ರಾಜಕೀಯ ಜಂಜಾಟದ ನಡುವೆಯೇ ಮುಂದುವರೆದ ಎಚ್ಡಿಕೆ ಟೆಂಪಲ್ ರನ್
Recommended Video

ಬೆಂಗಳೂರು, ಸೆಪ್ಟೆಂಬರ್ 21: ರಾಜ್ಯ ಸಮ್ಮಿಶ್ರ ಸರ್ಕಾರ ಅಸ್ಥಿರದ ಮಾತು ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ. ಇದಕ್ಕೆ ಪುಷ್ಠಿ ಎಂಬಂತೆ ಜಾರಕಿಹೊಳಿ ಸಹೋದರರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರುತ್ತಾರೆ ಎನ್ನುವ ವಿಚಾರ ಸಮ್ಮಿಶ್ರ ಸರ್ಕಾರಕ್ಕೆ ತೀವ್ರ ತಲೆನೋವಾಗಿತ್ತು. ಇದೀಗ ಕಾಂಗ್ರೆಸ್ ಮುಖಂಡರ ಕೆಲವು ಭರವಸೆಗಳ ಮೂಲಕ ಸ್ಥಿತಿ ಕೊಂಚ ಶಾಂತವಾಗಿದೆ.
ಇದೆಲ್ಲಾ ರಾಜಕೀಯ ಜಂಜಾಟಗಳ ಮಧ್ಯೆ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಟೆಂಪಲ್ ರನ್ ಆರಂಭಿಸಿದ್ದಾರೆ. ಶುಕ್ರವಾರ(ಸೆ.21)ರಂದು ಶೃಂಗೇರಿಗೆ ತೆರಳಲಿದ್ದಾರೆ.
ಶುಕ್ರವಾರ ಸಂಜೆ ಶೃಂಗೇರಿಗೆ ತೆರಳಲಿದ್ದು ಶನಿವಾರ ಶಾರದಾಂಬೆ ದರ್ಶನ ಪಡೆಯಲಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಬಂದಿರುವ ತೊಂದರೆಗಳು ನಿವಾರಣೆಗಾಗಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ವಿಧಾನಸಭೆ ಚುನಾವಣೆಗೂ ಮುನ್ನ ಜನವರಿ ತಿಂಗಳಿನಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಅತಿರುದ್ರಯಾಗ ನಡೆಸಿದ್ದರು. ದೇವೇಗೌಡ ಕುಟುಂಬದವರೆಲ್ಲರಿಗೂ ದೇವರ ಮೇಲೆ ಅತಿಯಾದ ನಂಬಿಕೆ ಇರುವುದು ನಿಜ, ಇದೇ ಸಂದರ್ಭದಲ್ಲಿ ಶೃಂಗೇರಿ ಜಗದ್ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲಿದ್ದಾರೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.












Click it and Unblock the Notifications