ಬಿಎಂಟಿಸಿ ಸ್ಮಾರ್ಟ್ ಕಾರ್ಡ್ ಎಲ್ಲಿ ಸಿಗುತ್ತೆ? ಬಳಕೆ ಹೇಗೆ?
ಬೆಂಗಳೂರು, ಜೂನ್ 19: ಬಿಎಂಟಿಸಿ ಬಸ್ಸುಗಳಲ್ಲಿ ಇನ್ನು ಮುಂದೆ ಸ್ಮಾರ್ಟ್ ಕಾರ್ಡ್ ಬಳಸಿ ಪ್ರಯಾಣ ಮಾಡಬಹುದಾಗಿದೆ. ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಸಂಪೂರ್ಣವಾಗಿ ಜಾರಿಗೊಂಡ ಬಳಿಕ ಚಿಲ್ಲರೆ ಸಮಸ್ಯೆ, ಹಣ ನೀಡಿ ಟಿಕೆಟ್ ಖರೀದಿಸುವ ತೊಂದರೆ ತಪ್ಪಲಿದೆ ಎಂಬ ಸುದ್ದಿ ಕಾರ್ಯರೂಪಕ್ಕೆ ಬರಲು ಇನ್ನೂ ಕಾಲಾವಕಾಶವಿದೆ.
ಮೊದಲ ಹಂತದಲ್ಲಿ ಸ್ಮಾರ್ಟ್‌ಕಾರ್ಡ್‌ಗಳನ್ನು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿತರಿಸುವ ವ್ಯವಸ್ಥೆ ಮಾಡಲಾಗಿದೆ. ನವೆಂಬರ್ ಅಂತ್ಯದೊಳಗೆ ನಾಲ್ಕು ಲಕ್ಷಕ್ಕೂ ಅಧಿಕ ಅಧಿಕ ಕಾರ್ಡ್ ವಿತರಣೆಯಾಗಲಿದೆ ಎಂದು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಏಕ್‌ರೂಪ್ ಕೌರ್ ಹೇಳಿದ್ದಾರೆ. ಸಾರ್ವಜನಿಕ ವಲಯಕ್ಕೆ ಅಕ್ಟೋಬರ್ ತಿಂಗಳ ನಂತರ ಈ ಕಾರ್ಡ್ ಸಿಗಲಿದೆ.
ನಗದು ರಹಿತ ವ್ಯವಹಾರವನ್ನು ಉತ್ತೇಜಿಸುವ ಮೋದಿ ಅವರ ಡಿಜಿಟಲ್ ಇಂಡಿಯಾ ಅನುಷ್ಠಾನಗೊಂಡಂತೆ ಆಗುತ್ತದೆ. ಆದರೆ, ಈ ನಡುವೆ ಸ್ಮಾರ್ಟ್ ಕಾರ್ಡ್ ಖರೀದಿಸುವುದು ಹೇಗೆ? ಎಲ್ಲಿ ಸಿಗುತ್ತದೆ? ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ಉತ್ತರ ಹಾಗೂ ಇನ್ನಷ್ಟು ಮಾಹಿತಿ ಇಲ್ಲಿದೆ.

ಸ್ಮಾರ್ಟ್ ಕಾರ್ಡ್ ಎಲ್ಲಿ ಸಿಗಲಿದೆ?
ಸದ್ಯಕ್ಕೆ ಶಿವಾಜಿನಗರ ಹಾಗೂ ಶಾಂತಿನಗರ ಕಚೇರಿಯಲ್ಲಿ ಮಾತ್ರ ಲಭ್ಯ. ನಂತರದ ದಿನಗಳಲ್ಲಿ ಬಿಎಂಟಿಸಿಯ ಕಚೇರಿ, ಬೆಂಗಳೂರು ಒನ್ ಕೇಂದ್ರಗಳಲ್ಲಿ ಸ್ಮಾರ್ಟ್‌ಕಾರ್ಡ್ ಪಡೆದುಕೊಳ್ಳಬಹುದಾಗಿದೆ. ಮೊಬೈಲ್ ಪ್ರೀಪೇಯ್ಡ್ ರೀಚಾರ್ಜ್ ಮಾಡುವ ಮಾದರಿಯಲ್ಲಿ ಹಣ ನೀಡಿ ಈ ಕಾರ್ಡ್ ಅನ್ನು ಆಕ್ಸಿಸ್ ಬ್ಯಾಂಕ್ ಇಲ್ಲವೇ ಬಿಎಂಟಿಸಿ ಕೇಂದ್ರಗಳಲ್ಲಿ ಟಾಪ್ ಅಪ್ ಮಾಡಿಕೊಳ್ಳಬೇಕು.

