ಐದು ವರ್ಷ ಅಧಿಕಾರ ನಡೆಸೋದು ಶತಃಸಿದ್ಧ: ಎಚ್ಡಿಕೆ ವಿಶ್ವಾಸ
Recommended Video

ಬೆಂಗಳೂರು, ಸೆಪ್ಟೆಂಬರ್ 19: ನನಗೆ ಯಾವುದೇ ರಾಜಕೀಯ ಒತ್ತಡವಿಲ್ಲ, ನಾನು ಅಧಿಕಾರವನ್ನು ಕಳೆದುಕೊಳ್ಳುವ ಬಗ್ಗೆ ಚರ್ಚೆ ನಡೆಯುತ್ತಿರುವುದು ವಿಷಾದ ಸಂಗತಿ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದರು.
ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ 100 ನೇ ರಾಜ್ಯ ಪರಿಷತ್ ಸಭೆ ಹಾಗೂ ಕೊಂಡಜ್ಜಿ ಸಭಾಂಗಣ ಉದ್ಘಾಟಿಸಿ ಮಾತನಾಡಿ ಅವರು, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ, ಯಾವುದೇ ಆತಂಕವಿಲ್ಲ, ನಾವು ಐದು ವರ್ಷಗಳನ್ನು ಪೂರೈಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾನು ಅನಾರೋಗ್ಯದ ನಡುವೆಯೂ ಪಿ ಜಿ ಆರ್ ಸಿಂದ್ಯಾ ಅವರ ಒತ್ತಡ ನಡುವೆ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದೆನೆ. ಈ ಸರ್ಕಾರವನ್ನು ಐದು ವರ್ಷ ಇಟ್ಟುಕೊಳ್ಳುತ್ತೇನೆ, ಈ ಬಗ್ಗೆ ಆತಂಕ ಬೇಡ, ಸರ್ಕಾರ ರಚನೆಯಾದಗಿನಿಂದ ಸರ್ಕಾರ ಬೀಳುವ ಬಗ್ಗೆ ವರದಿ ಮಾಡುತ್ತಾರೆ.

ಹೃದಯ ಚಿಕಿತ್ಸೆಗೆ ಒಳಗಾದ ನನ್ನ ಸ್ಥಿತಿ ಏನಾಗಬಾರದು, ನಾನು ಮಾಡುವ ಒಳ್ಳೆಯ ಕಾರ್ಯಗಳಿಗೆ ಮಾಧ್ಯಮದವರು ಬೆಂಬಲ ನೀಡಿ, ಕುರ್ಚಿ ಉಳಿಸಿಕೊಳ್ಳಲಿಕ್ಕೆ ನೀವು ಬೆಂಬಲ ನೀಡ ಬೇಡಿ, ನಾನು ಬೆಳಗ್ಗೆಯಿಂದ ರಾತ್ರಿವರೆಗೆ ಜನತಾದರ್ಶನ ನಡೆಸುತ್ತೇನೆ ಇದು ಸುಲಭದ ಕೆಲಸವಲ್ಲ, ರಾಜಕೀಯ ಒತ್ತಡ ಬದಿಗಿಟ್ಟು ಜನರ ಒಳಿತಿಗಾಗಿ ದುಡಿಯುತ್ತಿದ್ದೇನೆ ಎಂದರು.
ನಾನು ಅಧಿಕಾರಿಗಳನ್ನು ಗೌರವದಿಂದ ನಡೆಸಿಕೊಳ್ಳುತ್ತೇನೆ, ಸರ್ಕಾರದ ಬಗ್ಗೆ ಅನುಮಾನ ಹೊಂದಿರುವ ಅಧಿಕಾರಿಗಳಿಗೆ ಒಂದು ವಾರ ಟೈಮ್ ಕೊಡುತ್ತೇನೆ, ಸರಿಯಾದ ರೀತಿ ಕಾರ್ಯನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.











Click it and Unblock the Notifications