ಜಮೀರ್ ಅಹ್ಮದ್ ಗೆಸ್ಟ್ ಹೌಸ್ ನಲ್ಲಿ ಹೈಡ್ರಾಮಾ: ನಿಖಿಲ್ ಕುಮಾರಸ್ವಾಮಿ ಬೆಂಬಲಿಗರ ದಾಂಧಲೆ?

ಗಳಸ್ಯ ಕಂಠಸ್ಯದಂತಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ನಡುವೆ ಸಂಬಂಧ ಹಳಸಿ ಹಲವು ವರ್ಷಗಳಾದವು. ಇತ್ತೀಚಿನ ದಿನಗಳಲ್ಲಂತೂ ಇವರಿಬ್ಬರ ನಡುವೆ ವಾಕ್ಸಮರ ತಾರಕಕ್ಕೇರುತ್ತಿದೆ.

Recommended Video

      ಜಮೀರ್ ಗೆಸ್ಟ್ ಹೌಸ್ ಮೇಲೆ ನಿಖಿಲ್ ಅಭಿಮಾನಿಗಳ ದಾಳಿ, ಎಲ್ಲವೂ ಪುಡಿ ಪುಡಿ | Oneindia Kannada

      ಕುಮಾರಸ್ವಾಮಿಯವರನ್ನು ಪಲ್ಟಿ ಗಿರಾಕಿ ಎಂದು ಕರೆದಿದ್ದ ಜಮೀರ್, ದೇವೇಗೌಡ್ರ ರಾಜಕೀಯವೇ ಬೇರೆ, ಕುಮಾರಸ್ವಾಮಿಯ ರಾಜಕೀಯವೇ ಬೇರೆ. ಹಣಕ್ಕಾಗಿ ಏನು ಬೇಕಾದರೂ ಕುಮಾರಸ್ವಾಮಿ ಮಾಡುತ್ತಾರೆ ಎಂದು ಜರಿದಿದ್ದರು.

      ಈ ನಡುವೆ, ಜಮೀರ್ ಅಹ್ಮದ್ ಒಡೆತನದ ಗೆಸ್ಟ್ ಹೌಸ್ ನಲ್ಲಿ ಬುಧವಾರ (ಜೂನ್ 9) ಹೈಡ್ರಾಮಾ ನಡೆದಿದೆ. ಇದಕ್ಕೆಲ್ಲಾ ನೇರ ಕಾರಣ ಕುಮಾರಸ್ವಾಮಿ ಎಂದು ಆರೋಪಿಸಿದ್ದ ಜಮೀರ್, ಪೊಲೀಸರಿಗೆ ದೂರು ನೀಡುವ ಮಟ್ಟಕ್ಕೆ ಹೋಗಿದ್ದರು.

      ಬೆಂಗಳೂರಿನ ಸದಾಶಿವನಗರದ ಸಿ.ವಿ.ರಾಮನ್ ರಸ್ತೆಯಲ್ಲಿರುವ ಜಮೀರ್ ಅಹ್ಮದ್ ಗೆ ಸೇರಿದ ಅಪಾರ್ಟ್ಮೆಂಟ್ ಅನ್ನು ಹಿಂದೆ ಕುಮಾರಸ್ವಾಮಿ ಬಳಸಿಕೊಳ್ಳುತ್ತಿದ್ದರು. ಆದರೆ, ಈಗ ಅದನ್ನು ಕುಮಾರಸ್ವಾಮಿ ಬಳಸಿಕೊಳ್ಳದೇ, ಪುತ್ರ ನಿಖಿಲ್ ಕುಮಾರಸ್ವಾಮಿ ತಮ್ಮ ಬೆಂಬಲಿಗರೊಂದಿಗೆ ಆಗಾಗ ಇಲ್ಲಿಗೆ ಬರುತ್ತಿದ್ದರು ಎಂದು ಹೇಳಲಾಗುತ್ತಿದೆ.

       ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಈ ಫ್ಲ್ಯಾಟ್ ಅನ್ನು ಬಳಸಿಕೊಳ್ಳುತ್ತಿದ್ದರು

      ಕುಮಾರಸ್ವಾಮಿ ಸಿಎಂ ಆಗಿದ್ದ ವೇಳೆ ಈ ಫ್ಲ್ಯಾಟ್ ಅನ್ನು ಬಳಸಿಕೊಳ್ಳುತ್ತಿದ್ದರು

      ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಈ ಫ್ಲ್ಯಾಟ್ ಅನ್ನು ಆಗಾಗ ಬಳಸಿಕೊಳ್ಳುತ್ತಿದ್ದರು. ಇನ್ನು, ಕುಮಾರಸ್ವಾಮಿ ಬಳಸುತ್ತಿದ್ದ ಯುಬಿ ಸಿಟಿಯ ಬಳಿ ಇರುವ ಮತ್ತೊಂದು ಫ್ಲ್ಯಾಟ್ ಕೂಡಾ ಜಮೀರ್ ಅಹ್ಮದ್ ಒಡೆತನದ್ದು. ಸದಾಶಿವನಗರದ ಫ್ಲ್ಯಾಟ್ ಕೀ ಜಮೀರ್ ಅಹ್ಮದ್ ಬಳಿಯೇ ಇದೆ. ಆದರೆ, ಬುಧವಾರದಂದು ನಿಖಿಲ್ ಕಡೆಯ ಬಾಡಿಗಾರ್ಡ್ ಗಳು ಅಪಾರ್ಟ್ಮೆಂಟಿಗೆ ಹೋಗಿದ್ದಾರೆ.

