಸಿಮೆಂಟ್ ಇಟ್ಟಿಗೆಯಿಂದ ಹೊಡೆದು ಪತ್ನಿ ಕಸ್ತೂರಿ 35 ಎಂಬಾಕೆಯನ್ನು ಕೊಲೆ ಮಾಡಿದ್ದಾನೆ.
ಹೆಸರಘಟ್ಟ ರಸ್ತೆಯ ಸಪ್ತಗಿರಿ ಲೇಔಟ್‌ನ ಚಿಕ್ಕಸಂದ್ರದಲ್ಲಿ ಸಂಪತಿಗಳು ಕಳೆದ 10 ದಿನಗಳಿಂದ ನೆಲೆಸಿದ್ದರು. ಬೆಂಗಳೂರಿಗೆ ಬಂದು ಗೃಹನಿರ್ಮಾಣ ಕೆಲಸದಲ್ಲಿ ತೊಡಗಿದ್ದರು.

ರಾಜಾಸಿಂಗ್ ಪ್ರತಿನಿತ್ಯ ಹೆಂಡತಿಗೆ ಹಣ ನೀಡುವುದಾಗಿ ಪೀಡಿಸುತ್ತಿದ್ದ, ಅಂದೂ ಕೂಡ 20 ರೂ ಗಳನ್ನು ನೀಡಲು ಬೇಡಿಕೆ ಇಟ್ಟಿದ್ದ ಆದರೆ ಪತ್ನಿ ನಿರಾಕಿರಿಸಿದ್ದಾಳೆ, ಇದರಿಂದ ಕೋಪಗೊಂಡ ರಾಜಾಸಿಂಗ್ ಸಿಮೆಂಟ್ ಇಟ್ಟಿಗೆಯಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಸೋಲದೇವನಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications