ಬೆಂಗಳೂರಲ್ಲಿ ಭಾರಿ ಮಳೆ, ಗುಡುಗು ಮಿಂಚಿನ ಆರ್ಭಟ
ಬೆಂಗಳೂರು, ಮೇ 10: ನಗರದಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆ ಪ್ರಾರಂಭವಾಗಿದ್ದು, ರಸ್ತೆಗಳೆಲ್ಲಾ ತುಂಬಿ ಹರಿಯುತ್ತಿವೆ.
ರಾತ್ರಿ 8 ಕ್ಕೆ ಪ್ರಾರಂಭವಾಗಿರುವ ಮಳೆ ಜೋರಾಗಿ ಸುರಿಯುತ್ತಿದ್ದು, ಗುಡುಗಿನ ಆರ್ಭಟ ಜೋರಿದೆ. ಹವಾಮಾನ ಇಲಾಖೆಯು ನಗರದಲ್ಲಿ ಇನ್ನೂ ಮೂರು ದಿನಗಳ ಕಾಲ ಮಳೆ ಬೀಳುತ್ತದೆ ಎಂದು ಮುನ್ಸೂಚನೆ ನೀಡಿದೆ.
ಮಳೆ ಚುನಾವಣಾ ಪ್ರಚಾರದ ಮೇಲೂ ಪರಿಣಾಮ ಬೀರಲಿದ್ದು, ಇಂದು ಬಹಿರಂಗ ಚುನಾವಣೆ ಅಂತ್ಯವಾಗಿ ಮನೆ-ಮನೆ ಪ್ರಚಾರ ಆರಂಭವಾಗಿದೆ ಆದರೆ ಮಳೆ ಕಾರಣ ಅಭ್ಯರ್ಥಿಗಳು ಮನೆಗಳಿಗೆ ತೆರಳಿ ಪ್ರಚಾರ ಮಾಡುವುದು ಕಡು ಕಷ್ಟ.

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಮತದಾನದ ದಿನವೂ ಮಳೆ ಬರುವ ಸಂಭವವಿದೆ ಆದರೆ ಮಳೆ ಇಂದಿನಂತೆ ಸಂಜೆ ಮೇಲೆ ಬರುವ ಸಾಧ್ಯತೆ ಹೆಚ್ಚಿಗಿದ್ದು ಮತದಾನಕ್ಕೆ ಅಡೆ-ತಡೆ ಆಗಲಾರದು ಎನ್ನಲಾಗಿದೆ.

ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಟ್ರಾಫಿಕ್ ಸಮಸ್ಯೆ ಹೆಚ್ಚಿದ್ದು, ರಸ್ತೆಗಳು ಹಳ್ಳಗಳಾಗಿವೆ. ಮಲ್ಲೇಶ್ವರದಲ್ಲಿ ಮಳೆಯ ರಭಸಕ್ಕೆ ಮರ ಉರುಳಿರುವ ವರದಿಯಾಗಿದೆ. ಬೆಂಗಳೂರು ಮಾತ್ರವಲ್ಲದೆ, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ದಕ್ಷಿಣ ಕರ್ನಾಟಕದ ಹಲವೆಡೆ ಮಳೆ ಆಗುತ್ತಿರುವ ವರದಿ ಆಗಿದೆ.












Click it and Unblock the Notifications