8 ವರ್ಷದ ಸೈಯದಾ ನಬೀಹಾಳ ಪ್ರಾಣ ಉಳಿಸಿಕೊಳ್ಳಲು ನಿಮ್ಮ ನೆರವು ಬೇಕಿದೆ...

ಬೆಂಗಳೂರು, ಜುಲೈ 04 : ಈ ಎಂಟು ವರ್ಷದ ಹುಡುಗಿ ಹೆಸರು ಸೈಯದಾ ನಬೀಹಾ. ಕರ್ನಾಟಕದ ಮೂಲೆಯಲ್ಲಿರುವ ಹಳ್ಳಿಯವಳು. ಆಕೆ ಜೀವನದಲ್ಲೇ ಅತ್ಯಂತ ಯಾತನಾದಾಯಕ ಸಮಯ ಕಳೆಯುತ್ತಿದ್ದಾಳೆ. ತನ್ನ ವಾರಿಗೆಯವರ ಜತೆಗೆ ಆಟ ಆಡಿಕೊಂಡು ಕಾಲ ಕಳೆಯಬೇಕಾದ ಈಕೆಗೆ ಊಹಿಸಲೂ ಸಾಧ್ಯವಾಗದಂಥ ನೋವು ನೀಡುತ್ತಿದೆ ಕಾಯಿಲೆ.

ಆಕೆಗೆ ಚರ್ಮದ ಮೇಲೆ ವಿಪರೀತ ಎನಿಸುವಷ್ಟು ಹಿಂಸೆ. ಕೆರೆತದಂತೆ ಅನಿಸಿ, ಅದರಿಂದಲೇ ಗಾಯಗಳಾಗಿವೆ. ವೈರಲ್ ಇನ್ ಫೆಕ್ಷನ್ ಆದಾಗ ಇಡೀ ದೇಹವೆಲ್ಲ ನೋವು ಉಂಟಾಗುತ್ತದಲ್ಲಾ ಅಂಥ ನೋವು. ಕೆರೆತ ನಿಲ್ಲುವುದೇ ಇಲ್ಲ. ಅದರಿಂದ ಏಟಿನಂತಾಗಿವೆ. ಆಕೆ ಮೂಗಿನಿಂದ ರಕ್ತ ಬರುತ್ತದೆ. ಆಗಾಗ ರಕ್ತ ವಾಂತಿ ಮಾಡಿಕೊಳ್ಳುತ್ತಾಳೆ.

Help our Syeda fight Cancer

ಆಕೆಯ ನೋವಿನ ಪರಿಯನ್ನು ನಾವು ಊಹಿಸುವುದಕ್ಕೂ ಸಾಧ್ಯವಿಲ್ಲ. ಕೆಲವು ಸಲವಂತೂ ಆಕೆ ನೋವು ಸಹಿಸಲಾರದೆ ಸುಮ್ಮನೆ ಅಳುತ್ತಾ ಕೂತುಬಿಡ್ತಾಳೆ. ಆಗ ಹೃದಯವೇ ಒಡೆದು ಹೋದಂತೆ ಅನಿಸುತ್ತದೆ. ಇನ್ನು ನಬೀಹಾಳ ಅಸಹಾಯಕ ತಂದೆ-ತಾಯಿ ಹಾಗೂ ಸಂಬಂಧಿಕರು ಸಹ ಕಣ್ಣೀರು ಹಾಕುವುದನ್ನು ಬಿಟ್ಟರೆ ಮತ್ತೇನೂ ಮಾಡಲಾರರು.

