Gruha Jyoti: ಮನೆ ಬದಲಿಸಿದರೂ ಉಚಿತ ವಿದ್ಯುತ್ ಪಡೆಯುವುದು ಹೇಗೆ? ಇಲ್ಲಿದೆ ಲಿಂಕ್ & ಮಾಹಿತಿ
ಬೆಂಗಳೂರು, ಮೇ 14: ಕರ್ನಾಟಕದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ 2023 ಜುಲೈನಿಂದ ಗೃಹ ಜ್ಯೋತಿ ಯೋಜನೆ ಜಾರಿಗೆ ಬಂದಿದೆ. ಯೋಜನೆಯಡಿ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಬಹುದಾಗಿದೆ. ಅದಕ್ಕಾಗಿ ನೀವು ಆಧಾರ್ ಸಹಿತ ಪೋರ್ಟಲ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ಆದರೆ ನೀವು ನೋಂದಣಿ ಆದ ಬಳಿಕ ಮನೆ ಬದಲಾಯಿಸಿದರೆ ಯೋಜನೆ ಕಡಿತಗೊಳ್ಳುತ್ತಾ?. ಅದರ ಪ್ರಯೋಜನ ಪಡೆಯಲು ಡಿ-ಲಿಂಕ್ ಮಾಡುವುದು ಮತ್ತಷ್ಟು ಸುಲಭವಾಗಿದೆ.
ಹೌದು, ಈಗಾಗಲೇ ಗೃಹಜ್ಯೋತಿ ನೋಂದಣಿ ಆಗಿರುವ ಮನೆ ಬದಲಾಯಿಸಿದ ಮೇಲೂ ಗೃಹಜ್ಯೋತಿ ಸೌಲಭ್ಯ ಪಡೆಯಲು ಡಿ-ಲಿಂಕ್ ವ್ಯವಸ್ಥೆ ಮತ್ತಷ್ಟು ಸುಲಭಗೊಳಿಸಲಾಗಿದೆ. ಗ್ರಾಹಕರು ಯಾವುದೇ ಕಾರಣಕ್ಕೂ ಗೊಂದಲಕ್ಕೀಡಾಗದೇ ಮನೆ ಬದಲಾಯಿಸಿದವರು ಗೃಹ ಜ್ಯೋತಿ ಯೋಜನೆ ಲಾಭ ಪಡೆಯಬಹುದಾಗಿದೆ.

ಡಿ ಲೀಂಕ್ ಮಾಡಿದರೆ ಮಾತ್ರ ಮನೆ ಬದಲಾಯಿಸಿದವರಿಗೆ ಉಚಿತ ಲಾಭ ಪಡೆಯಬಹುದಾಗಿದೆ. ನೀವೂ ಈ ಕೆಳಗೆ ನೀಡಿರುವ ಲಿಂಕ್‌ಗಳು ಮೂಲಕ ನೋಂದಾಯಿಸಿಕೊಳ್ಳಿ ಹಾಗೂ ಈ ಸೌಲಭ್ಯ ಪಡೆಯಬಹುದೆಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) ತಿಳಿಸಿದೆ.
ನೀವು ಡಿ ಲೀಂಕ್ ಮಾಡಲು ಸೇವಾಸಿಂಧು ಗ್ಯಾರೆಂಟಿ ಯೋಜನೆ ಪೋರ್ಟಲ್ https://sevasindhugs.karnataka.gov.in ಅಥವಾ https://sevasindhu.karnataka.gov.in/GruhaJyothi_Delink/GetAadhaarData.aspx ಭೇಟಿ ನೀಡಬೇಕು.
ಡಿ ಲಿಂಕ್ ಮಾಡುವ ವಿಧಾನಗಳು
* ಈ ಮೇಲೆ ನೀಡಲಾಗಿರುವ ಅಧಿಕೃತ ಲಿಂಕ್ ಗೆ ಭೇಟಿ ನೀಡಬೇಕು
* ಹಳೆಯ ಮನೆಯ ಆರ್‌ಆರ್ ಸಂಖ್ಯೆಯನ್ನು ಡಿ ಲಿಂಕ್ ಮಾಡಿ
* ಹಾಲಿ ಇರುವ ಮನೆಯ ಆರ್‌ಆರ್ ಸಂಖ್ಯೆಯನ್ನು ಡಿ ಲಿಂಕ್ಮಾಡಬೇಕು.
* ಈವರೆಗೆ 28,3291 ಡಿ.ಲಿಂಕ್ ಅರ್ಜಿಗಳನ್ನು ಸ್ವೀಕರಿಸಲಾಗಿದೆ.
* ಬೆಸ್ಕಾಂ ವ್ಯಾಪ್ತಿಯಲ್ಲಿ 21,1456 ಅರ್ಜಿಗಳನ್ನು ಸ್ವೀಕರಿಸಲಾಗಿದೆ.
ಸದ್ಯ ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ ಕಂಪನಿಯು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ, ತುಮಕೂರು, ಚಿತ್ರದುರ್ಗ ಮತ್ತು ರಾಮನಗರ ಸೇರಿದಂತೆ ರಾಜ್ಯದ ಎಂಟು ಜಿಲ್ಲೆಗಳಲ್ಲಿ ಸುಮಾರು 41,092 ಚದರ ಕಿಲೋ ಮೀಟರ್ ವ್ಯಾಪ್ತಿಯ 207 ಲಕ್ಷ ಜನಸಂಖ್ಯೆಯ ಪ್ರದೇಶಕ್ಕೆ ವಿದ್ಯುತ್ ವಿತರಣೆ ಮಾಡಲಾಗುತ್ತದೆ.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಸಾರ್ವಜನಿಕ ಗೃಹ ಜ್ಯೋತಿ ಯೋಜನೆ ಸಹ ಪ್ರಮುಖವಾಗಿದೆ. ಈಗಾಗಲೇ ಕೋಟ್ಯಾಂತರ ಜನರು ನೋಂದಣಿ ಆಗಿದ್ದಾರೆ. ಇರುವ ಮನೆ ಬಿಟ್ಟು ಬೇರೆ ಮನೆಗೆ ಹೋಗುವವರಿಗೆ ಗೊಂದಲ ಬೇಡ ಎಂದು ಸರ್ಕಾರ ಡಿಲಿಂಕ್ ವ್ಯವಸ್ಥೆಯನ್ನು ಪರಿಚಯಿಸಿದೆ. ಇದರಿಂದ ಯೋಜನೆ ಫಲಾನುಭವಿಗಳು ಉಚಿತ ವಿದ್ಯುತ್ ಪಡೆಯುವುದು ಮುಂದುವರಿಯಲಿದೆ.












Click it and Unblock the Notifications