Get Updates
Get notified of breaking news, exclusive insights, and must-see stories!

ಬೆಂಗಳೂರಿನಲ್ಲಿ ವಾಯುಮಾಲಿನ್ಯ ಅಧಿಕ ಪ್ರಮಾಣ: ಅಧ್ಯಯನ ವರದಿ

ಬೆಂಗಳೂರು, ಮಾರ್ಚ್ 01: ಬೆಂಗಳೂರು ನಗರದ ಪಶ್ಚಿಮ ಭಾಗದಲ್ಲಿ ಮತ್ತು ಬೃಹತ್ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ಹೆಚ್ಚಿನ ಮಟ್ಟದ ವಾಯು ಮಾಲಿನ್ಯ ಕಂಡು ಬಂದಿದೆ ಎಂದು ವಿಜ್ಞಾನ, ತಂತ್ರಜ್ಞಾನ ಮತ್ತು ನೀತಿ ಅಧ್ಯಯನ ಕೇಂದ್ರ (CSTEP) ಸೋಮವಾರ ಬಿಡುಗಡೆ ಮಾಡಿದ ವರದಿ ತಿಳಿಸಿದೆ.

2019 ರಲ್ಲಿ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ಪ್ರದೇಶ, ಕಾನ್ಪುರ ಮತ್ತು ಬೆಂಗಳೂರಿನಲ್ಲಿ 2.5 (PM2.5) ನ ಪ್ರಾದೇಶಿಕ ಮಾದರಿಗಳು, ಹಾಟ್‌ಸ್ಪಾಟ್‌ಗಳು ಮತ್ತು ಗ್ರಾಮೀಣ-ನಗರದ ವೈರುಧ್ಯಗಳನ್ನು ಅಧ್ಯಯನ ಮಾಡಲು ಉಪಗ್ರಹ ಆಧಾರಿತ ಉತ್ಪನ್ನಗಳನ್ನು ಬಳಸಲಾಗಿದೆ.

PM2.5 ಎಂಬುದು ಗಾಳಿಯಲ್ಲಿ ಮಾಲಿನ್ಯವನ್ನು ಉಂಟು ಮಾಡುತ್ತದೆ. ಇದು ಸಣ್ಣ ಮಾಲಿನ್ಯಕಾರಕವಾಗಿದ್ದು, 2.5 ಮೈಕ್ರಾನ್‌ಗಳಿಗಿಂತ ಕಡಿಮೆ ಅಥವಾ ಸಮನಾಗಿರುತ್ತದೆ. ಇದು ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಸಿಲಿಕಾನ್ ಸಿಟಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ಮಿತಿ ಮೀರುತ್ತಿದೆ. ನಗರದ ಎಲ್ಲಾ 10 ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ (ಡಬ್ಲ್ಯುಎಚ್‌ಒ) ಮಾನದಂಡಗಳಿಗಿಂತ ಹೆಚ್ಚಿನ ಮಾಲಿನ್ಯ ದಾಖಲಿಸಿವೆ.

High Levels of Air Pollution Observed in Bengaluru Says Study

"ಬೆಂಗಳೂರು ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ, ವಾರ್ಷಿಕ ವಾಯುಮಾಲಿನ್ಯ ಸರಾಸರಿ PM2.5 35 ಮತ್ತು 55 µg m-3 ರ ನಡುವೆ ಇರುತ್ತದೆ. ರಾಜರಾಜೇಶ್ವರಿ ನಗರ ಮತ್ತು ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ಪಿಎಂ 2.5 ದಾಖಲಾಗಿದೆ. ಪಶ್ಚಿಮ ವಲಯ, ಬೊಮ್ಮನಹಳ್ಳಿ ಮತ್ತು ದಾಸರಹಳ್ಳಿ ನಂತರದ ಸ್ಥಾನದಲ್ಲಿವೆ. ದಾಸರಹಳ್ಳಿ, ರಾಜರಾಜೇಶ್ವರಿ ನಗರ, ಪಶ್ಚಿಮ ವಲಯ, ದಕ್ಷಿಣ ವಲಯ, ಬೊಮ್ಮನಹಳ್ಳಿ, ಮಹದೇವಪುರ ಮತ್ತು ಯಲಹಂಕದಲ್ಲಿ ಹೆಚ್ಚಿನ ಪಿಎಂ 2.5 ಕ್ಲಸ್ಟರ್‌ಗಳನ್ನು ಗುರುತಿಸಲಾಗಿದೆ.

ಎಲ್ಲೆಲ್ಲಿ ವಾಯುಮಾಲಿನ್ಯ ಅಧಿಕ ಪ್ರಮಾಣ?

ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ PM2.5 ಹಾಟ್‌ಸ್ಪಾಟ್‌ಗಳನ್ನು ಗುರುತಿಸಲಾಗಿದೆ ಎಂದು "ಉಪಗ್ರಹ ಆಧಾರಿತ ಮ್ಯಾಪಿಂಗ್ ಮತ್ತು ಭಾರತದಲ್ಲಿ PM2.5 ಕ್ವಾಂಟಿಫಿಕೇಶನ್" ಶೀರ್ಷಿಕೆಯ ವರದಿ ಹೇಳಿದೆ. ಆದಾಗ್ಯೂ, ದೆಹಲಿ-ಎನ್‌ಸಿಆರ್ ಮತ್ತು ಕಾನ್ಪುರ ಪ್ರದೇಶದಲ್ಲಿ PM2.5 ಮಟ್ಟವು ಬೆಂಗಳೂರಿಗಿಂತ ಮೂರು ಪಟ್ಟು ಹೆಚ್ಚಾಗಿದೆ ಎಂದು ಉಲ್ಲೇಖ ಮಾಡಲಾಗಿದೆ.

ದೆಹಲಿಯ ಪೂರ್ವ, ಆಗ್ನೇಯ, ಈಶಾನ್ಯ ಪ್ರದೇಶಗಳಲ್ಲಿ ಮತ್ತು ಶಹದಾರ ಹಾಗೂ ಗುರುಗ್ರಾಮ್, ಫರಿದಾಬಾದ್, ನುಹ್, ಪಲ್ವಾಲ್ ಮತ್ತು ಭರತ್‌ಪುರದಲ್ಲಿ ಹೆಚ್ಚಿನ PM2.5 ಮಟ್ಟ ಕಂಡು ಬಂದಿದೆ. ಕಾನ್ಪುರ ನಗರದಲ್ಲಿ ಹೆಚ್ಚಿನ PM2.5 ಮಟ್ಟಗಳು ದಾಖಲಾಗಿವೆ. ಕಾನ್ಪುರ ಪ್ರದೇಶದ ಹೆಚ್ಚಿನ ನಗರ ವಲಯಗಳನ್ನು PM2.5 ಹಾಟ್‌ಸ್ಪಾಟ್‌ಗಳೆಂದು ಗುರುತಿಸಲಾಗಿದೆ ಎಂದು ಅಧ್ಯಯನ ಹೇಳಿದೆ. ವರದಿಯ ಲೇಖಕರಲ್ಲಿ ಒಬ್ಬರಾದ ಮತ್ತು ಸಿಎಸ್‌ಟಿಇಪಿಯ ಹಿರಿಯ ಸಂಶೋಧನಾ ವಿಜ್ಞಾನಿ ಡಾ ಶ್ರೀಕಾಂತ್ ವಾಕಚೆರ್ಲಾ, ಭಾರತದಲ್ಲಿ ನಿಯಂತ್ರಕ ವಾಯು ಮಾಲಿನ್ಯದ ಮೇಲ್ವಿಚಾರಣೆಯು ಹೆಚ್ಚಾಗಿ ನಗರ ಪ್ರದೇಶಗಳಿಗೆ ಸೀಮಿತವಾಗಿದೆ ಎಂದು ಹೇಳಿದ್ದಾರೆ.

ಸಿಲಿಕಾನ್ ಸಿಟಿಯಲ್ಲಿ ವಾಯು ಮಾಲಿನ್ಯ ಪ್ರಮಾಣ ಮಿತಿ ಮೀರುತ್ತಿದೆ. ನಗರದ ಎಲ್ಲಾ 10 ವಾಯು ಗುಣಮಟ್ಟ ಮೇಲ್ವಿಚಾರಣಾ ಕೇಂದ್ರಗಳಲ್ಲಿ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ (ಡಬ್ಲ್ಯುಎಚ್‌ಒ) ಮಾನದಂಡಗಳಿಗಿಂತ ಹೆಚ್ಚಿನ ಮಾಲಿನ್ಯ ದಾಖಲಿಸಿವೆ. ಈ ಕುರಿತು ಪರಿಸರ ವಕೀಲರ ಗುಂಪು ಗ್ರೀನ್‌ಪೀಸ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ವಾಯು ಮಾಲಿನ್ಯ ಕೇವಲ ಉತ್ತರ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ದೇಶದ ಪ್ರಮುಖ ನಗರಗಳಲ್ಲಿ ಜನರು ವಿಷಯುಕ್ತ ಗಾಳಿ ಸೇವಿಸುವಂತಾ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಗ್ರೀನ್ ಪೀಸ್ ವರದಿಯಲ್ಲಿ ತಿಳಿಸಲಾಗಿದೆ.

"ಭಾರತದ ವರದಿ ಏರ್ಪೋಕ್ಯಾಲಿಪ್ಸ್ IV ಶೇ. 80ಕ್ಕಿಂತ ಹೆಚ್ಚು ನಗರಗಳು/ಪಟ್ಟಣಗಳು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಮೂಲಕ ರಾಷ್ಟ್ರೀಯ ವಾಯು ಗುಣಮಟ್ಟ ಮಾನದಂಡಗಳ (NAAQS) ಅಡಿಯಲ್ಲಿ ಸೂಚಿಸಲಾದ 60µg/m3 ಮಿತಿಯನ್ನು ಮೀರಿದ ಬಗ್ಗೆ ವರದಿ ತಿಳಿಸುತ್ತದೆ. (ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+