ಕುಮಾರಸ್ವಾಮಿ ಲೂಸ್ ಟಾಕ್ ನಿಂದ ಮನಸ್ಸು ಹಾಳು ಮಾಡಿದರು: ಜಮೀರ್ ಅಹ್ಮದ್
ಬೆಂಗಳೂರು, ಆಗಸ್ಟ್ 1: ಒಂದು ತಿಂಗಳ ಹಿಂದೆ ಕೂಡ ಜೆಡಿಎಸ್ ನಲ್ಲೇ ಉಳಿಯುವ ಮನಸ್ಸಿತ್ತು. ಆದರೆ ಅದನ್ನು ತಮ್ಮ ಮಾತುಗಳಿಂದ ಕುಮಾರಸ್ವಾಮಿ ಹಾಳು ಮಾಡಿದರು ಎಂದು ಜೆಡಿಎಸ್ ನ ಭಿನ್ನಮತೀಯ ಶಾಸಕ ಜಮೀರ್ ಅಹ್ಮದ್ ಖಾನ್ ಮಂಗಳವಾರ ಹೇಳಿದ್ದಾರೆ.
ತಮ್ಮ ಜನ್ಮದಿನಾಚರಣೆ ನಂತರ ಮಾಧ್ಯಮದವರ ಜತೆಗೆ ಮಾತನಾಡಿದ ಅವರು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನನ್ನ ರಾಜಕೀಯ ಗುರು. ಅವರ ಋಣ ನನ್ನ ಮೇಲಿದೆ. ನಮಗೆ (ಬಂಡಾಯ ಶಾಸಕರು) ಒಂದು ತಿಂಗಳ ಹಿಂದೆ ಜೆಡಿಎಸ್ ನಲ್ಲೇ ಉಳಿಯುವ ಮನಸ್ಸಿತ್ತು. ಕುಮಾರಸ್ವಾಮಿ ಅವರ ಲೂಸ್ ಟಾಕ್ ನಿಂದ ನಮ್ಮ ಮನಸ್ಸನ್ನು ಹಾಳು ಮಾಡಿದರು. ಇನ್ನು ಜೆಡಿಎಸ್ ನಲ್ಲಿ ಉಳಿಯುವ ಮನಸ್ಸಿಲ್ಲ ಎಂದರು.

ನನಗೆ ಕಾಂಗ್ರೆಸ್ ಮಾತ್ರ ಆಯ್ಕೆಯಾಗಿ ಉಳಿದಿತ್ತು. ಕೋಮುವಾದಿ ಬಿಜೆಪಿ ಸೇರುವುದಿಲ್ಲ. ಇನ್ನು ನನ್ನ ರಾಜಕೀಯ ಗುರುಗಳು ದೇವೇಗೌಡರೇ ಹೊರತು ಕುಮಾರಸ್ವಾಮಿ ಅಲ್ಲ. ದೇವೇಗೌಡರ ವಿರುದ್ಧವಾಗಿ ಯಾವುದೇ ಹೇಳಿಕೆ ಕೊಡುವುದಿಲ್ಲ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಚಾಮರಾಜಪೇಟೆಯಲ್ಲಿ ಏನಾದರೂ ಜೆಡಿಎಸ್ ಗೆದ್ದರೆ ನನ್ನ ರುಂಡವನ್ನು ಕತ್ತರಿಸಿ ಇಡುತ್ತೇನೆ ಎಂದು ಜಮೀರ್ ಅಹ್ಮದ್ ಖಾನ್ ಇತ್ತೀಚೆಗೆ ಹೇಳಿಕೆ ನೀಡಿದ್ದರು.












Click it and Unblock the Notifications