ಸಿದ್ದರಾಮಯ್ಯ ಮನೆಯಲ್ಲಿ ಬಾಂಬ್, ಅನಾಮಿಕನ ಕರೆ
ಬೆಂಗಳೂರು, ಫೆ. 19 : ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ಬಾಂಬ್ ಇಟ್ಟಿರುವುದಾಗಿ ಅನಾಮಿಕನೊಬ್ಬ ಪೊಲೀಸರಿಗೆ ಕರೆ ಮಾಡಿ ಬುಧವಾರ ರಾತ್ರಿ ಆತಂಕದ ವಾತಾವರಣ ನಿರ್ಮಾಣ ಮಾಡಿದ್ದ. ಈ ಕುರಿತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬುಧವಾರ ರಾತ್ರಿ ಬೆಂಗಳೂರು ನಗರ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದ ವ್ಯಕ್ತಿ 'ನಾನು ಪಾಕಿಸ್ತಾನದಿಂದ ಬಂದಿದ್ದೇನೆ, ಸಿಎಂ ಸಿದ್ದರಾಮಯ್ಯ ಅವರ 'ಕಾವೇರಿ' ನಿವಾಸದಲ್ಲಿ ಬಾಂಬ್ ಇಟ್ಟಿದ್ದು, ಕೆಲವು ಕ್ಷಣಗಳಲ್ಲಿ ಅದು ಸ್ಫೋಟಗೊಳ್ಳಲಿದೆ' ಎಂದು ಹೇಳಿದ್ದ.[ಚರ್ಚ್ ಸ್ಟ್ರೀಟ್ ಸ್ಫೋಟ, ಸುಳಿವು ಲಭ್ಯ]

ಈ ಬಗ್ಗೆ ಮಾಹಿತಿ ಪಡೆದ ತಕ್ಷಣ ಹಿರಿಯ ಪೊಲೀಸ್ ಅಧಿಕಾರಿಗಳು, ಬಾಂಬ್ ನಿಷ್ಕ್ರಿಯ ದಳದೊಂದಿಗೆ ಸಿಎಂ ನಿವಾಸಕ್ಕೆ ಧಾವಿಸಿದರು. ಕೆಲವು ಹೊತ್ತು ಹುಡುಕಾಟ ನಡೆಸಿದ ಬಳಿಕ ಇದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ತಿಳಿದುಬಂತು. [ಬೆಂಗಳೂರು ಪೊಲೀಸ್ ಆಯುಕ್ತರಿಗೆ ಸುಸ್ವಾಗತ]
ಬಾಂಬ್ ಕರೆಯಿಂದಾಗಿ ಕೆಲವು ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಈ ಹುಸಿ ಬಾಂಬ್ ಬೆದರಿಕೆ ಕರೆ ಕುರಿತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಅನಾಮಿಕ ವ್ಯಕ್ತಿ ಮೊಬೈಲ್‌ನಿಂದ ಕರೆ ಮಾಡಿದ್ದು ಆತನ ಸುಳಿವು ಪತ್ತೆ ಹಚ್ಚಲು ಪೊಲೀಸರಿಗೆ ಸಹಾಯವಾಗಿದೆ.
ಹುಸಿ ಬಾಂಬ್ ಕರೆ ಮಾಡಿದ ಅರೋಪಿಯ ಸುಳಿವು ಪತ್ತೆಯಾಗಿದೆ. ಆರೋಪಿಯನ್ನು ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ಇದು ಕಿಡಿಗೇಡಿಯ ಕೆಲಸವಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.












Click it and Unblock the Notifications