• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೀಗೊಂದು ಸಮೀಕ್ಷೆ: Work From Home ಬಳಸಿ, ಬೆಂಗಳೂರು ಉಳಿಸಿ!

|
Google Oneindia Kannada News

ಬೆಂಗಳೂರು, ಆಗಸ್ಟ್ 12: ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಬಹುತೇಕ ಮಂದಿ Work From Home ಎನ್ನುವ ಸಂಸ್ಕೃತಿಗೆ ಒಗ್ಗಿಕೊಂಡಿದ್ದಾರೆ. ಈಗ ಕೋವಿಡ್-19 ಸಂಖ್ಯೆ ಇಳಿಕೆಯಾಗುತ್ತಿದ್ದಂತೆ ಜನರೆಲ್ಲ ರಸ್ತೆಗೆ ಇಳಿದಿರುವುದು ಬೆಂಗಳೂರಿನಲ್ಲಿ ಗಿಜಿಗಿಜಿ ವಾತಾವರಣ ಸೃಷ್ಟಿಯಾಗಿದೆ.

ಖಾಲಿ ಖಾಲಿಯಾಗಿದ್ದ ಬೆಂಗಳೂರಿನ ಸುಂದರ ರಸ್ತೆಗಳಲ್ಲಿ ಟ್ರಾಫಿಕ್ಕೋ ಟ್ರಾಫಿಕ್. ಎಲ್ಲಿ ನೋಡಿದರೂ ವಾಹನಗಳ ಜಂಗುಳಿ. ಟ್ರಾಫಿಕ್ ಜಾಮ್ ಜೊತೆಗೆ ವಾಯು ಮಾಲಿನ್ಯವೂ ಹೆಚ್ಚಳವಾಗುತ್ತಿದೆ ಎನ್ನುವ ಅಂಶವನ್ನು ಸಮೀಕ್ಷೆಯೊಂದು ಬಿಚ್ಚಿಟ್ಟಿದೆ.

Work From Home ಅಂತ್ಯ: ಉದ್ಯೋಗಿಗಳತ್ತ ಕೈ ಬೀಸುತ್ತಿರುವ ಕಂಪನಿಗಳು ಯಾವುವು?Work From Home ಅಂತ್ಯ: ಉದ್ಯೋಗಿಗಳತ್ತ ಕೈ ಬೀಸುತ್ತಿರುವ ಕಂಪನಿಗಳು ಯಾವುವು?

ಬೆಂಗಳೂರು ನಗರವನ್ನು ವಾಯುಮಾಲಿನ್ಯ ಮತ್ತು ವಾಹನ ದಟ್ಟಣೆಯಿಂದ ರಕ್ಷಿಸಿರುವುದಕ್ಕೆ Work From Home ಆಯ್ಕೆಯೇ ಬೆಸ್ಟ್ ಎಂದು ಸಮೀಕ್ಷೆಯೊಂದು ಹೇಳಿದೆ. ಅಸಲಿಗೆ ಈಗ ಮತ್ತೊಮ್ಮೆ WFH ಬಗ್ಗೆ ಬೆಂಗಳೂರಿನ ಮಂದಿ ಚರ್ಚೆ ನಡೆಸುತ್ತಿರುವುದು ಏಕೆ?, ಈಗ ಸಮೀಕ್ಷೆಯ ಅಂಶಗಳು ಹೇಳುವುದೇನು? WFH ಮೂಲಕ ಬೆಂಗಳೂರನ್ನು ಸಂರಕ್ಷಿಸುವುದಕ್ಕೆ ಸಾಧ್ಯವೇ ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ಸಮೀಕ್ಷೆಯಲ್ಲಿ 5 ನಗರಗಳ ಟ್ರಾಫಿಕ್ ಬಗ್ಗೆ ಉಲ್ಲೇಖ

