Bengaluru Rain: ಭರ್ಜರಿ ಮಳೆಗೆ ಬೆಚ್ಚಿಬಿದ್ದ ಬೆಂಗಳೂರಿನ ಜನ!

ಬೆಂಗಳೂರು: ಸಿಲಿಕಾನ್ ಸಿಟಿಗೆ ವರುಣ ಮತ್ತೆ ಮತ್ತೆ ಶಾಕ್ ನೀಡುತ್ತಿದ್ದು, ಮತ್ತೊಮ್ಮೆ ಭರ್ಜರಿ ಮಳೆಯಿಂದ ಬೆಂಗಳೂರು ಜನರು ಬೆಚ್ಚಿಬಿದ್ದಿದ್ದಾರೆ. ಭಾನುವಾರದಿಂದ ಶುರುವಾದ ಮಳೆಯ ಆಟ ಸೋಮವಾರವೂ ಅದೇ ರೀತಿ ಮುಂದುವರಿದಿತ್ತು. ಹಾಗೇ ಮಂಗಳವಾರ ಕೂಡ ಭಾರಿ ಮಳೆಗೆ ಬೆಂಗಳೂರು ಬೆಚ್ಚಿಬಿದ್ದಿದೆ. ಅದರಲ್ಲೂ ದಿಢೀರ್ ಸುರಿದ ಆಲಿಕಲ್ಲು ಮಳೆ ವಾಹನ ಸವಾರರಿಗೆ ಚಿಂತೆ ತರಿಸಿತ್ತು.

ಬೆಂಗಳೂರು ನಗರದ ಹೃದಯ ಭಾಗ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಲ್ಲಿ ಬಿದ್ದ ಆಲಿಕಲ್ಲು ಸಹಿತ ಮಳೆಗೆ ಜನ ತತ್ತರಿಸಿ ಹೋಗಿದ್ದರು. ಮೆಜೆಸ್ಟಿಕ್, ಕೆ.ಆರ್.ಮಾರ್ಕೆಟ್ ಸೇರಿದಂತೆ ಶಾಂತಿನಗರ ಮತ್ತು ಜಯನಗರದಲ್ಲಿ ಕೂಡ ಭಾರಿ ಮಳೆಯಾಗಿದೆ. ವಿಜಯನಗರ, ಬನಶಂಕರಿ, ಹೆಬ್ಬಾಳ, ರಾಜಾಜಿನಗರ, ಸಿಲ್ಕ್ ಬೋರ್ಡ್ ಮತ್ತು ಮಡಿವಾಳ, ಕೋರಮಂಗಲ ಹಾಗೂ ಎಚ್‌ಎಸ್‌ಆರ್ ಲೇಔಟ್ ಸೇರಿದಂತೆ ಬೆಂಗಳೂರಿನ ಬಹುತೇಕ ಕಡೆಯಲ್ಲಿ ಮಳೆ ಅಬ್ಬರಿಸಿ ಬೊಬ್ಬಿರಿದಿದೆ. ಅದರಲ್ಲೂ ಆಲಿಕಲ್ಲು ಸಹಿತ ಮಳೆ ಅಬ್ಬರಿಸಿ ಬೊಬ್ಬಿರಿದಿದೆ.

Heavy rain continues in Karnataka capital city Bengaluru

ಇನ್ನೂ ಪಿಚ್ಚರ್ ಬಾಕಿ ಇದೆ!

ದಕ್ಷಿಣ ತಮಿಳುನಾಡಿನಲ್ಲಿ ಸಮುದ್ರಮಟ್ಟದಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ಮಳೆ ಶುರುವಾಗಿದೆ. ಭಾನುವಾರವೇ ಶುರುವಾಗಿದ್ದ ಮಳೆ ಮುಂದಿನ 3 ದಿನಗಳ ಕಾಲ ಭರ್ಜರಿಯಾಗಿ ಸುರಿಯುವ ಮುನ್ಸೂಚನೆ ಸಿಕ್ಕಿದೆ. ಭಾರತೀಯ ಹವಾಮಾನ ಇಲಾಖೆ (IMD) & ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಕೂಡ 3 ದಿನಗಳ ಕಾಲ ಈ ರೀತಿ ಭರ್ಜರಿ ಮಳೆಯಾಗುವ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ. ಹೀಗಾಗಿ ನೀವು ಮನೆಯಿಂದ ಹೊರ ಹೋಗುವಾಗ ಛತ್ರಿ ಅಥವಾ ರೈನ್ ಕೋಟ್ ಮರೆಯದೇ ತೆಗೆದುಕೊಂಡು ಹೋದರೆ ಒಳ್ಳೆಯದು!

ಮೇ 25ರವರೆಗೂ ಇದೇ ಪರಿಸ್ಥಿತಿ?

ಅಂದಹಾಗೆ ಕರ್ನಾಟಕದ ಒಳನಾಡಿನ ಜಿಲ್ಲೆಗಳಿಂದ ಹಿಡಿದು ತಮಿಳುನಾಡಿನ ದಕ್ಷಿಣ ಒಳನಾಡಿನವರೆಗೂ ಮೇಲ್ಮೈ ಸುಳಿಗಾಳಿ ಎದ್ದಿದೆ. ಭೂಮಿ ಮೇಲ್ಮೈನಿಂದ ಒಟ್ಟು 900 ಮೀಟರ್ ಎತ್ತರದಲ್ಲಿದೆ ಸುಳಿಗಾಳಿ ಎದ್ದಿದೆ. ಪರಿಣಾಮ ರಾಜಧಾನಿ ಬೆಂಗಳೂರಲ್ಲಿ ಭಾನುವಾರ ಮಧ್ಯಾಹ್ನ & ಸೋಮವಾರ ಸಂಜೆಯೂ ಧಾರಾಕಾರ ಮಳೆ ದಾಖಲಾಗಿದೆ. ಹಾಗೇ ಇದೇ ರೀತಿ ಮಳೆ ಇಂದಿನಿಂದ 3 ದಿನದವರೆಗೆ ಅಂದರೆ ಮೇ 25ರವರೆಗೂ ಮುಂದುವರಿಯಲಿದೆ ಎಂದು ಮುನ್ಸೂಚನೆ ಹಾಗೂ ಮುನ್ನೆಚ್ಚರಿಕೆ ನೀಡಲಾಗಿದೆ.

