ಬೆಂಗಳೂರಿನಲ್ಲಿ 3ನೇ ಆಸ್ಪತ್ರೆ ತೆರೆದ Hosmat : ಎಲ್ಲಿ, ಏನೇನು ಸೌಲಭ್ಯ?
ಬೆಂಗಳೂರು, ಸೆಪ್ಟೆಂಬರ್ 8: ಹಾಸ್ಮಾಟ್ ಆಸ್ಪತ್ರೆಯು ನಗರದ ಸದಾಶಿವ ನಗರದಲ್ಲಿ ತನ್ನ ಮೂರನೇ ಆಸ್ಪತ್ರೆ ಪ್ರಾರಂಭಿಸಿತು. ಈ ಹೊಸ ಆಸ್ಪತ್ರೆಯನ್ನು ಹಾಸ್ಮಾಟ್ ಸ್ಪೆಷಾಲಿಟಿ ಹಾಸ್ಪಿಟಲ್ ಎಂದು ಕರೆಯಲಾಗಿದೆ ಮತ್ತು ಸದಾಶಿವ ನಗರದ ಬಳ್ಳಾರಿ ರಸ್ತೆಯ ಅರಮನೆ ಆವರಣದ ಎದುರಿನಲ್ಲಿದೆ (ಗೇಟ್ ನಂಬರ್ 5).
ಈ ಸೌಲಭ್ಯವು ಏಳು ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ಹೊಂದಿದೆ ಮತ್ತು ಕೀಲು ಬದಲಾವಣೆಗೆ ಸೆಂಟರ್ ಆಫ್ ಎಕ್ಸಲೆನ್ಸ್, ಕಾಲು ಮತ್ತು ಪಾದ, ಆರ್ಥ್ರೊಪ್ಲಾಸ್ಟಿ ಮತ್ತು ಲಿಗಮೆಂಟ್ಸ್, ಪೀಡಿಯಾಟ್ರಿಕ್ ಆರ್ಥೊ, ಅಪಘಾತ ಮತ್ತು ಗಾಯಗಳು, ತಲೆಯ ಗಾಯ, ಪ್ಲಾಸ್ಟಿಕ್ ಮತ್ತು ರೀಕನ್ಸ್ ಟ್ರಕ್ಟಿವ್ ಸರ್ಜರಿ, ರೀಇಂಪ್ಲಾಟೇಷನ್, ನ್ಯೂರೊಸರ್ಜರಿ, ಬ್ರೈನ್ ಮತ್ತು ಸ್ಪೈನ್ ಒಳಗೊಂಡು ಎಲ್ಲ ಬಗೆಯ ಶಸ್ತ್ರಚಿಕಿತ್ಸೆಯ ಸ್ಪೆಷಾಲಿಟಿಗಳಿವೆ.

ಹಾಸ್ಮಾಟ್ ಎಂದರೆ ಹಾಸ್ಪಿಟಲ್ಫಾರ್ ಆರ್ಥೊಪಿಡಿಕ್, ಸ್ಪೋರ್ಟ್ ಮೆಡಿಸಿನ್, ಆರ್ಥ್ರೈಟಿಸ್ ಅಂಡ್ ಆಕ್ಸಿಡೆಂಟ್ ಟ್ರೌಮಾ ಎಂದರ್ಥ. 3 ಆಸ್ಪತ್ರೆಗಳು, 7 ಆರ್ಥೊಪಿಡಿಕ್ ಸಬ್-ಸ್ಪೆಷಾಲಿಟಿಗಳನ್ನು ಹೊಂದಿರುವ ಹಾಸ್ಮಾಟ್ ಭಾರತದಲ್ಲಿ ಅತ್ಯಂತ ದೊಡ್ಡ ಮತ್ತು ಸುಸಜ್ಜಿತ ಆರ್ಥೊಪಿಡಿಕ್ ಆಸ್ಪತ್ರೆಗಳಲ್ಲಿ ಒಂದಾಗಿದ್ದು 550 ಹಾಸಿಗೆಗಳು ಮತ್ತು 28 ಆಧುನಿಕ ಆಪರೇಷನ್ ಥಿಯೇಟರ್ ಗಳನ್ನು ಹೊಂದಿದೆ.
