E-Khata: ಇ- ಖಾತಾದಲ್ಲಿ ತಪ್ಪುಗಳಿದ್ದರೆ ಸರಿಪಡಿಸುವುದು ಹೇಗೆ ?
E-Khata: ಎಲ್ಲಾ ಆಸ್ತಿಗಳಿಗೆ ರಾಜ್ಯ ಸರ್ಕಾರವು ಇ ಖಾತಾ ಕಡ್ಡಾಯ ಮಾಡಿದ ಮೇಲೆ ಎಲ್ಲರೂ ಖಾತಾ ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. ಆದರೆ, ಇನ್ನೂ ಲಕ್ಷಾಂತರ ಆಸ್ತಿಗಳಿಗೆ ಇ ಖಾತಾ ಲಭ್ಯವಾಗಿಲ್ಲ. ಅಲ್ಲದೆ ಈಗಾಗಲೇ ಇ - ಖಾತಾ ಮಾಡಿಸಿಕೊಂಡಿರುವವರು ಅದರಲ್ಲಿ ತಪ್ಪು ಅಥವಾ ತಿದ್ದುಪಡಿಗಳು ಆದರೆ ಯಾವ ರೀತಿ ಮಾಡಿಸಿಕೊಳ್ಳಬೇಕು ಎನ್ನುವ ಗೊಂದಲದಲ್ಲಿ ಇದ್ದಾರೆ. ಇ ಖಾತಾದಲ್ಲಿ ಏನಾದರೂ ತಪ್ಪುಗಳಾದರೆ ಅದನ್ನು ಯಾವ ರೀತಿ ಸರಿಪಡಿಸಿಕೊಳ್ಳಬೇಕು ಹಾಗೂ ಅದಕ್ಕೆ ಅನುಸರಿಸಬೇಕಾದ ನಿಯಮಗಳೇನು ಎನ್ನುವ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ 24 ಲಕ್ಷಕ್ಕೂ ಹೆಚ್ಚು ಆಸ್ತಿಗಳಿದ್ದು ಎಲ್ಲಾ ಆಸ್ತಿಗಳಿಗೂ ಕಡ್ಡಾಯವಾಗಿ ಇ ಖಾತಾ ನೀಡಲಾಗುತ್ತಿದೆ. ಇ ಖಾತಾ ನೀಡುವುದಕ್ಕೆ ಯಾವುದೇ ಕಾಲ ಮಿತಿಯನ್ನು ನಿಗದಿ ಮಾಡಿಲ್ಲ. ಆದರೆ, ಸಾಧ್ಯವಾದಷ್ಟು ಬೇಗ ಖಾತಾ ಮಾಡಿಸಿಕೊಳ್ಳುವುದು ಉತ್ತಮ ಎಂದು ಸೂಚನೆ ನೀಡಲಾಗಿದೆ. ಖಾತಾ ಪ್ರಮಾಣ ಪತ್ರವು ಆಸ್ತಿಗಳಿಗೆ ಸಂಬಂಧಿಸಿದ ಪ್ರಮುಖ ದಾಖಲೆಯಾಗಿದೆ. ಇನ್ನು ಇ ಖಾತಾ ಎನ್ನುವುದು ಆಸ್ತಿಯ ಡಿಜಿಟಲ್ ರೂಪವಾಗಿದೆ. ಹಾಗಾದರೆ ಆಸ್ತಿದಾರರು ಇ ಖಾತಾದಲ್ಲಿ ಏನಾದರೂ ಗೊಂದಲಗಳಾದರೆ ಅಥವಾ ತಪ್ಪುಗಳಾದರೆ ಅದನ್ನು ಸರಿಪಡಿಸಿಕೊಳ್ಳುವುದು ಅತ್ಯಂತ ಸರಳವಾಗಿದೆ. ನೀವು ಇ ಖಾತಾವನ್ನು ಮಾಡಿಸಿಕೊಳ್ಳಲು ಅಥಾವ ಅದರಲ್ಲಿನ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಸರಳ ವಿಧಾನಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಪರಿಚಯಿಸಿದೆ.

ಇ - ಖಾತಾದ ಕರೆಕ್ಷನ್ ಮಾಡುವ ಮುಂಚೆ ಈ ವಿಷಯಗಳನ್ನು ಗಮನಿಸಿ
ತಪ್ಪುಗಳನ್ನು ಗುರುತಿಸಿ: ನಿಮ್ಮ ಕರಡು ಇ-ಖಾತಾವನ್ನು ಮೊದಲು ಎಚ್ಚರಿಕೆಯಿಂದ ಪರಿಶೀಲನೆ ಮಾಡಿ ಹೆಸರು ತಪ್ಪಾಗಿರುವುದು, ವಿಳಾಸ ಅಥವಾ ಆಸ್ತಿ ವಿವರಗಳಂತಹ ಯಾವುದೇ ದೋಷಗಳು ಅಥವಾ ವ್ಯತ್ಯಾಸಗಳು ಆಗಿವೆಯೇ ಎಂದು ಮೊದಲು ಗುರುತಿಸಿ.
ನಿಮ್ಮ ಆಸ್ತಿಯ ಸಮೀಪದ ಎಆರ್‌ಒ ಕಚೇರಿಗೆ ಭೇಟಿ ನೀಡಿ: ನಿಮ್ಮ ಆಸ್ತಿ ವ್ಯಾಪ್ತಿಗೆ ಒಳಪಡುವ ಸಹಾಯಕ ಕಂದಾಯ ಅಧಿಕಾರಿ (ARO) ಕಚೇರಿಗೆ ಭೇಟಿ ನೀಡಿ.
ಇ - ಖಾತಾ ತಿದ್ದುಪಡಿ ಅರ್ಜಿ ಸಲ್ಲಿಸಿ: ಇ- ಖಾತಾದಲ್ಲಿ ಯಾವುದಾದರೂ ತಿದ್ದುಪಡಿಗಳಿದ್ದರೆ, ಎಆರ್‌ಒ ಕೇಸ್‌ವರ್ಕರ್‌ಗೆ ತಿಳಿಸಿ ಮತ್ತು ಮಾರಾಟ ಪತ್ರಗಳು ಅಥವಾ ಇತರ ಸಂಬಂಧಿತ ಪುರಾವೆಗಳಂತಹ ಯಾವುದೇ ಪೂರಕ ದಾಖಲೆಗಳನ್ನು ಸಲ್ಲಿಸಿ.
ಇ ಖಾತಾ ತಿದ್ದುಪಡಿ ಪ್ರಕ್ರಿಯೆ: ಕೇಸ್‌ವರ್ಕರ್ ನಿಮ್ಮ ಅರ್ಜಿಯನ್ನು ಪರಿಶೀಲಿಸುತ್ತಾರೆ ಮತ್ತು ಅಗತ್ಯ ತಿದ್ದುಪಡಿಗಳನ್ನು ಮಾಡುತ್ತಾರೆ. ಇದಾದ ಮೇಲೆ ತಿದ್ದುಪಡಿಗಳ ನಂತರ ಕಂದಾಯ ಅಧಿಕಾರಿ ಪರಿಶೀಲನೆ ಮಾಡಿ, ಅನುಮೋದಿಸುತ್ತಾರೆ. ಇನ್ನು ಈ ಪ್ರಕ್ರಿಯೆಗಳು ಪೂರ್ಣಗೊಂಡ ನಂತರ ನೀವು ಪರಿಷ್ಕೃತ ಇ-ಖಾತಾ ನಿಮಗೆ ಸಿಗಲಿದೆ.
ನಿಮ್ಮ ಇ-ಖಾತಾದಲ್ಲಿ ತಿದ್ದುಪಡಿಗಳನ್ನು ಮಾಡಲು ಅಥವಾ ಯಾವುದಾದರೂ ತಿದ್ದುಪಡಿಗಳನ್ನು ಮಾಡಬೇಕಾದರೆ ನೀವು ಬಿಬಿಎಂಪಿಯ ಎಆರ್‌ಒ ಕಚೇರಿಯಲ್ಲಿ ವರದಿ ಮಾಡಬೇಕಾಗುತ್ತದೆ. ಅಲ್ಲಿ ಕೇಸ್‌ವರ್ಕರ್‌ಗಳು ತಿದ್ದುಪಡಿಗಳನ್ನು ಮಾಡುವ ಅಧಿಕಾರವನ್ನು ಹೊಂದಿರುತ್ತಾರೆ. ಆದರೆ ಇದಾದ ಮೇಲೆ ನೀವು ಅವುಗಳನ್ನು ಕಂದಾಯ ಅಧಿಕಾರಿಗಳ ಪರಿಶೀಲನೆಗೆ ಕಳುಹಿಸಬೇಕಾಗುತ್ತದೆ. ಅಲ್ಲಿ ಅನುಮೋದನೆ ಪಡೆದುಕೊಳ್ಳಬೇಕಾಗುತ್ತದೆ.












Click it and Unblock the Notifications