ಕಾರ್ಡ್ ಬೆಲೆ 30ರು ಆಗುವ ಸಾಧ್ಯತೆ
ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣ ಮಾಡುವಾಗ ಟಿಕೆಟ್ ಪಡೆಯಲು ಹಣ ಪಾವತಿ ಮಾಡಬೇಕಿಲ್ಲ. ಕಂಡಕ್ಟರ್ ಬಳಿ ಇರುವ ಯಂತ್ರಕ್ಕೆ ಕಾರ್ಡ್ ಹಾಕಿದರೆ, ಹಣ ಪಾವತಿಯಾಗುತ್ತದೆ. ದೇಶದ 12 ಲಕ್ಷ ಮಳಿಗೆಗಳಲ್ಲಿ ಇದನ್ನು ಬಳಸಿ ಶಾಪಿಂಗ್ ಸಹ ಮಾಡಬಹುದಾಗಿದೆ. 5 ರು ಬದಲಿಗೆ 30ರು ಬೆಲೆಗೆ ಕಾರ್ಡ್ ಸಾರ್ವಜನಿಕರಿಗೆ ನೀಡುವ ಸಾಧ್ಯತೆಯಿದೆ.

ಟಾಪ್ ಅಪ್ ಮಾಡಿಕೊಳ್ಳಬೇಕು
ಆಕ್ಸಿಸ್ ಬ್ಯಾಂಕ್ ಇಲ್ಲವೇ ಬಿಎಂಟಿಸಿ ಕೇಂದ್ರಗಳಲ್ಲಿ ಟಾಪ್ ಅಪ್ ಮಾಡಿಕೊಳ್ಳಬೇಕು. ಟಾಪ್ ಅಪ್ ಮಿತಿ 10,000 ರು ಎಂದು ನಿಗದಿ ಪಡಿಸಲಾಗಿದೆ. 100, 1,000 ರು ಹೀಗೆ ಟಾಪ್ ಅಪ್ ಬೆಲೆ ನಿಗದಿಯಾಗಿದೆ.
ಇದನ್ನು ಆನ್ ಲೈನ್ ಅಥವಾ ಆಕ್ಸಿಸ್ ಬ್ಯಾಂಕಿನ ಎಟಿಎಂ ಮೂಲಕ ತುಂಬಬಹುದು. 10 ಸಾವಿರ ರುಗಿಂತ ಅಧಿಕ ಮೊತ್ತ ಬೇಕಾದರೆ ಗುರುತಿನ ಚೀಟಿ ನೀಡಬೇಕಾಗುತ್ತದೆ.

ಶಾಪಿಂಗ್ ಮಾಡಬಹುದು
ಈ ಸ್ಮಾರ್ಟ್ ಕಾರ್ಟ್ ಬಸ್ಸುಗಳಲ್ಲಿ ಪ್ರಯಾಣಿಸಲು ಮಾತ್ರ ಅನುಕೂಲವಾಗುವುದಿಲ್ಲ. ಶಾಪಿಂಗ್, ಕ್ಯಾಬ್ , ಹೋಟೆಲ್ ವಹಿವಾಟಿನಲ್ಲಿಯೂ ಬಳಸುವಂತೆ ವ್ಯವಸ್ಥೆ ಮಾಡಲಾಗಿದೆ' ಎಂದು ಬ್ಯಾಂಕ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಾಜೀವ್ ಆನಂದ್ ತಿಳಿಸಿದರು.

24 ಕೇಂದ್ರಗಳಲ್ಲಿ ಲಭ್ಯ
ಈಗಾಗಲೇ 10 ಮಾರ್ಗಗಳಲ್ಲಿ 11 ಬಸ್ ನಿಲ್ದಾಣಗಳಲ್ಲಿ ಲಭ್ಯ. ಕೆಂಪೇಗೌಡ, ಶಿವಾಜಿನಗರ, ಶಾಂತಿನಗರ, ದೊಮ್ಮಲೂರು, ಬನಶಂಕರಿ, ಕೋರಮಂಗಲ, ಯಶವಂತಪುರ, ಕೆಂಗೇರಿ, ಜಯನಗರ, ವಿಜಯನಗರ ಹಾಗೂ ಐಟಿಪಿಎಲ್

13 ಬೆಂಗಳೂರು ಒನ್ ಕೇಂದ್ರ
ಬೆಂಗಳೂರು ಒನ್ ಕೇಂದ್ರಗಳಲ್ಲಿ ಲಭ್ಯ: ಜೆಪಿ ನಗರ, ನಾಗರಭಾವಿ, ರಾಜಾಜಿನಗರ, ಆರ್ ಟಿ ನಗರ, ಇಂದಿರಾನಗರ, ಕೋಡಿಗೆಹಳ್ಳಿ, ಅರೆಕೆರೆ, ಸಂಜಯ್ ನಗರ, ಜೀವನಹಳ್ಳಿ, ಕೆಆರ್ ಪುರಂ, ಕಾವಲ್ ಬೈರಸಂದ್ರ, ಮಲ್ಲೇಶ್ವರಂ ಹಾಗೂ ಬಸವೇಶ್ವರನಗರ. ಇದಲ್ಲದೆ ಆಕ್ಸಿಸ್ ಬ್ಯಾಂಕಿನಲ್ಲೂ ಮಾಹಿತಿ ಲಭ್ಯವಾಗಲಿದೆ FAQs ಓದಿ
-
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ












Click it and Unblock the Notifications