Heart Attack: ವಿದ್ಯಾರ್ಥಿಗಳಿಗೆ ಸಿಪಿಆರ್ ಚಿಕಿತ್ಸೆ ಬಗ್ಗೆ ಶಿಕ್ಷಣ ನೀಡಲು ಆರೋಗ್ಯ ಇಲಾಖೆ ಪ್ಲಾನ್
ಬೆಂಗಳೂರು, ಅಕ್ಟೋಬರ್ 02: ಇತ್ತೀಚಿಗೆ ಹೃದಯಾಘಾತಗಳು ಹೆಚ್ಚಾಗುತ್ತಿದ್ದು, ವಯಸ್ಸಿನ ಮಿತಿ ಇಲ್ಲದೇ ಜನರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದಾರೆ. ಬಹುತೇಕ ಜನರು ಹೃದಯಘಾತವಾದಾಗ ಆಸ್ಪತ್ರೆಗೆ ಬರುವ ಮುನ್ನವೇ ಸಾವನ್ನಪ್ಪುತ್ತಿದ್ದಾರೆ.
ಹೃದಯಘಾತವಾದ ಸಂದರ್ಭದಲ್ಲಿ ವ್ಯಕ್ತಿಯು ಮೂರ್ಛೆ ಹೋದರೆ, ಹೃದಯ ಬಡಿತವು ನಿಂತುಹೋದರೆ ಅಥವಾ ನಾಡಿ ಮಿಡಿತ ನಿಂತಿದ್ದರೆ ಅಂತಹ ಪರಿಸ್ಥಿತಿಯಲ್ಲಿ ಸಿಪಿಆರ್ ನೀಡಲಾಗುತ್ತದೆ.

ಹೃದಯದಿಂದ ಶ್ವಾಸಕೋಶಕ್ಕೆ ಹೋಗುವ ಶುದ್ಧರಕ್ತನಾಳವು (ಸಿಪಿಆರ್- (ಕಾರ್ಡಿಯೋಪಲ್ಮೋನರಿ ರೆಸಸಿಟೇಶನ್) ಹೃದಯ ಬಡಿತ ಅಥವಾ ಕಂಪನವನ್ನು ಅನುಸರಿಸಿದರೆ ಸುಗಮ ರಕ್ತ ಸಂಚಾರಕ್ಕೆ ಸಹಾಯ ಮಾಡುತ್ತದೆ.
ಹೀಗಾಗಿ ಇಂತಹ ಸಿಪಿಆರ್ ಬಗ್ಗೆ ಶಿಕ್ಷಣ ಕೊಡಲು ಆರೋಗ್ಯ ಇಲಾಖೆ ಯೋಜನೆ ರೂಪಿಸಿದ್ದಾರೆ. ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಸಿಪಿಆರ್ ಕಲಿಸಿಕೊಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಮುಂದಿನ ವರ್ಷ ಶಾಲಾ ಪಠ್ಯದಲ್ಲಿ ಆರೋಗ್ಯ ಪಠ್ಯ ಸೇರ್ಪಡೆಗೆ ಚರ್ಚೆ ಮಾಡಲಾಗಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆ ಬಳಿ ಆರೋಗ್ಯ ಇಲಾಖೆ ಪ್ರಸ್ತಾಪ ನಡೆಸಿದೆ.
ಮುಂದಿನ ಅಕಾಡೆಮಿಕ್ ವರ್ಷದಿಂದ ಸಿಪಿಆರ್ ಸೇರ್ಪಡೆಗೆ ಸಿದ್ಧತೆ ನಡೆಯುತ್ತಿದ್ದು, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪಠ್ಯದಲ್ಲಿ ಸಿಪಿಆರ್ ಸೆರ್ಪಡೆಗೆ ಶಿಕ್ಷಣ ಇಲಾಖೆಗೆ ಪ್ರಸ್ತಾಪ ಸಲ್ಲಿಸಲಾಗಿದೆ. ಜೊತೆಗೆ ಬಸ್, ರೈಲ್ವೆ, ಶಾಪಿಂಗ್ ಮಾಲ್‌ನಲ್ಲಿಯೂ ಸಿಪಿಆರ್ ತರಬೇತಿಗೂ ಪ್ಲಾನ್ ಮಾಡಲಾಗಿದೆ.

