ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಎಂಟಿಸಿಯ ಮಾಸಿಕ ಪಾಸು ಪಡೆಯುವುದು ಹೇಗೆ?

|
Google Oneindia Kannada News

ಬೆಂಗಳೂರಿನ ಹೆಚ್ಚಿನ ಜನರು ಸಂಚಾರಕ್ಕಾಗಿ ಬಿಎಂಟಿಸಿ ಬಸ್ಸುಗಳನ್ನು ಅವಲಂಬಿಸಿದ್ದಾರೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಜನರ ಉಪಯೋಗಕ್ಕಾಗಿ ಮಾಸಿಕ ಪಾಸುಗಳನ್ನು ನೀಡುತ್ತದೆ. ಗುರುತಿನ ಚೀಟಿ ಮತ್ತು ಮಾಸಿಕ ಪಾಸುಗಳನ್ನು ಪಡೆದು ಜನರು ಸುಲಭವಾಗಿ ಸಂಚರಿಸಬಹುದಾಗಿದೆ. ಪ್ರತಿದಿನ ಟಿಕೆಟ್ ತಗೆದುಕೊಳ್ಳುವ ತೊಂದರೆಯನ್ನು ಮಾಸಿಕ ಪಾಸು ತಪ್ಪಿಸುತ್ತದೆ.

ಬಿಎಂಟಿಸಿಯ ಟಿಟಿಎಂಸಿ ನಿಲ್ದಾಣಗಳಲ್ಲಿ, ಕಂಡಕ್ಟರ್ ಬಳಿ ನೀವು ಮಾಸಿಕ ಪಾಸನ್ನು ಪಡೆಯಬಹುದಾಗಿದೆ. ಮಾಸಿಕ ಪಾಸು ಪಡೆಯಲು ನೀವು ಮೊದಲು ಗುರುತಿನ ಚೀಟಿಯನ್ನು ಪಡೆಯಬೇಕಾಗುತ್ತದೆ. ಒಮ್ಮೆ ಗುರುತಿನ ಚೀಟಿ ಪಡೆದರೆ, ಅದು ಮೂರು ವರ್ಷಗಳಿಗೆ ಅನ್ವಯವಾಗುತ್ತದೆ.

ಯಾವ ದಾಖಲೆಗಳು ಬೇಕು : ಮಾಸಿಕ ಗುರುತಿನ ಚೀಟಿಯನ್ನು ಪಡೆಯಲು ನೀವು 100 ರೂ. ಪಾವತಿ ಮಾಡಿ ಅರ್ಜಿಯನ್ನು ಪಡೆಯಬೇಕಾಗುತ್ತದೆ. ಭರ್ತಿ ಮಾಡಿದ ಅರ್ಜಿಯನ್ನು ವಿಳಾಸ ದೃಢೀಕರಣದ ಮತ್ತು ಎರಡು ಪಾಸ್‌ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ನೀಡಬೇಕು. ಟಿಟಿಎಂಸಿ ನಿಲ್ದಾಣಗಳ ಪಾಸು ವಿತರಣಾ ಕೇಂದ್ರದಲ್ಲಿ ನೀವು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ತಕ್ಷಣ ಭಾವಚಿತ್ರವಿರುವ ಗುರುತಿನ ಚೀಟಿಯನ್ನು ನೀಡುತ್ತಾರೆ.

bmtc

ಯಾವ-ಯಾವ ಪಾಸುಗಳಿವೆ : ಬಿಎಂಟಿಸಿ ಸಾಮಾನ್ಯ, ವಿದ್ಯಾರ್ಥಿ, ಹಿರಿಯ ನಾಗರಿಕ, ವಜ್ರ, ವಾಯು ವಜ್ರ ಮುಂತಾದ ಮಾಸಿಕ ಪಾಸುಗಳನ್ನು ಪರಿಚಯಿಸಿದೆ. ತಿಂಗಳ ಕೊನೆಯ 28ನೇ ದಿನಾಂಕದಿಂದ ಪಾಸುಗಳು ದೊರೆಯುತ್ತವೆ. ಪ್ರಯಾಣ ಮಾಡುವಾಗ ಪಾಸಿನ ಜೊತೆ ಗುರತಿನ ಚೀಟಿ ತೆಗೆದುಕೊಂಡು ಹೋಗುವುದು ಕಡ್ಡಾಯವಾಗಿದೆ.

ಕಪ್ಪು ಹಲಗೆ ಪಾಸುಗಳು ರೂ.825 : 825 ರೂ.ನ ಮಾಸಿಕ ಪಾಸು ಪಡೆದರೆ ಕಪ್ಪು ಹಲಗೆ ಬಸ್ಸುಗಳು ಸಂಚರಿಸುವ ವ್ಯಾಪ್ತಿಯವರೆಗೆ ಎಸಿ ಬಸ್ಸುಗಳನ್ನು ಹೊರತು ಪಡಿಸಿ ಉಳಿದ ಬಸ್ಸುಗಳಲ್ಲಿ ಸಂಚರಿಸಬಹುದಾಗಿದೆ.

ಪುಷ್ಪಕ್, ಕೆಂಪು ಹಲಗೆ ರೂ. 1050 : ಎಲ್ಲಾ ಹವಾನಿಯಂತ್ರಣ ರಹಿತ ಬಸ್ಸುಗಳಲ್ಲಿ ಸಂಚರಿಸಬಹುದಾಗಿದೆ. ಈ ಪಾಸು ಪಡೆದರೆ ಟ್ರಂಪೆಟ್ ಮತ್ತು ಗ್ರಾಮೀಣ ಸೇವೆಗಳ ಬಸ್ಸುಗಳಲ್ಲಿ ಪ್ರಯಾಣಿಸುವಂತಿಲ್ಲ. [ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ]

ಗೋಲ್ಡ್ ಮಾಸಿಕ ಪಾಸು ರೂ.2250 : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ವಾಯು ವಜ್ರ ಮತ್ತು ಬೆಂಗಳೂರು ರೌಂಡ್ಸ್ ಹೊರತುಪಡಿಸಿ ಉಳಿದ ಬಸ್ಸುಗಳಲ್ಲಿ ಸಂಚರಿಸಬಹುದು.

