ಬೆಂಗಳೂರಿನಲ್ಲಿ ನಿಲ್ಲದ ಮಳೆ, ಮುಗಿಯದ ಗೋಳು
ಬೆಂಗಳೂರು, ಅಕ್ಟೋಬರ್ 12: ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಬೆಂಗಳೂರನ್ನು ಬಿಡುವಂತೆ ಕಾಣಿಸುತ್ತಿಲ್ಲ. ಇಂದೂ ಮಧ್ಯಾಹ್ನ ನಂತರ ಮಳೆ ಸುರಿಯಲು ಆರಂಭಿಸಿದ್ದು ಜನರಿಗೆ ಮತ್ತೆ ಸಂಕಷ್ಟ ತಂದೊಡ್ಡಿದೆ.
In Pics : ಬೆಂಗಳೂರನನ್ನು ಮುಳುಗಿಸಿದ ಪ್ರಳಯಸದೃಶ ಮಳೆ
ಬೆಂಗಳೂರಿನ ಹಲವು ಕಡೆಗಳಲ್ಲಿ ಮಳೆ ಸುರಿಯುತ್ತಿದ್ದು ಟ್ರಾಫಿಕ್ ಸಮಸ್ಯೆ ಮಿತಿ ಮೀರಿದೆ. ಕಚೇರಿಯಿಂದ ಮನೆಗೆ ಹೋಗುವವರು ರಸ್ತೆ ಮಧ್ಯೆಯೇ ಬಾಕಿಯಾಗಿದ್ದಾರೆ.

ಕೋರಮಂಗಲ, ಜಯನಗರ, ವಿಪ್ರೊ ಜಂಕ್ಷನ್, ಸುಖ್ ಸಾಗರ್ ವೃತ್ತ, ಸೋನಿ ವರ್ಲ್ಡ್ ವೃತ್ತ, ಮಹಾರಾಜ ಜಂಕ್ಷನ್, ಕೃಪಾನಿಧಿ ಜಂಕ್ಷನ್, ಎನ್ಆರ್ ರಸ್ತೆ, ಶೃನಿವಾಗಿಲು ಜಂಕ್ಷನ್, ಬಿಳೇಕಹಳ್ಳಿಯಲ್ಲಿ ರಸ್ತೆಗಳ ಮೇಲೆ ಮಳೆ ನೀರು ನಿಂತಿದ್ದು ವಾಹನ ಸಂಚಾರ ದುಸ್ತರವಾಗಿದೆ.
ಇನ್ನು ಹೊಸೂರು ರಸ್ತೆಯ ಪೊಟ್ಲಪ್ಪ ಗಾರ್ಡನ್ ನಲ್ಲಿ ರಸ್ತೆಗಳ ಮೇಲೆ ಭಾರೀ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ಕಷ್ಟವಾಗಿತ್ತು. ಈ ಹಿನ್ನಲೆಯಲ್ಲಿ ಟ್ರಾಫಿಕ್ ಪೊಲೀಸರು ಜೆಸಿಬಿ ಸಹಾಯದಿಂದ ನೀರಿನ ಸಂಚಾರಕ್ಕೆ ವ್ಯವಸ್ಥೆ ಮಾಡಿ ವಾಹನ ಸವಾರರಿಗೆ ನೆರವಾದರು.
We are cleaning the water with the help of Jcb at Potlappa garden on Hosur road. pic.twitter.com/kvh8i0Layk
— Ashoknagar Tr.PS (@Ashoknagartrf) October 12, 2017












Click it and Unblock the Notifications