ಸಿಪಿಆರ್ ಎಂದರೇನು?
1. ಸಿಪಿಆರ್ ಅಂದರೆ ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್
2. ವ್ಯಕ್ತಿಯ ಹೃದಯ ಬಡಿತ ನಿಂತರೆ ಈ ಚಿಕಿತ್ಸೆ ನೀಡಲಾಗುತ್ತೆ
3. ಮೂರ್ಛೆ ಹೋದ್ರೆ, ನಾಡಿ ಮಿಡಿತ ನಿಂತರು ಸಿಪಿಆರ್ ಚಿಕಿತ್ಸೆ
4. ಸಿಪಿಆರ್ ಚಿಕಿತ್ಸೆ ರೋಗಿಗೆ ಉಸಿರಾಡಲು ನೆರವಾಗುತ್ತದೆ
5. ಹೃದಯ ಮತ್ತು ಮೆದುಳಿನಲ್ಲಿ ರಕ್ತ ಪರಿಚಲನೆಗೆ ಸಹಾಯ
6. ಸಿಪಿಆರ್ ಸಹಾಯದಿಂದ,ವ್ಯಕ್ತಿಗೆ ಹೊಸ ಜೀವ ಸಿಗಬಗುತ್ತದೆ
ಸಿಪಿಆರ್‌ನ ಎರಡು ವಿಧಾನ
1.ಒಬ್ಬ ವ್ಯಕ್ತಿಯಿಂದ ರೋಗಿಗೆ ನೀಡುವ ಚಿಕಿತ್ಸೆ
2.ವೈದ್ಯಕೀಯ ಸಲಕರಣೆಗಳ ಸಹಾಯದಿಂದ ಚಿಕಿತ್ಸೆ
ಸಿಪಿಆರ್ ಚಿಕಿತ್ಸೆ ಹೇಗೆ
1. ಮೊಣಕೈ ನೇರವಾಗಿ ಇರಿಸಿ ಮತ್ತು ಎರಡೂ ಕೈ ನೇರವಾಗಿ ಇರಿಸಿ
2. ರೋಗಿಯನ್ನು ನೆಲ ಅಥಾವ ಬೆನ್ನಿನ ಮೇಲೆ ಮಲಗಿಸಬೇಕು
3. ರೋಗಿ ದೇಹ ನೇರವಾಗಿರಲಿ.ತೋಳು ಅಥವಾ ಕಾಲು ಬಾಗಬಾರದು
ಪಾಲಿಸಬೇಕಾದ ನಿಯಮ
1. ಸಿಪಿಆರ್ ಚಿಕಿತ್ಸೆಯನ್ನ ವ್ಯಕ್ತಿಯ ವಯಸ್ಸಿಗೆ ತಕ್ಕಂತೆ ನೀಡಬೇಕು
2. ಮಕ್ಕಳಿಂದ ವೃದ್ಧರವರೆಗೆ ಸಿಪಿಆರ್ ನೀಡುವಾಗ ವಯಸ್ಸು ಮಖ್ಯ
3. ಸುಮ್ಮನೆ ಯಾವುದೇ ಪ್ರಯೋಗಕ್ಕೆ ಇಳಿಯುವುದು ಒಳ್ಳೆಯದಲ್ಲ
4. ರೋಗಿಗೆ ಚಿಕತ್ಸೆ ನೀಡುವ ಸಿಪಿಆರ್ ಬಗ್ಗೆ ಜ್ಞಾನ ಅಗತ್ಯವಿದೆ
5. ತಪ್ಪಾಗಿ ಮಾಡಿದ ಸಿಪಿಆರ್ ಚಿಕಿತ್ಸೆ ರೋಗಿ ಜೀವ ತೆಗೆಯಬಹುದು
6. ಭಯ ಪಡದೆ ಸಿಪಿಆರ್ ಚಿಕಿತ್ಸೆ ನೀಡುವುದು ಬಹಳ ಮುಖ್ಯ












Click it and Unblock the Notifications