ಸಮೀಕ್ಷೆಯಲ್ಲಿ 5 ನಗರಗಳ ಟ್ರಾಫಿಕ್ ಬಗ್ಗೆ ಉಲ್ಲೇಖ

ಫ್ಲೆಕ್ಸಿಬಲ್ ಮತ್ತು ಹೈಬ್ರಿಡ್ ಕೆಲಸದ ಪರಿಸ್ಥಿತಿಯು ಬೆಂಗಳೂರನ್ನು ವಾಯುಮಾಲಿನ್ಯದ ಅಪಾಯಗಳಿಂದ ರಕ್ಷಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಗ್ರೀನ್‌ಪೀಸ್ ಇಂಡಿಯಾದ ವರದಿ ಹೇಳಿದೆ. ಸಿಲಿಕಾನ್ ಸಿಟಿಯ ಟ್ರಾಫಿಕ್ ಮಾಲಿನ್ಯಕ್ಕೆ ಸಂಬಂಧಿಸಿದಂತೆ ನಗರದ ಪ್ರಮುಖ ಐದು ಪ್ರದೇಶಗಳನ್ನು ಅಧ್ಯಯನ ಮಾಡಲಾಗಿದೆ. ಗ್ರೀನ್‌ಪೀಸ್ ಇಂಡಿಯಾ ಸೊಸೈಟಿಯು ಎಂಜಿ ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್, ಬಿಟಿಎಂ ಲೇಔಟ್, ಬಾಪೂಜಿ ನಗರ ಮತ್ತು ಟಿನ್ ಫ್ಯಾಕ್ಟರಿ ಪ್ರದೇಶಗಳಲ್ಲಿ ಪೀಕ್ ಅವರ್ಸ್‌ನಲ್ಲಿ ಭಾರೀ ಟ್ರಾಫಿಕ್ ಜಾಮ್ ಕಂಡು ಬರುತ್ತದೆ. ಸಾಮಾನ್ಯವಾಗಿ ಕೊರೊನಾ ವೈರಸ್ ಸಾಂಕ್ರಾಮಿಕ ಪಿಡುಗಿಗಿಂತ ಪೂರ್ವದಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಮತ್ತು ಲಾಕ್‌ಡೌನ್ ನಂತರದ ಅವಧಿಯಲ್ಲಿ ವಾಯು ಮಾಲಿನ್ಯ ಸೂಚ್ಯಂಕದ ಅಂಕಿ-ಅಂಶಗಳನ್ನು ವಿಶ್ಲೇಷಿಸಲಾಗಿದೆ.

ಲಾಕ್‌ಡೌನ್ ಸಮಯದಲ್ಲಿ ವಾಹನದಟ್ಟಣೆಗೆ ಕಡಿವಾಣ

ಲಾಕ್‌ಡೌನ್ ಸಮಯದಲ್ಲಿ ವಾಹನದಟ್ಟಣೆಗೆ ಕಡಿವಾಣ

ಗೂಗಲ್ ಟ್ರಾಫಿಕ್ ಟ್ರೆಂಡ್‌ಗಳ ಪ್ರಕಾರ, ಲಾಕ್‌ಡೌನ್ ಸಮಯದಲ್ಲಿ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಾಹನ ದಟ್ಟಣೆಯು ಶೇಕಡಾ 60ರಷ್ಟು ಕಡಿಮೆಯಾಗಿತ್ತು. ಇದೂ ಅಲ್ಲದೇ ಲಾಕ್‌ಡೌನ್‌ನಲ್ಲಿ ವಾಹನ ಸಂಚಾರ ಕಡಿಮೆಯಾಗಿದ್ದರಿಂದ ಮಾಲಿನ್ಯದ ಮಟ್ಟವು ಇಳಿಕೆಯಾಗಿತ್ತು. ಪೂರ್ವ ಕೋವಿಡ್ ಸಂದರ್ಅಭದಲ್ಲಿ 95 ಯೂನಿಟ್ ಇದ್ದ ಪ್ರಮಾಣವು 63 ಯೂನಿಟ್‌ಗಳಿಗೆ ಇಳಿಕೆಯಾಗಿತ್ತು ಎಂದು AQI ಸೂಚ್ಯಂಕ ತೋರಿಸಿತ್ತು.

