Bhavani Revanna: ಭವಾನಿ ರೇವಣ್ಣಗೆ ಹೈಕೋರ್ಟ್ ಜಾಮೀನು ಮಂಜೂರು: ಷರತ್ತುಗಳೇನು?
ಬೆಂಗಳೂರು, ಜೂನ್ 07: ಕೆ.ಆರ್.ನಗರದ ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಸಂಸದ ಪ್ರಜ್ವಲ್ ರೇವಣ್ಣ ತಾಯಿ ಭವಾನಿ ರೇವಣ್ಣ ಅವರಿಗೆ ಶುಕ್ರವಾರ ಮಧ್ಯಂತರ ನಿರೀಕ್ಷಾ ಜಾಮೀನು ಮಂಜೂರು ಮಾಡಿದೆ ಆದೇಶಿಸಿದೆ. ಇದರೊಂದಿಗೆ ಕೋರ್ಟ್ ಹಲವು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.
ಹೈಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ವಿಚಾರಣೆ ಹಾಜರಾಗಬೆಕು. ಎಸ್‌ಐಟಿ ಅಧಿಕಾರಿಗಳ ತನಿಖೆ, ವಿಚಾರಣೆಗೆ ಸಹಕರಿಸಬೇಕು ಎಂದು ಸೂಚನೆ ನೀಡಿದೆ. ಅಲ್ಲದೆ ಭವಾನಿ ರೇವಣ್ಣ ಅವರು ಕೆ.ಆರ್. ನಗರ ಹಾಗೂ ಹಾಸನಕ್ಕೆ ಕಾಲಿಡುವಂತಿಲ್ಲ ಎಂದು ಹೈಕೊರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಭವಾನಿ ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧನ ಮಾಡುವಂತಿಲ್ಲ ಎಂದಿರುವ ಹೈಕೋರ್ಟ್, ಸಂಜೆ 5 ಗಂಟೆವರೆಗೆ ಅವರನ್ನು ವಿಚಾರಣೆ ನಡೆಸಬೇಕು. ನಂತರ ಅವರನ್ನು ವಶದಲ್ಲಿ ಇಟ್ಟುಕೊಳ್ಳುವಂತಿಲ್ಲ ಎಂದು ನ್ಯಾಯಾಲಯ ನಿರ್ದೇಶಿಸಿ ಭವಾನಿಯವರಿಗೆ ಷರತ್ತು ವಿಧಿಸಿ ಜಾಮೀನು ಮಂಜೂರು ಮಾಡಿದೆ.
ಕಿಡ್ನಾಪ್ ಪ್ರಕರಣ ಸಂಬಂಧ ಎರಡು ಭಾರಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಇದೇ ವೇಳೆ ಭವಾನಿಯವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತಿರಸ್ಕರಿಸಿತ್ತು. ಇದರ ಬೆನ್ನಲ್ಲೆ ಅವರ ವಿರುದ್ಧ ಬಂಧನದ ವಾರೆಂಟ್ ಜಾರಿ ಮಾಡಲಾಗಿತ್ತು.
ಪ್ರಕರಣದ ಹಿನ್ನೆಲೆ ಏನು?
ರಾಜ್ಯಾದ್ಯಂತ ಸದ್ದು ಮಾಡಿದ್ದ ಸಂಸದ ಪ್ರಜ್ವಲ್ ರೇವಣ್ಣ ರಾಸಲೀಲೆಗಳು ಇರುವ ಪೆನ್‌ಡ್ರೈನ್ ನಲ್ಲಿ ತಮ್ಮ ತಾಯಿಯ ಚಿತ್ರವು ಇದೆ. ಸದ್ಯ ನಮ್ಮ ತಾಯಿ ಕಣ್ಮರೆ ಆಗಿದ್ದಾರೆ ಎಂದು ಅವರ ಪುತ್ರ ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲೂ ದೂರು ನೀಡಿದ್ದರು. ಇದೇ ಪ್ರಕರಣ ವಿಚಾರವಾಗಿ ಎಚ್‌ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಅವರ ಸಂಬಂಧಿಯನ್ನು ಬಂಧಿಸಿ ಎರಡನೇ ಆರೋಪಿಯಾಗಿ ಮಾಡಲಾಗಿದೆ.
ಪ್ರಕರಣದ ಎ1 ಆರೋಪಿ ಎಚ್‌ಡಿ ರೇವಣ್ಣರನ್ನು ಈಗಾಗಲೇ ಎಸ್‌ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸಿತ್ತು. ನಂತರ ಅವರಿಗೂ ಜಾಮೀನು ಸಿಕ್ಕಿತು. ಈ ಪ್ರಕರಣ ಸದ್ಯ ಭವಾನಿ ರೇವಣ್ಣ ಅವರಿಗೂ ಉರಳಾಗಿದೆ. ಸದ್ಯ ಅವರಿಗಾಗಿ ಎಸ್‌ಐಟಿ ತಲಾಶ್ ನಡೆಸುತ್ತಿದೆ ಎಂದು ತಿಳಿದು ಬಂದಿದೆ.












Click it and Unblock the Notifications