ಹುಚ್ಚ ವೆಂಕಟ್‌ ಜೈಲು ಪಾಲು, ಡಿ.4ರ ತನಕ ನ್ಯಾಯಾಂಗ ಬಂಧನ

ಬೆಂಗಳೂರು, ನವೆಂಬರ್ 20 : ನಟ, ನಿರ್ದೇಶಕ ಹುಚ್ಚ ವೆಂಕಟ್‌ನನ್ನು ಡಿಸೆಂಬರ್ 4ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬೆಂಗಳೂರಿನ ಜ್ಞಾನಭಾರತಿ ಠಾಣೆ ಪೊಲೀಸರು ವೆಂಕಟ್‌ನನ್ನು ಗುರುವಾರ ರಾತ್ರಿ ಬಂಧಿಸಿದ್ದರು.

ಶುಕ್ರವಾರ ಮಧ್ಯಾಹ್ನ ಹುಚ್ಚಾ ವೆಂಕಟ್‌ನನ್ನು ಸಿಟಿ ಸಿವಿಲ್ ಕೋರ್ಟ್‌ಗೆ ಪೊಲೀಸರು ಹಾಜರು ಪಡಿಸಿದರು. ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನವೆಂಬರ್ 18ರಂದು ಜ್ಞಾನಭಾರತಿ ಆವರಣದಲ್ಲಿ ಪ್ರತಿಭಟನೆ ನಡೆಸಿ ಹುಚ್ಚಾ ವೆಂಕಟ್ ವಿರುದ್ಧ ದೂರು ನೀಡಿದ್ದರು. ಅದರ ಅನ್ವಯ ಬಂಧಿಸಲಾಗಿತ್ತು. [ಹುಚ್ಚ ವೆಂಕಟ್ ಬಂಧನ]

huccha venkat

ವೆಂಕಟ್ ವಿರುದ್ಧ ಉದ್ದೇಶ ಪೂರ್ವಕವಾಗಿ ಶಾಂತಿ ಕದಡಿದ ಆರೋಪದಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಗುರುವಾರ ರಾತ್ರಿ ಜ್ಞಾನಭಾರತಿ ಪೊಲೀಸರು ಬಂಧಿಸಿದ್ದರು. ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಧೀಶರು ವೆಂಕಟ್‌ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ಹೊರಡಿಸಿದ್ದಾರೆ. [ಹುಚ್ಚಾ ವೆಂಕಟ್ ಯಾರು?]

ವಕೀಲರೇ ಗೈರು : ಹುಚ್ಚ ವೆಂಕಟ್ ನೋಡಲು ಕೋರ್ಟ್‌ನಲ್ಲಿ ಭಾರೀ ಜನ ಜಮಾಯಿಸಿದ್ದರು. ವಕೀಲರು ಉಚಿತವಾಗಿ ವಕಾಲತ್ತು ಹಾಕುವುದಾಗಿ ತಿಳಿಸಿದ್ದರು. ಆದರೆ, ವೆಂಕಟ್ ಸಹೋದರರು ವಕೀಲರನ್ನು ಗೊತ್ತು ಮಾಡಿದ್ದರು. ವಕೀಲರು ಝೆರಾಕ್ಸ್ ಮಾಡಿಸಿಕೊಂಡು ಬರಲು ಹೋಗಿದ್ದರು. ಅವರು ಬರುವುದರೊಳಗೆ ಕಲಾಪ ಮುಗಿದುಹೋಗಿತ್ತು. [ವೆಂಕಟ್ ಮುಖಕ್ಕೆ ಮಸಿ]

ವೆಂಕಟ್‌ನನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ ಪೊಲೀಸರಿಂದ ತೊಂದರೆ ಆಯಿತೇ? ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಇಲ್ಲ ಎಂದು ವೆಂಕಟ್ ನ್ಯಾಯಾಧೀಶರಿಗೆ ತಿಳಿಸಿದರು. ನಂತರ ನ್ಯಾಯಾಧೀಶರು ವೆಂಕಟ್‌ನನ್ನು ಡಿಸೆಂಬರ್ 4ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು.

ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ವೆಂಕಟ್ ಸ್ಪರ್ಧಿಯಾಗಿದ್ದರು. ನವೆಂಬರ್ 14ರಂದು ಸ್ಪರ್ಧಿಯೊಬ್ಬರ ಮೇಲೆ ಹಲ್ಲೆ ಮಾಡಿದ ನಂತರ ವೆಂಕಟ್‌ನನ್ನು ಬಿಗ್ ಬಾಸ್ ಮನೆಯಿಂದ ಹೊರಹಾಕಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+