Heavy rain continues in Karnataka capital city Bengaluru

ಬೆಳಗ್ಗೆ ಬಿಸಿಲಿ, ಸಂಜೆ ಮಳೆಯೋ ಮಳೆ!

ಬೆಂಗಳೂರಿನ ಜನರಿಗೆ ಬೆಳಗ್ಗೆ ಬಿಸಿಲಿನ ದರ್ಶನವಾಗುತ್ತಿದೆ, ಆದರೆ ಸಂಜೆಯ ವೇಳೆ ಭಾರಿ ಮಳೆಯ ಸಿಂಚನ ಆಗುತ್ತಿದೆ. ನಗರದಲ್ಲಿ ಪ್ರತಿ ದಿನ ಬೆಳಗ್ಗೆ ಎಂದಿನಂತೆ ಬಿಸಿಲು ಕಂಡು ಬರುತ್ತಿದ್ದು, ಸಂಜೆ ಹೊತ್ತಿಗೆ ಜೋರು ಮಳೆ ಸುರಿದು ಹಲವು ಆವಾಂತರ ಸೃಷ್ಟಿಸುತ್ತಿದೆ. ಹೀಗಾಗಿ ಒಳಚರಂಡಿ ಉಕ್ಕಿ ಹರಿಯುವ ಕಡೆ, ರಸ್ತೆ ಅಂಡರ್‌ಪಾಸ್, ರೈಲ್ವೆ ಅಂಡರ್‌ಪಾಸ್‌ ಸೇರಿದಂತೆ ಇನ್ನಿತರ ತಗ್ಗು ಪ್ರದೇಶಗಳಲ್ಲಿ ವಾಹನ ಸವಾರರು ಎಚ್ಚರಿಕೆ ವಹಿಸಬೇಕಿದೆ.

ಬೆಂಗಳೂರಲ್ಲಿ ನೆಲಕ್ಕೆ ಬೀಳುತ್ತಿವೆ ಮರಗಳು

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವಿಪರೀತ ಮಳೆ ಜೊತೆ ಬಿರುಗಾಳಿ ಸಹ ಬೀಸುತ್ತಿದೆ. ಹೀಗಾಗಿ ಗಾಳಿ ವೇಗಕ್ಕೆ ನಗರದಲ್ಲಿ ನೂರಾರು ಮರಗಳು ಮತ್ತು ಮರದ ಕೊಂಬೆಗಳು ನೆಲಕ್ಕೆ ಬೀಳುತ್ತಿವೆ. ರಸ್ತೆಗಳು ಕೆರೆಯಾದರೆ, ಚರಂಡಿ ಉಕ್ಕಿ ಹರಿಯುತ್ತಿವೆ. ಹೀಗಾಗಿ ಸಾರ್ವಜನಿಕರು ಮಳೆ, ಬಿರುಗಾಳಿ ಬೀಸುವ ವೇಳೆ ಸುರಕ್ಷಿತ ಸ್ಥಳದಲ್ಲಿ ಇರಬೇಕಿದೆ. ಅದರಲ್ಲೂ ವಾಹನ ಸವಾರರು ಮಳೆಯಲ್ಲಿ ಗಾಡಿ ಓಡಿಸುವಾಗ ಎಚ್ಚರಿಕೆ ವಹಿಸುವುದು ಅತ್ಯಗತ್ಯ.

ಎಲ್ಲಿಲ್ಲಿ ಎಷ್ಟೆಷ್ಟು ಮಳೆ ಬಿದ್ದಿದೆ?

ಮುಂಗಾರು ಮಳೆ ಜೂನ್ ಮೊದಲ ವಾರದಿಂದ ರಾಜ್ಯಕ್ಕೆ ಎಂಟ್ರಿ ಕೊಡಲಿದೆ. ಆದರೆ ಮುಂಗಾರು ಮಳೆ ಆರಂಭ ಆಗುವ ಮೊಲದೇ ಮಳೆಯ ಅವಾಂತರ ಜೋರಾಗಿದೆ. ಪೂರ್ವ ಮುಂಗಾರು ಮಳೆ ಅಬ್ಬರಿಸುತ್ತಿದೆ. ಕಳೆದ 24 ಗಂಟೆಯಲ್ಲಿ ಬೊಮ್ಮನಹಳ್ಳಿಯ ಸಿಂಗಸಂದ್ರ ಪ್ರದೇಶದಲ್ಲಿ 35 ಮಿ.ಮೀ. ಮಳೆ ದಾಖಲಾಗಿದೆ. ಇದರೊಂದಿಗೆ ಬೊಮ್ಮನಹಳ್ಳಿಯಲ್ಲಿ 32 ಮಿ.ಮೀ. ಮಳೆ ದಾಖಲಾಗದರೆ, ಜ್ಞಾನಭಾರತಿ ಸುತ್ತಮುತ್ತ 28 ಮಿ.ಮೀ. ಹಾಗೂ ರಾಜರಾಜೇಶ್ವರಿ ನಗರದಲ್ಲಿ 23 ಮಿ.ಮೀ. ಮಳೆ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+