ಬೆಂಗಳೂರಿನಲ್ಲಿ ಹೃದಯ ವಿದ್ರಾವಕ ಘಟನೆ: ಮನೆ ಮುಂದೆ ಜೆಸಿಬಿ ಹರಿದು ಮಗು ಸಾವು

ಬೆಂಗಳೂರು, ಫೆಬ್ರವರಿ 19: ಜೆಸಿಬಿ ಚಾಲಕn ಅಜಾಗರೂಕತೆಯಿಂದ ಎರಡು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕಾಡುಗೋಡಿ ಬಳಿಯ ಸಿಟಿ ಲೇಔಟ್‌ನಲ್ಲಿ ನಡೆದಿದೆ. ನಿನ್ನೆ (ಫೆಬ್ರವರಿ 18) ಮಂಗಳವಾರ ಸಂಜೆ 6.30 ಈ ಅವಘಡ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾಸ್ಟರ್‌ ಥವನ್ ರೆಡ್ಡಿ (2) ಮೃತ ಪಟ್ಟ ಮಗು ಎಂದು ಗುರುತಿಸಲಾಗಿದೆ.

ನಿನ್ನೆ (ಫೆಬ್ರವರಿ 18) ಮಂಗಳವಾರ ಸಂಜೆ 6.30ರ ಸುಮಾರಿಗೆ ಎರಡು ವರ್ಷದ ಥವನ್ ರೆಡ್ಡಿ ಮನೆ ಮುಂದೆ ಆಟವಾಡುತ್ತಿದ್ದ. ಈ ವೇಳೆ ಅತೀ ವೇಗವಾಗಿ ಜೆಸಿಬಿಯೊಂದು ಈ ಮಾರ್ಗವಾಗಿ ಬಂದಿದ್ದು, ರಸ್ತೆಯಲ್ಲಿ ಆಟವಾಡುತ್ತಿದ್ದ ಮಾಸ್ಟರ್ ಥನವ್ ರೆಡ್ಡಿಗೆ ಡಿಕ್ಕಿಯಾಗಿ ತಲೆಯ ಮೇಲೆ ಹರಿದು ಹೋಗಿದೆ.

Heartbreaking Accident in Bengaluru Child Killed After Crashing Into JCB

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮಗುವನ್ನು ಸ್ಥಳೀಯ ವೈದೇಹಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿತ್ತು. ಆದರೆ ದುರಾದೃಷ್ಟವಶಾತ್ ಪರೀಕ್ಷೆ ನಡೆಸಿದ ವೈದ್ಯರು ಮಾರ್ಗ ಮಧ್ಯದಲ್ಲಿಯೇ ಮಗು ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ. ಎರಡು ವರ್ಷದ ಮಗನನ್ನು ಕಣ್ಣೇದುರೇ ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ವೈದೇಹಿ ಆಸ್ಪತ್ರೆಯಲ್ಲಿ ಮಗುವಿನ ಮರಣೋತ್ತರ ಪರೀಕ್ಷೆ ನಡೆದಿದ್ದು, ಅಪಘಾತ ಸಂಬಂಧ ಮಹಾದೇವಪುರ ಸಂಚಾರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಜೆಸಿಬಿ ಚಾಲಕನ ಅಜಾಗರೂಕತೆಯೇ ಎರಡು ವರ್ಷದ ಮಗು ಸಾವಿಗೆ ಕಾರಣ ಎನ್ನುವ ಆರೋಪ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+