1992ರಲ್ಲಿ ಮ್ಯಾಗ್ರಥ್ ರಸ್ತೆಯಲ್ಲಿ ಪ್ರಾರಂಭವಾದ ದಿನದಿಂದಲೂ 30 ವರ್ಷಗಳ ಪರಂಪರೆ ಹೊಂದಿದ್ದು ಭಾರತದಿಂದ ಮತ್ತು ಇತರೆ ದೇಶಗಳ 15 ಲಕ್ಷಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಿದೆ ಮತ್ತು ಕಳೆದ 30 ವರ್ಷಗಳಿಂದ ಆರ್ಥೊಪಿಡಿಕ್ ಮತ್ತು ಗಾಯಗಳ ಕ್ಷೇತ್ರದಲ್ಲಿ ಮುಂಚೂಣಿಯ ಕೆಲಸ ಮಾಡುತ್ತಿದೆ.
ಹಾಸ್ಮಾಟ್ ಜನವರಿ 2022ರಂದು ಕಲ್ಯಾಣನಗರದಲ್ಲಿ ತನ್ನ 2ನೇ ಆಸ್ಪತ್ರೆ ಪ್ರಾರಂಭಿಸಿತು. ಈ ಸಮೂಹದಲ್ಲಿ 20 ಟಾಪ್ ಆರ್ಥೊಪಿಡಿಕ್ ಕನ್ಸಲ್ಟೆಂಟ್ ಗಳನ್ನು ಹೊಂದಿದೆ, 3ನೇ ಕೀಲು ಬದಲಾವಣೆಗೆ ತಲೆಮಾರಿನ ಆಟೊಮ್ಯಾಟಿಕ್ ರೊಬೊಟಿಕ್ ಸಿಸ್ಟಂ ಹೊಂದಿದ್ದು ಅದು ಅದ್ಭುತ ಫಲಿತಾಂಶಗಳನ್ನು ನೀಡಲು ನೆರವಾಗುತ್ತದೆ ಮತ್ತು ಭಾರತದಲ್ಲಿ ಅತ್ಯಂತ ಕಡಿಮೆ ಸೋಂಕಿನ ಪ್ರಮಾಣ ಹೊಂದಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಹಾಸ್ಮಾಟ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಡಾ.ಥಾಮಸ್ ಚಾಂಡಿ, "ನಮ್ಮ ತಂಡವು ಬೆಂಗಳೂರಿನಲ್ಲಿ ಮೂರು ಆಸ್ಪತ್ರೆಗಳನ್ನು ಹೊಂದಲು ಬಹಳ ಸಂತೋಷ ಹೊಂದಿದೆ. ಪ್ರತಿ ಆಸ್ಪತ್ರೆಯೂ ರೋಗಿಗಳು ಗಾಯಗೊಂಡಾಗ ತಕ್ಷಣವೇ ತಲುಪಲು ಅನುಕೂಲವಾಗುವಂತೆ ರೂಪಿಸಲಾಗಿದೆ".
"ನಗರವು ಬೆಳೆಯುತ್ತಿದೆ ಮತ್ತು ಟ್ರಾಫಿಕ್ ಹೆಚ್ಚಾಗುತ್ತಿರುವುದರಿಂದ ಶಸ್ತ್ರಚಿಕಿತ್ಸೆಯ ಪಡೆಯಲು ಬಯಸುವ ರೋಗಿಗಳು ಅವರ ಸ್ಥಳಕ್ಕೆ ಹತ್ತಿರದಲ್ಲಿರುವ ಹಾಸ್ಮಾಟ್ ಆಸ್ಪತ್ರೆಯನ್ನು ಆಯ್ಕೆ ಮಾಡಿಕೊಳ್ಳಬಹುದು" ಎಂದು ಡಾ.ಚಾಂಡಿ ಹೇಳಿದ್ದಾರೆ.












Click it and Unblock the Notifications