ನಾರಾಯಣ ಹೃದಯಾಲಯ ಹೆಲ್ತ್ ಸಿಟಿಯ ಆಂಕಾಲಜಿ ಹಾಗೂ ಬೋನ್ ಮಾರೋ ಟ್ರಾನ್ಸ್ ಪ್ಲಾಂಟೇಷನ್ ವಿಭಾಗದ ಮುಖ್ಯಸ್ಥರಾದ ವೈದ್ಯ ಸುನೀಲ್ ಭಟ್ ಅವರು ಹೇಳುವಂತೆ, ಸೈಯದಾ ನಬೀಹಾಗೆ ಆಕೆ ಹೆಸರಿಗಿಂತ ದೊಡ್ಡದಾದ ಮತ್ತು ಅಪಾಯಕಾರಿಯಾದ ರೆಸಾಪ್ಲೆಡ್ ಅಕ್ಯುಟ್ ಲಿಂಫೋಬ್ಲಾಸ್ಟಿಕ್ ಲ್ಯುಕೆಮಿಯಾ ಎಂಬ ಕಾಯಿಲೆ ಇದೆ.

ಆಕೆಗೆ ಅಸ್ಥಿ ಮಜ್ಜೆ ಕಸಿ ಆಗಬೇಕು ಎಂದು ವೈದ್ಯರು ಸಲಹೆ ಮಾಡಿದ್ದಾರೆ. ಈ ಚಿಕಿತ್ಸೆಗೆ ಮೂವತ್ತು ಲಕ್ಷ ರುಪಾಯಿ ವೆಚ್ಚವಾಗುತ್ತದೆ. ಈ ಮೊತ್ತ ಆಕೆ ಕುಟುಂಬದ ಕೈ ಮೀರಿದ್ದು. ಆಕೆಯ ತಂದೆ ಕಾರ್ಮಿಕರು. ಕುಟುಂಬ ನಿರ್ವಹಿಸುವುದೇ ದುಸ್ತರವಾಗಿದೆ. ಇನ್ನು ತಮ್ಮ ಪಾಲಿನ ಎಲ್ಲವೂ ಮಾರಿ, ಸಾಲ-ಸೋಲ ಮಾಡಿ ಈವರೆಗೆ ಹತ್ತು ಲಕ್ಷ ಖರ್ಚು ಮಾಡಿದ್ದಾರೆ.

Help our Syeda fight Cancer

ಸೈಯದಾಳಾನ್ನು ಈ ಸ್ಥಿತಿಯಲ್ಲಿ ನೋಡುವುದು ತೀರಾ ದುಃಖದಾಯಕ. ದಯವಿಟ್ಟು ನಿಮ್ಮಿಂದ ಆಗುವ ಸಹಾಯವನ್ನು ಆಕೆಗಾಗಿ ಮಾಡಿ. ಸಣ್ಣ ಮಟ್ಟದಾದರೂ ಸರಿ, ಅದು ಸೈಯದಾಳ ಪ್ರಾಣವನ್ನು ಉಳಿಸುತ್ತದೆ. ಈ ಶಸ್ತ್ರಚಿಕಿತ್ಸೆ ಆಕೆಯನ್ನು ನೋವಿನಿಂದ ಮುಕ್ತಗೊಳಿಸುತ್ತದೆ. ದೀರ್ಘ ಕಾಲ ಆಕೆ ಬದುಕುವುದಕ್ಕೆ ಸಾಧ್ಯವಾಗುತ್ತದೆ.

ಆಕೆಗೆ ನೀಡುವ ದೇಣಿಗೆಗೆ ಸೆಕ್ಷನ್ 80G ಅಡಿಯಲ್ಲಿ ತೆರಿಗೆ ವಿನಾಯಿತಿ ದೊರೆಯುತ್ತದೆ. ಅದಕ್ಕಾಗಿ ನಾನ್ಹಿ ಪರಿ ಫೌಂಡೇಷನ್ ನಿಂದ ರಸೀದಿ ದೊರೆಯುತ್ತದೆ. ಆಕೆಗೆ ನೆರವಾಗುವವರು, ಅದು ಯಾವುದೇ ಪ್ರಮಾಣದ್ದಾದರೂ ಸರಿ, ಈ ಲಿಂಕ್ ಕ್ಲಿಕ್ ಮಾಡಿ, ಸಹಾಯ ಮಾಡಿ. ಪ್ಲೀಸ್...

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+