• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ನನ್ನ ಅಪ್ಪನ ಹೆಸರೆತ್ತಬೇಡಿ"; ಮಾಜಿ ಸಿಎಂಗೆ ತಾಕೀತು ಮಾಡಿದ ಹಿರಿಯೂರು ಶಾಸಕಿ

By Chidananda Maskal
|
Google Oneindia Kannada News
   ಸಿದ್ದರಾಮಯ್ಯಗೆ ತಿರುಗೇಟು ಕೊಟ್ಟ ಪೂರ್ಣಿಮ ಶ್ರೀನಿವಾಸ್ |Oneindia kannada

   ಬೆಂಗಳೂರು, ನವೆಂಬರ್ 20: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಗರಂ ಆಗಿದ್ದಾರೆ. "ನನ್ನ ಅಪ್ಪನ ಹೆಸರು ಹೇಳಿಕೊಂಡು ಪ್ರಚಾರ ಮಾಡಬೇಡಿ" ಎಂದು ಅವರ ಮೇಲೆ ವಾಗ್ದಾಳಿ ನಡೆಸಿದ್ದಾರೆ.

   "ಸಿದ್ದರಾಮಯ್ಯನವರು ನನ್ನ ತಂದೆಯವರ ಹೆಸರನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವುದು ಬೇಡ. ನನ್ನ ತಂದೆಗೆ ಅಂದು ಮೋಸ ಮಾಡಿದವರು ಅವರು. ಅವರು ಸಿಎಂ ಆಗಬೇಕು ಅಂತ ನಮ್ಮ ತಂದೆಯನ್ನು ತುಳಿದರು. ತಮ್ಮ ಸಿಎಂ ಸ್ಥಾನಕ್ಕೆ ಕುತ್ತು ಬರಬಾರದು ಎಂದು ನಮ್ಮ ತಂದೆಗೆ ಟಿಕೇಟ್ ತಪ್ಪಿಸಿದರು" ಎಂದು ಕಿಡಿಕಾರಿದರು.

   ದಲಿತ ಸಂಸದನ ತಡೆದ ಗ್ರಾಮಸ್ಥರು; ಕ್ಷಮೆ ಕೋರಿದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ದಲಿತ ಸಂಸದನ ತಡೆದ ಗ್ರಾಮಸ್ಥರು; ಕ್ಷಮೆ ಕೋರಿದ ಶಾಸಕಿ ಪೂರ್ಣಿಮಾ ಶ್ರೀನಿವಾಸ್

   "ನಮ್ಮ ತಂದೆ ಕೃಷ್ಣಪ್ಪ ಅವರ ಬಗ್ಗೆ ನಿಜವಾದ ಕಾಳಜಿ ನಿಮಗೆ ಇರಲಿಲ್ಲ. ಇದ್ದಿದ್ದರೆ ಅವತ್ತೇ ಬಸವರಾಜ್‌ಗೆ ಬುದ್ಧಿ ಹೇಳಬಹುದಿತ್ತು. ಅವತ್ತು ಬಸವರಾಜ್‌ನ ದಾಳವಾಗಿ ಬಳಸಿಕೊಂಡಿರಿ. ನಮ್ಮ ತಂದೆ ಮೇಲೆ ಅಭಿಮಾನ ಇದ್ದಿದ್ದರೆ ಅವತ್ಯಾಕೆ ಕಾಂಗ್ರೆಸ್‌ನಿಂದ ನನ್ನನ್ನು ಸಸ್ಪೆಂಡ್ ಮಾಡಿಸಿದ್ರಿ? ಇವತ್ಯಾಕೆ ಬಸವರಾಜ್ ಮೇಲೆ ಗೂಬೆ ಕೂರಿಸುತ್ತೀದ್ದೀರಾ?" ಎಂದು ಸಾಲು ಸಾಲು ಪ್ರಶ್ನೆಗಳ ಸುರಿಮಳೆಗೈದರು.

   ಮಾತು ಉಳಿಸಿಕೊಳ್ಳದ ಯಡಿಯೂರಪ್ಪ, ಗೊಲ್ಲ ಸಮಾಜದ ಆಕ್ರೋಶಮಾತು ಉಳಿಸಿಕೊಳ್ಳದ ಯಡಿಯೂರಪ್ಪ, ಗೊಲ್ಲ ಸಮಾಜದ ಆಕ್ರೋಶ

   "ಬಿಜೆಪಿ ನನ್ನನ್ನು ಶಾಸಕಿಯಾಗಿ ಮಾಡಿದೆ, ಕ್ಷೇತ್ರದ ಜನ ಕೃಷ್ಣಪ್ಪನವರ ಮಗಳಾದ ನನ್ನ ಜೊತೆ ಇರ್ತಾರೆ. ನಾವು ಸಂಪೂರ್ಣವಾಗಿ ಬಸವರಾಜ್‌ರನ್ನು ಒಪ್ಪಿಕೊಂಡಿದ್ದೇವೆ. ಅವರನ್ನು ಗೆಲ್ಲಿಸುತ್ತೇವೆ. ಕಾಂಗ್ರೆಸ್ ನವರು ಚುನಾವಣೆ ಪ್ರಚಾರಕ್ಕೆ ನಮ್ಮ ತಂದೆಯನ್ನು ಬಳಸಿಕೊಳ್ಳುವುದು ಬೇಡ" ಎಂದು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಕೆಆರ್ ‌ಪುರಂನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯಗೆ ಎಚ್ಚರಿಕೆ ನೀಡಿದ್ದಾರೆ.

   English summary
   "Don't campaign in the name of my Dad," said hiriyur mla purnima to siddaramaiah in bengaluru
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X