ವಜ್ರ ವಿದ್ಯಾಪಾಸು 1500 ರೂ. : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ವಾಯು ವಜ್ರ ಮತ್ತು ಬೆಂಗಳೂರು ರೌಂಡ್ಸ್ ಹೊರತುಪಡಿಸಿ ಉಳಿದ ಬಸ್ಸುಗಳಲ್ಲಿ ಸಂಚರಿಸಬಹುದು. [ಹೊಸದಾಗಿ ನೀರಿನ ಸಂಪರ್ಕ ಪಡೆಯುವುದು ಹೇಗೆ?]

ವಾಯು ವಜ್ರ ಗೋಲ್ಡ್‌ 3350 ರೂ. : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ವಾಯುವಜ್ರ ಸೇರಿದಂತೆ ಬಿಎಂಟಿಸಿಯ ಎಲ್ಲಾ ಹವಾನಿಯಂತ್ರಿತ ಮತ್ತು ಹವಾ ನಿಯಂತ್ರಣ ರಹಿತ ಬಸ್ಸುಗಳಲ್ಲಿ ಪ್ರಯಾಣಿಸಬಹುದಾಗಿದೆ.

ಪಾಸುದಾರರಿಗೆ ವಿಶೇಷ ಸೌಲಭ್ಯ : ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪಾಸು ಹೊಂದಿರುವವರಿಗೆ ವಿಶೇಷ ಸೌಲಭ್ಯಗಳನ್ನು ನೀಡುತ್ತದೆ. ಪಾಸು ಹೊಂದಿದವರು ಸಮಯದ ನಿರ್ಬಂಧವಿಲ್ಲದೆ/ಯಾವುದೇ ಸ್ಥಳದಲ್ಲಿ ಅಪಘಾತದಿಂದ ಮರಣ ಹೊಂದಿದ್ದಲ್ಲಿ ಅಥವಾ ಸಂಪೂರ್ಣ ಅಂಗವಿಕಲತೆ ಉಂಟಾದಲ್ಲಿ 2.00 ಲಕ್ಷ ರೂ. ಪರಿಹಾರ ನೀಡಲಾಗುತ್ತದೆ.

ವೈದ್ಯಕೀಯ ವೆಚ್ಚ ಮರುಪಾವತಿ : ಪಾಸು ಹೊಂದಿದವರು ವಾಹನ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗಳಲ್ಲಿ ಒಳರೋಗಿ ಚಿಕಿತ್ಸೆ ಪಡೆದಿದ್ದಲ್ಲಿ, ವೈದ್ಯಕೀಯ ವೆಚ್ಚದ ಬಿಲ್ಲುಗಳನ್ನು ಪರಿಶೀಲಿಸಿ ಗರಿಷ್ಟ ರೂ.30,000ಗಳವರೆಗೆ ವೈದ್ಯಕೀಯ ವೆಚ್ಚದ ಮರುಪಾವತಿ ನೀಡಲಾಗುವುದು.

ವಜ್ರ ಮತ್ತು ವಾಯುವಜ್ರ ಪಾಸುದಾರರು : ವಜ್ರ ಪಾಸು ಹೊಂದಿರುವವರು ಯಾವುದೇ ವಿಧವಾದ ವಾಹನ ಅಪಘಾತದಲ್ಲಿ ಮೃತಪಟ್ಟಲ್ಲಿ ಅಥವಾ ಶಾಶ್ವತ ಅಂಗವಿಕಲತೆ ಉಂಟಾದಲ್ಲಿ ರೂ.5 ಲಕ್ಷ ಹಾಗೂ ವಾಯುವಜ್ರ ಪಾಸುದಾರರಿಗೆ 10.00 ಲಕ್ಷಗಳವರೆಗಿನ ಸ್ವಯಂಚಾಲಿತ ಅಪಘಾತ ವಿಮಾ ಸೌಲಭ್ಯವಿದೆ.

ವೈದ್ಯಕೀಯ ವೆಚ್ಚ ಮರುಪಾವತಿ : ವಜ್ರ ಮತ್ತು ವಾಯುವಜ್ರ ಪಾಸು ಹೊಂದಿದವರು ವಾಹನ ಅಪಘಾತದಿಂದ ಗಾಯಗೊಂಡು ಆಸ್ಪತ್ರೆಗಳಲ್ಲಿ ಒಳರೋಗಿ ಚಿಕಿತ್ಸೆ ಪಡೆದಿದ್ದಲ್ಲಿ, ವೈದ್ಯಕೀಯ ವೆಚ್ಚದ ಬಿಲ್ಲುಗಳನ್ನು ಪರಿಶೀಲಿಸಿ ಗರಿಷ್ಟ ರೂ.50,000 ಗಳವರೆಗೆ ವೈದ್ಯಕೀಯ ವೆಚ್ಚದ ಮರುಪಾವತಿಯನ್ನು ನೀಡಲಾಗುವುದು.

English summary
The Bangalore Metropolitan Transport Corporation (BMTC) issues a variety of monthly passes for regular travelers on the public bus system in the city. This is to make the travel experience a lot simpler and cheaper as the monthly passes ensure that people travel at a discounted price.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X