• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೂವಿನಹೊಳೆ ಪ್ರತಿಷ್ಠಾನದಿಂದ ಸಾಧಕರಿಗೆ ವಿಶ್ವಾತ್ಮ ಪ್ರಶಸ್ತಿ

By Mahesh
|

ಬೆಂಗಳೂರು, ಆಗಸ್ಟ್ 19: ಹೂವಿನಹೊಳೆ ಪ್ರತಿಷ್ಠಾನ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಅನಿಕೇತನ ಕನ್ನಡ ಬಳಗ ಮತ್ತು ಕುವೆಂಪು ಕಲಾ ನಿಕೇತನ ಸಹಯೋಗದಲ್ಲಿ ಮೂವರು ಸಾಧಕರಿಗೆ ವಿಶ್ವಾತ್ಮ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

ಆಗಸ್ಟ್ 20 ರಂದು ಸಂಜೆ 5 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತು , ಚಾಮರಾಜಪೇಟೆ, ಬೆಂಗಳೂರು ಇಲ್ಲಿ ವಿಶ್ವಾತ್ಮಕ ನೆಲೆಯಲ್ಲಿ ಬದುಕಿನ ಉದ್ದಕ್ಕೂ ಯಾವುದೇ ಜಾತಿ -ಧರ್ಮ - ಮತಕ್ಕೆ ಸೀಮಿತ ವಾಗದೆ ಜಗವೆಲ್ಲಾ ಒಂದೇ - ಮನುಕುಲವೆಲ್ಲ ಒಂದೇ ಎನ್ನುವ ರೀತಿ ತಮ್ಮ ತಮ್ಮ ಕ್ಷೇತ್ರದಲ್ಲಿ ಮಾನವೀಯ ಕಳಕಳಿಯ ಸೇವೆಯನ್ನು ಮಾಡುತ್ತಿರುವ ಮೂರು ಜನ ಸಾಧಕರನ್ನು ''ವಿಶ್ವಾತ್ಮ'' ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ,ಪ್ರಶಸ್ತಿಯು ತಲಾ 25 ಸಾವಿರ ನಗದು, ಸ್ಮರಣಿಕೆ , ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಈ ಪ್ರಶಸ್ತಿಯನ್ನು ನಾಡಿನ ಹಿರಿಯ ಚೇತನಗಳಾದ ನ್ಯಾಯಮೂರ್ತಿ ಡಾ . ಎಂ . ಎನ್. ವೆಂಕಟಾಚಲಯ್ಯ , ನ್ಯಾಯಮೂರ್ತಿ ಎ. ಜೆ ಸದಾಶಿವ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್ . ಎಸ್. ದೊರೆಸ್ವಾಮಿ, ಹಿರಿಯ ಪತ್ರಕರ್ತರಾದ ಪಿ. ರಾಮಯ್ಯ , ಹಿರಿಯ ಸಾಹಿತಿಗಳಾದ ಪ್ರೊ.ಚಂಪಾ, ಡಾ. ಆರ್. ಕೆ ನಲ್ಲೂರು ಪ್ರಸಾದ್, ಹೀಗೆ ವಿವಿಧ ರಂಗದ ಹಿರಿಯ - ಕಿರಿಯ ತಲೆಮಾರಿನ 50 ಕ್ಕೂ ಹೆಚ್ಚು ಗಣ್ಯರ ಸಲಹೆ ಸೂಚನೆಯನ್ನು ಪಡೆದು ಪ್ರತಿ ವರ್ಷ ಇಲ್ಲವೇ ಮೂರು ವರ್ಷಕ್ಕೆ ಒಮ್ಮೆ ಈ ಪ್ರಶಸ್ತಿಯನ್ನು ನೀಡಲು ಉದ್ದೇಶಿಸಿದೆ.

2015 ನೇ ಸಾಲಿನ ಪ್ರಶಸ್ತಿಗೆ ವೃಕ್ಷ ಮಾತೆ - ಜಗದ ನೆರಳು ಶ್ರೀಮತಿ ಸಾಲುಮರದ ತಿಮ್ಮಕ್ಕ, ವಿಶ್ವಾತ್ಮಕ ನೆಲೆಯ ಚಿಂತಕ , ತಾಯಿ ಪ್ರೀತಿಯ ಕವಿ ನಾಗತಿಹಳ್ಳಿ ರಮೇಶ್ ಹಾಗು ವಿಶಿಷ್ಟತ ಚೇತನಗಳ ಸ್ಪೂರ್ತಿಯ ಸಂಕೇತ ಕುಮಾರಿ ಅಶ್ವಿನಿ ಅಂಗಡಿ ಅವರುಗಳನ್ನು ಆಯ್ಕೆ ಮಾಡಲಾಗಿದೆ,

ಈ ಕಾರ್ಯಕ್ರಮದ ಉದ್ಘಾಟನೆಯನ್ನು ನ್ಯಾಯಮೂರ್ತಿ ಎ. ಜೆ ಸದಾಶಿವ ಅವರು ಮಾಡಲಿದ್ದು,ಅಧ್ಯಕ್ಷತೆಯನ್ನು ಹಿರಿಯ ಪತ್ರಕರ್ತರಾದ ಪಿ. ರಾಮಯ್ಯ ಅವರು ವಹಿಸಲಿದ್ದಾರೆ.

ಪ್ರಶಸ್ತಿ ಪ್ರದಾನವನ್ನು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಹೆಚ್ . ಎಸ್. ದೊರೆಸ್ವಾಮಿ ಅವರು ಮಾಡಲಿದ್ದಾರೆ, ಮುಖ್ಯ ಅತಿಥಿಗಳಾಗಿ ಪ್ರೊ. ಚಂಪಾ ಅವರು, ಡಾ. ನಲ್ಲೂರು ಪ್ರಸಾದ್ ಅವರು, ಡಾ. ಮಾಲತಿ ಕೆ. ಹೊಳ್ಳ ಅವರು ವೇದಿಕೆಯಲ್ಲಿ ಉಪಸ್ಥಿತರಾಗಿರುತ್ತಾರ,

ವಿಶೇಷ ಆಹ್ವಾನಿತರಾಗಿ ಬಿ. ಕೃಷ್ಣಪ್ಪ ಅವರು, ರಾಕೇಶ್ ಅಗರ್ ವಾಲ್ ಅವರು, ಕೆ. ನರಸಿಂಹ ಮೂರ್ತಿ ಅವರು, ಸರ್ಕಾರಿ ನೌಕರರ ಸಂಘದ ಕೆ. ಹೆಚ್ . ರಾಮು ಅವರು, ಬಿ.ಮಂಜೇ ಗೌಡ ಅವರು, ಅನಿಕೇತನ ಮಾಯಣ್ಣ , ಕುವೆಂಪು ಕಲಾ ನಿಕೇತನದ ಡಿ .ಪ್ರಕಾಶ್ ಹಾಗೂ ಪ್ರಶಾಂತ್ ಕಲ್ಲೂರು ಅವರುಗಳು ಸಹ ಜೊತೆಯಾಗಿ ಇರುತ್ತಾರೆ


ನಾಗತಿಹಳ್ಳಿ ರಮೇಶ್ ಅವರ ಅಯ್ದ ಹಾಡುಗಳ ನೃತ್ಯ ರೂಪಕ ವನ್ನು ಪ್ರಶಾಥ್ ಸಿದ್ದಿ ನಿರ್ದೇಶನದಲ್ಲಿ ವೇಷ ರಂಗ ತಂಡದಲ್ಲಿ ಪ್ರಸ್ತುತ ಪಡಿಸಲಿದ್ದಾರೆ..

ನಂದಿ ಜೆ. ಹೂವಿನಹೊಳೆ
ಸ್ಥಾಪಕ- ಅಧ್ಯಕ್ಷ : ಹೂವಿನಹೊಳೆ ಪ್ರತಿಷ್ಠಾನ
ನಾಯ್ಕಲ್ ದೊಡ್ಡಿ ಚಂದ್ರು , ಮಂಜು ಎಂ . ದೊಡ್ಡಮನಿ
ದೂ : 8088081008, 9008666668, 7353434040
E-MAIL: nimmanandi@gmail.com
BLOG: nimmanandi.blogspot.in

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
Hoovina hole Trust led By Nandi J Hoovinahole in association with Anikethana, Kuvempu kala Niketan is presenting Vishwathma Award to three eminent persons. The event is scheduled on August 20 at Kannada Sahithya Parishath, Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more