ಮಾರ್ಚ್ 12ರ ತನಕ ನಲಪಾಡ್‌ಗೆ ಬಿಡುಗಡೆ ಭಾಗ್ಯವಿಲ್ಲ
ಬೆಂಗಳೂರು, ಮಾರ್ಚ್ 9 : ಮೊಹಮ್ಮದ್ ನಲಪಾಡ್‌ಗೆ ಜೈಲು ವಾಸ ತಪ್ಪಿಲ್ಲ. ಕರ್ನಾಟಕ ಹೈಕೋರ್ಟ್ ಜಾಮೀನು ಅರ್ಜಿಯ ವಿಚಾರಣೆಯನ್ನು ಮಾರ್ಚ್ 12ಕ್ಕೆ ಮುಂದೂಡಿದೆ. ನಲಪಾಡ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.
ಮೊಹಮ್ಮದ್ ನಲಪಾಡ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ಕರ್ನಾಟಕ ಹೈಕೋರ್ಟ್‌ನಲ್ಲಿ ಶುಕ್ರವಾರ ನಡೆಯಿತು. ನ್ಯಾಯಮೂರ್ತಿ ಹರೀಶ್ ಕುಮಾರ್ ಅವರು ಎರಡೂ ಕಡೆಯ ವಾದವನ್ನು ಆಲಿಸಿದರು.
ಮೊಹಮ್ಮದ್ ನಲಪಾಡ್ ಪರವಾಗಿ ಹಿರಿಯ ವಕೀಯ ಸಿ.ವಿ.ನಾಗೇಶ್ ವಾದ ಮಂಡನೆ ಮಾಡಿದರು. ವಿದ್ವತ್ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಶ್ಯಾಮ ಸುಂದರ್ ವಾದ ಮಂಡನೆ ಮಾಡಿದರು.

ಮೊಹಮ್ಮದ್ ನಲಪಾಡ್ ಪರವಾಗಿ ವಾದ ಮಂಡನೆ ಮಾಡಿದ ಸಿ.ವಿ.ನಾಗೇಶ್ ಅವರು, ಇದು ಜಾಮೀನು ನೀಡಬಹುದಾದದ ಆರೋಪ. ಎಲ್ಲಾ ಆರೋಪಿಗಳಿಗೂ ಜಾಮೀನು ನೀಡಬಹುದಾಗಿದೆ ಎಂದರು.
ಸಿ.ವಿ.ನಾಗೇಶ್ ವಾದಕ್ಕೆ ಎಸ್‌ಪಿಪಿ ಶ್ಯಾಮ್ ಸುಂದರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅವರು ಮಾಡಿದ ವಾದದ ಅಂಶಗಳು ಇಲ್ಲಿವೆ...
* ನಲಪಾಡ್ ನೇರವಾಗಿ ಹಲ್ಲೆಯಲ್ಲಿ ಭಾಗಿಯಾಗಿಲ್ಲ ಎಂದು ಹೇಳುತ್ತಿದ್ದಾರೆ. ನಾವು ಮುಚ್ಚಿದ ಲಕೋಟೆಯಲ್ಲಿ ನಿಮಗೆ ಸಿಡಿ ಕೊಡಲಿದ್ದೇವೆ. ತನಿಖಾಧಿಕಾರಿಗಳು ಕೋರ್ಟ್‌ಗೆ ಸಿಡಿ ಕೊಡುತ್ತಾರೆ. ಸಿಡಿಯಲ್ಲಿರುವ ದೃಶ್ಯಾವಳಿಯನ್ನೊಮ್ಮೆ ವೀಕ್ಷಿಸಿ. ಆಗ ನಲಪಾಡ್ ಗೂಂಡಾಗಿರಿ ಗೊತ್ತಾಗಲಿದೆ ಎಂದು ವಾದಿಸಿದರು.
* ವಿದ್ವತ್ ಬದಲು ಮಲ್ಯ ಆಸ್ಪತ್ರೆಯ ವೈದ್ಯ ಆನಂದ್‌ಗೆ ಜೀವ ಬೆದರಿಕೆ ಇದೆ. ಆದ್ದರಿಂದ, ವೈದ್ಯ ಆನಂದ್ ವರದಿಯನ್ನು ತಿರುಚಿ ನೀಡಿದ್ದಾರೆ. ಡಿಸ್ ಚಾರ್ಜ್ ಮಾಡಿದ ವರದಿ ಹ್ಯಾರೀಸ್ ಅವರ ಕೈಗೆ ಸಿಕ್ಕಿದ್ದು ಹೇಗೆ? ಅದನ್ನು ಅವರು ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದಾರೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
* ವೈದ್ಯ ಆನಂದ್ ಮೇಲೆ ಸಾಕಷ್ಟು ಗುಮಾನಿಗಳಿವೆ. ಅವರು ನಲಪಾಡ್ ಫ್ಯಾಮಿಲಿ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ. ಇಲ್ಲೇ ತನಿಖಾಧಿಕಾರಿಗಳ ತನಿಖೆಯಲ್ಲಿ ನಲಪಾಡ್ ಫ್ಯಾಮಿಲಿ ಮಧ್ಯಪ್ರವೇಶಿಸಿದೆ. ಮುಂಚೆ ವೈದ್ಯ ಆನಂದ್ ವಿದ್ವತ್‌ಗೆ ಪ್ಲಾಸ್ಟಿಕ್ ಸರ್ಜರಿ ಅವಶ್ಯಕತೆ ಇದೆ ಎಂದು ಹೇಳಿದ್ದರು. ಇದೀಗ ರಿಪೋರ್ಟ್ ವಿದ್ವತ್ ವಿರುದ್ಧವಾಗಿ ನೀಡಿದ್ದಾರೆ. ನಲಪಾಡ್ ಫ್ಯಾಮಿಲಿ ತನಿಖೆಯ ದಿಕ್ಕು ತಪ್ಪಿಸುತ್ತಿದೆ.
* ವೈದ್ಯ ಆನಂದ್ ವಿರುದ್ಧ ಈ ಕುರಿತು ತನಿಖೆಯಾಗಬೇಕು. ತನಿಖಾಧಿಕಾರಿಗಳಿಗೂ ಸಿಗದ ವೈದ್ಯಕೀಯ ದಾಖಲೆಗಳು ಆರೋಪಿ ಪರ ವಕೀಲರಿಗೆ ಹೇಗೆ ಸಿಕ್ಕವು. ದಾಖಲಾತಿಗಳು ಲೀಕ್ ಆಗಿರುವುದು ನಲಪಾಡ್ ತನಿಖೆಯಲ್ಲಿ ಮೂಗು ತೂರಿಸುತ್ತಿರುವುದನ್ನು ತೋರಿಸುತ್ತದೆ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications