Get Updates
Get notified of breaking news, exclusive insights, and must-see stories!

ಜಮೀನಿನ ಗಲಾಟೆಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತನ ಕೊಲೆಗೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ: ಶರತ್ ಬಚ್ಚೇಗೌಡ

ಬೆಂಗಳೂರು, ಮೇ 17: ಜಮೀನು ವಿಚಾರವಾಗಿ ಕಿತ್ತಾಡಿಕೊಂಡು ನಡೆದ ಬಿಜೆಪಿ ಕಾರ್ಯಕರ್ತನ ಕೊಲೆಯನ್ನು ಕಾಂಗ್ರೆಸ್‌ನವರ ಮೇಲೆ ಹಾಕುವ ಎಲ್ಲ ಪ್ರಯತ್ನಗಳು ನಡೆದಿವೆ ಎಂದು ಶಾಸಕ ಶರತ್ ಬಚ್ಚೇಗೌಡ ಎಂಟಿಬಿ ನಾಗರಾಜ್ ವಿರುದ್ಧ ಕಿಡಿ ಕಾರಿದ್ದಾರೆ.

ಬುಧವಾರ ಬೆಂಡಿಗಾನಹಳ್ಳಿಯ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಹೊಸಕೋಟೆ ತಾಲೂಕಿನ ಡಿ.ಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದ ಬಿಜೆಪಿ ಕಾರ್ಯಕರ್ತ ಕೃಷ್ಣಪ್ಪ ಎಂಬುವವರ ಕೊಲೆ ನಡೆದಿತ್ತು. ಅದನ್ನು ಕಾಂಗ್ರೆಸ್‌ನವರ ಮೇಲೆ ಎತ್ತಿಹಾಕುವ ಪ್ರಯತ್ನ ನಡೆಯುತ್ತಿದೆ. ಅಸಲಿಗೆ ಈ ಕೊಲೆ ಜಮೀನು ವ್ಯಾಜ್ಯದ ವಿಚಾರವಾಗಿ ನಡೆದಿದೆ ಎಂದು ಅವರು ಸ್ಪಷ್ಟಪಡಿಸಿದರು.

Sharath Bachegowda slams on BJP

ಘಟನೆಗೂ ಕಾಂಗ್ರೆಸ್ ಕಾರ್ಯಕರ್ತರಿಗೆ ಸಂಬಂಧವಿಲ್ಲ. ಜಮೀನು ವಿಚಾರಕ್ಕಾಗಿ ಕೃಷ್ಣಪ್ಪ ಮತ್ತು ಗಣೇಶಪ್ಪ ಸಹೋದರರ ಮಧ್ಯೆ ಜಗಳ ನಡೆದಿದೆ. ಅವರಿಬ್ಬರು ಎರಡು ತಿಂಗಳ ಹಿಂದೆ ಬಿಜೆಪಿ ಸೇರಿದ್ದರು. ನಂತರ ಎಂಟಿಬಿ ನಾಯಕರ ಜೊತೆಗೆ ಫೋಟೊ ತೆಗೆಸಿಕೊಂಡಿದ್ದರು. ಇವರಿಬ್ಬರ ಪೈಕಿ ಜಗಳದಲ್ಲಿ ಕೃಷ್ಣಪ್ಪ ಅವರು ಮೃತಪಟ್ಟಿದ್ದಾರೆ.

ನನ್ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ

ಈ ಕೊಲೆ ಹಿಂದೆ ಜಮೀನಿನ ವ್ಯಾಜ್ಯವಿದೆ, ಹೊರತು ಕಾಂಗ್ರೆಸ್‌ ಗೂ ಈ ಕೃಷ್ಣಪ್ಪನವರ ಕೊಲೆಗೂ ಯಾವುದೇ ಸಂಬಂಧವಿಲ್ಲ. ಹೀಗಿದ್ದರು ಕಾಂಗ್ರೆಸ್‌ನವರಿಂದ ಕೃತ್ಯ ನಡೆದಿದೆ ನಡೆದಿದೆ ಎಂಬಂತೆ ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿತ್ತು. ಈ ಮೂಲಕ ನನ್ನ ಹೆಸರಿಗೆ ಮಸಿ ಬಳೆಯುವ ದುರುದ್ದೇಶದಿಂದಲೇ ಇಂತಹ ವಿಫಲತ ಪ್ರಯತ್ನ ಮಾಡಲಾಗಿದೆ ಎಂದು ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Sharath Bachegowda slams on BJP

ಕೊಲೆ ಪ್ರಕರಣ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ ದೂರಿನಲ್ಲಿ ಕಾಂಗ್ರೆಸ್ ಕುರಿತಾಗಿ ಯಾವುದೇ ಪ್ರಸ್ತಾಪ ಮಾಡಿಲ್ಲ ಎಂದ ಶರತ್ ಬಚ್ಚೇಗೌಡರು, ಮೃತರಿಗೆ ಇದೇ ವೇಳೆ ಸಂತಾಪ ಸೂಚಿಸಿದ್ದಾರೆ.

ಬಿಜೆಪಿ ಪಕ್ಷದವರಿಗೆ ಸೋಲಿನ ಹತಾಶೆ ಕಾಡುತ್ತಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವಾಗಿದ್ದನ್ನು ಅವರಿಗೆ ತೆಡೆದುಕೊಳ್ಳಲು ಆಗದೇ ಹಿಗೆಲ್ಲ ಮಾಡುತ್ತಿದ್ದಾರೆ. ನಗರದ ಪಾವರ್ತಿಪುರದ ಎಂಟಿಬಿ ವೃತ್ತ ಧ್ವಂಸ ಘಟನೆಯನ್ನು ಅವರು ಖಂಡಿಸಿದ್ದಾರೆ. ಯನಕುಂಟೆ ಅಂಬೇಡ್ಕರ್ ಪ್ರತಿಮೆಗೆ ಬೆಂಕಿ ಇಟ್ಟವರನ್ನು ಆದಷ್ಟು ಶೀಘ್ರವೇ ಬಂಧಿಸಲಾಗುವುದು ಎಂದು ಅವರು ತಿಳಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+