ವಾಟ್ಸಪ್ ,ಫೇಸ್‌ಬುಕ್ ಚಾಟಿಂಗ್ ಬೇಡ ಎಂದ ಪತಿಗೆ ಕೊಲೆ ಬೆದರಿಕೆ: ದೂರು
ಬೆಂಗಳೂರು, ಡಿಸೆಂಬರ್ 19: ನನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ಪತಿಯೊಬ್ಬ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ.
ಮಾರತ್ತಹಳ್ಳಿ ನಿವಾಸಿ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪತ್ನಿ ನನ್ನನ್ನು ಮನೆಯಲ್ಲಿ ಕೂಡಿಹಾಕಿ ಕಿರುಕುಳ ನೀಡುತ್ತಿದ್ದಾಳೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ ಎಂದು ದೂರು ನೀಡಿದ್ದಾರೆ.
ದೂರುದಾರ ವ್ಯಕ್ತಿ ಉದಯಪುರ ಮೂಲದವರಾಗಿದ್ದು, ನಗರದ ಖಾಸಗಿ ಕಂಪನಿಯೊಂದರಲ್ಲಿ ಸಂಶೋಧಕರಾಗಿದ್ದಾರೆ. 2013ರಲ್ಲಿ ಉದಯಪುರದಲ್ಲಿ ವಿವಾಹವಾಗಿದ್ದು, ಪತ್ನಿಯನ್ನೂ ನಗರಕ್ಕೆ ಕರೆತಂದಿದ್ದರು. ದಂಪತಿ ಮಾರತ್ತಹಳ್ಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸಿಸುತ್ತಿದ್ದಾರೆ. ಪತ್ನಿಯೂ ನಗರದ ಖಾಸಗಿ ಕಂಪನಿಯೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ.

ದಂಪತಿ ನಡುವೆ ಕೆಲ ತಿಂಗಳಿನಿಂದ ಭಿನ್ನಾಭಿಪ್ರಾಯ ಉಂಟಾಗಿತ್ತು. ಈತನ ಪತ್ನಿ ಫೇಸ್‌ಬುಕ್‌ನಲ್ಲಿ ವ್ಯಕ್ತಿಯೊಬ್ಬನನ್ನು ಪರಿಚಯಿಸಿಕೊಂಡು ಆತನೊಂದಿಗೆ ಸಲುಗೆಯಿಂದ ವರ್ತಿಸುತ್ತಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ. ಇದನ್ನು ಗಮನಿಸಿದ ಪತಿ ಬುದ್ಧಿವಾದ ಹೇಳಿದ್ದರು ಇದನ್ನು ಸಹಿಸದ ಪತ್ನಿ ಆತನನ್ನು ಕೂಡಿಹಾಕಿ ಚಿತ್ರಹಿಂಸೆ ನೀಡಿದ್ದಾಳೆ.












Click it and Unblock the Notifications