ಸಿಲಿಕಾನ್ ಸಿಟಿಯಲ್ಲಿ ಲಾಕ್‌ಡೌನ್ ಪೂರ್ವ ಪರಿಸ್ಥಿತಿ

ಸಿಲಿಕಾನ್ ಸಿಟಿಯಲ್ಲಿ ಲಾಕ್‌ಡೌನ್ ಪೂರ್ವ ಪರಿಸ್ಥಿತಿ

ರಾಜಧಾನಿಯಲ್ಲಿ ಲಾಕ್‌ಡೌನ್ ತೆರವುಗೊಳಿಸಿದ ನಂತರದಲ್ಲಿ ವಾಯುಮಾಲಿನ್ಯ ಪ್ರಮಾಣ ಲಾಕ್‌ಡೌನ್ ಪೂರ್ವದ ಸ್ಥಿತಿಗೆ ಮರುಳಿದೆ. 2020ರ ಅಕ್ಟೋಬರ್ ತಿಂಗಳಿನಲ್ಲಿದ್ದಷ್ಟು ವಾಯುಮಾಲಿನ್ಯದ ಪ್ರಮಾಣ ದಾಖಲಾಗುತ್ತಿದೆ. "ಐದು ಸಂಚಾರ ದಟ್ಟಣೆ ಕೇಂದ್ರಗಳಲ್ಲಿ 500ಕ್ಕೂ ಹೆಚ್ಚು ಐಟಿ ಮತ್ತು ಬಿಎಂಪಿ ಕಂಪನಿಗಳಿವೆ. ಈ ಕಂಪನಿಗಳು ಲಕ್ಷಗಟ್ಟಲೆ ಜನರಿಗೆ ಉದ್ಯೋಗ ನೀಡಿವೆ. ಲಾಕ್‌ಡೌನ್ ಅವಧಿಯಲ್ಲಿ ಈ ಕಂಪನಿಗಳೆಲ್ಲ WFH ಆಯ್ಕೆಯನ್ನು ನೀಡಿದ್ದು, ವಾಹನ ಸಂಚಾರ ಮತ್ತು ಜನದಟ್ಟಣೆ ಕುಸಿತ ಕಂಡಿತ್ತು. ಈ ಭಾಗದಲ್ಲಿ ಉತ್ತಮ ಗುಣಮಟ್ಟದ ಗಾಳಿ ಮತ್ತು ವಾಯುಮಾಲಿನ್ಯ ನಿಯಂತ್ರಣದಲ್ಲಿ ಇದೇ ಐಟಿ ಕಂಪನಿಗಳ ಪಾತ್ರ ಪ್ರಮುಖವಾಗಿತ್ತು ಎಂದು ಸಮೀಕ್ಷಾ ವರದಿ ತಿಳಿಸಿದೆ.

ಉದ್ಯೋಗಿಗಳಿಗೆ WFH ಆಯ್ಕೆ ನೀಡುವುದೇ ಉತ್ತಮ

ಉದ್ಯೋಗಿಗಳಿಗೆ WFH ಆಯ್ಕೆ ನೀಡುವುದೇ ಉತ್ತಮ

ಸಾಫ್ಟವೇರ್ ಮತ್ತು ಐಟಿ ಕಂಪನಿಗಳು ಸಾಂಕ್ರಾಮಿಕ ಪಿಡುಗಿಗಾಗಿ ಎದುರು ನೋಡಬೇಕಾಗಿಲ್ಲ. ತಮ್ಮ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ಕಂಪನಿಗಳು WFH ಮಾಡುವುದಕ್ಕೆ ಅವಕಾಶ ನೀಡುವುದೇ ಸೂಕ್ತವಾಗಿರುತ್ತದೆ. ಇದರಿಂದ ಕಂಪನಿಗಳು ಮತ್ತು ಉದ್ಯೋಗಿಗಳಿಗೂ ಲಾಭವಾಗಲಿದೆ. ಉತ್ತಮ ವಾತಾವರಣದಲ್ಲಿ ಉದ್ಯೋಗಿಗಳು ತಮ್ಮ ಕಾರ್ಯವನ್ನು ನಿರ್ವಹಿಸಲಿದ್ದು, ವೈಯಕ್ತಿಕ ಬದುಕು ಮತ್ತು ಔದ್ಯೋಗಿಕ ಬದುಕನ್ನು ಸರಿದೂಗಿಸಿಕೊಂಡು ಹೋಗುವುದಕ್ಕೆ ಅನುವು ಮಾಡಿಕೊಟ್ಟಂತೆ ಆಗುತ್ತದೆ ಎನ್ನುವುದು ಸಮೀಕ್ಷೆಯಲ್ಲಿ ಉಲ್ಲೇಖಿಸಿದ ಮತ್ತೊಂದು ಅಂಶವಾಗಿದೆ.

ಗ್ರೀನ್‌ಪೀಸ್ ಕ್ಯಾಂಪೇನ್ ಮ್ಯಾನೇಜರ್ ಅವಿನಾಶ್ ಚಾನ್ಕಲ್ ಮಾತನಾಡಿ, ದಟ್ಟಣೆಯ ನಗರದಲ್ಲಿ ಸಾರಿಗೆ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. "ಈ ವರದಿಯೊಂದಿಗೆ, ನಗರದ ಗಾಳಿಯ ಗುಣಮಟ್ಟದಲ್ಲಿ ದೊಡ್ಡ ಉದ್ಯೋಗದಾತ ಕಂಪನಿಗಳು ವಹಿಸಬಹುದಾದ ಮಹತ್ವದ ಪಾತ್ರದ ಮೇಲೆ ಬೆಳಕು ಚೆಲ್ಲುವ ಗುರಿಯನ್ನು ನಾವು ಹೊಂದಿದ್ದೇವೆ," ಎಂದು ಹೇಳಿದ್ದಾರೆ.

Recommended Video

   ಹೆಣ್ಮಕ್ಳೇ ಸ್ಟ್ರಾಂಗು ಗುರು ಅಂತ ರೆಡಿಯಾಗಿ‌ ಮಹಿಳಾ ಐಪಿಎಲ್‌ಗೆ | *Cricket | OneIndia Kannada
   English summary
   How Bengaluru control air pollution and traffic jam from Work from home option. Know More.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X