       ನಿಖಿಲ್ ಕಡೆಯವರಿಂದ ಅಪಾರ್ಟ್ಮೆಂಟಿಗೆ ಅತಿಕ್ರಮ ಪ್ರವೇಶ

      ನಿಖಿಲ್ ಕಡೆಯವರಿಂದ ಅಪಾರ್ಟ್ಮೆಂಟಿಗೆ ಅತಿಕ್ರಮ ಪ್ರವೇಶ

      ನಿಖಿಲ್ ಕಡೆಯವರು ಅಪಾರ್ಟ್ಮೆಂಟಿಗೆ ಹೋದಾಗ, ಇದು ನಮಗೆ ಸೇರಿದ ಆಸ್ತಿ, ನೀವ್ಯಾಕೆ ಇಲ್ಲಿಗೆ ಬಂದಿದ್ದೀರಿ ಎಂದು ಜಮೀರ್ ಬೆಂಬಲಿಗರು ತಗಾದೆ ತೆಗೆದಿದ್ದಾರೆ. ಆಗ, ನಿಖಿಲ್ ಕಡೆಯವರು ಕೀ ಒಡೆದು ಒಳಗೆ ಹೋಗಿದ್ದಾರೆ ಎಂದು ಜಮೀರ್ ಅವರದ್ದು ಆರೋಪ. ಅತಿಕ್ರಮ ಪ್ರವೇಶ ಎಂದು ಜಮೀರ್ ಅವರು ಸದಾಶಿವನಗರ ಪೊಲೀಸರಿಗೆ ದೂರು ನೀಡಲು ತಮ್ಮ ಪಿಎಗೆ ಸೂಚಿಸಿದ್ದರು.

       ನಿಖಿಲ್ ಕುಮಾರಸ್ವಾಮಿಯವರ ಸಿನಿಮಾಕ್ಕೆ ಸಂಬಂಧಿಸಿದ ಬೆಲೆಬಾಳುವ ವಸ್ತುಗಳಿವೆ

      ನಿಖಿಲ್ ಕುಮಾರಸ್ವಾಮಿಯವರ ಸಿನಿಮಾಕ್ಕೆ ಸಂಬಂಧಿಸಿದ ಬೆಲೆಬಾಳುವ ವಸ್ತುಗಳಿವೆ

      ಆ ಅಪಾರ್ಟ್ಮೆಂಟ್ ನಲ್ಲಿ ನಿಖಿಲ್ ಕುಮಾರಸ್ವಾಮಿಯವರ ಸಿನಿಮಾಕ್ಕೆ ಸಂಬಂಧಿಸಿದ ಬೆಲೆಬಾಳುವ ವಸ್ತುಗಳಿವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಜಮೀರ್ ಅವರು ಪೊಲೀಸರಿಗೆ ದೂರು ನೀಡಲು ಹೋದಾಗ, ಜೆಡಿಎಸ್ ಮುಖಂಡ ಭೋಜೇ ಗೌಡ್ರು ಮಧ್ಯಪ್ರವೇಶಿಸಿ ಮಾತುಕತೆ ನಡೆಸಿದ್ದಾರೆ. ಹಾಗಾಗಿ, ಜಮೀರ್ ತಮ್ಮ ಪಿಎಗೆ ದೂರು ನೀಡದೇ ವಾಪಸ್ ಬರುವಂತೆ ಸೂಚಿಸಿದ್ದಾರೆ.

       ಜಮೀರ್ ಆರೋಪಕ್ಕೆಲ್ಲಾ ಉತ್ತರ ಕೊಡಲು ಸಾಧ್ಯವಿಲ್ಲ. ಹಿಂದಿನ ಕೆಟ್ಟ ಸಹವಾಸ

      ಜಮೀರ್ ಆರೋಪಕ್ಕೆಲ್ಲಾ ಉತ್ತರ ಕೊಡಲು ಸಾಧ್ಯವಿಲ್ಲ. ಹಿಂದಿನ ಕೆಟ್ಟ ಸಹವಾಸ

      "ಸದಾಶಿವನಗರ ಗೆಸ್ಟ್ ಹೌಸ್ ನಲ್ಲಿ, ವಾಸ್ತು ಸರಿಯಾಗಿದೆ. ಇದು ಖಾಲಿ ಮಾಡಿದರೆ ನಾನೇನಾದರೂ ಸಿದ್ದರಾಮಯ್ಯನವರಿಗೆ ಇದನ್ನು ಕೊಟ್ಟು ಬಿಡುತ್ತೇನೆ ಎನ್ನುವ ಭಯ ಕುಮಾರಸ್ವಾಮಿಗೆ"ಎಂದು ಜಮೀರ್ ಆರೋಪಿಸಿದ್ದಾರೆ. "ನಾನು ನನ್ನ ಪಾಡಿಗೆ ಜಮೀನಿನಲ್ಲಿ ಕೆಲಸ ಮಾಡಿಕೊಂಡಿದ್ದೇನೆ. ಜಮೀರ್ ಆರೋಪಕ್ಕೆಲ್ಲಾ ಉತ್ತರ ಕೊಡಲು ಸಾಧ್ಯವಿಲ್ಲ. ಹಿಂದಿನ ಕೆಟ್ಟ ಸಹವಾಸ"ಎಂದು ಎಚ್ಡಿಕೆ ಪ್ರತ್ಯಾರೋಪ ಮಾಡಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+