• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಟಿಪ್ಪು ಜಯಂತಿ ಪ್ರತಿ ವರ್ಷ ನಡೆಯುತ್ತೆ: ಕುಮಾರಸ್ವಾಮಿ ಸ್ಪಷ್ಟನೆ

|
   ಟಿಪ್ಪು ಜಯಂತಿ ಆಚರಣೆ ಪ್ರತಿ ವರ್ಷ ನಡೆಯುತ್ತೆ ಎಂದು ಹೇಳಿಕೆ ಕೊಟ್ಟ ಎಚ್ ಡಿ ಕುಮಾರಸ್ವಾಮಿ | Oneindia Kannada

   ಬೆಂಗಳೂರು, ನವೆಂಬರ್ 14: ಟಿಪ್ಪು ಜಯಂತಿಯನ್ನು ರದ್ದುಪಡಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.

   ಬುಧವಾರ ಮಕ್ಕಳ ದಿನಾಚರಣೆ ಅಂಗವಾಗಿ ನೆಹರು ಪ್ರತಿಮೆಗೆ ಗೌರವ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಒಂದು ಬಾರಿ ಯಾವುದೇ ಮಹಾನುಭಾವರ ಜಯಂತಿ ಆಚರಣೆ ಮಾಡಲು ನಿರ್ಧರಿಸಿದರೆ ಆ ಕಾರ್ಯಕ್ರಮ ಮುಂದುವರೆಯುತ್ತದೆ.

   ಟಿಪ್ಪು ಜಯಂತಿ ಓಕೆ, ಆದರೆ ಪರ, ವಿರೋಧಿ ಮೆರವಣಿಗೆಗೆ ಅವಕಾಶವಿಲ್ಲ

   ನಮ್ಮ ಸರ್ಕಾರವೂ ಟಿಪ್ಪು ಜಯಂತಿ ಆಚರಣೆಯಲ್ಲಿ ಸಹಮತ ಹೊಂದಿದೆ ಈ ಬಗ್ಗೆ ಯಾವುದೇ ರೀತಿಯ ಬದಲಾವಣೆ ಇಲ್ಲ ಎಂದು ಸ್ಪಷ್ಟನೆ ನೀಡಿದರು. ಇದೇ ವೇಳೆ ತಾವು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವ ಕುರಿತು ಸ್ಪಷ್ಟನೆ ನೀಡಿದ ಅವರು ರಾಜ್ಯ ಸರ್ಕಾರ ಆಚರಿಸುವ ಎಲ್ಲಾ ಜಯಂತಿಗಳಲ್ಲಿ ಮುಖ್ಯಮಂತ್ರಿಗಳೇ ಖುದ್ದಾಗಿ ಪಾಲ್ಗೊಳ್ಳಬೇಕೆಂಬ ನಿಯಮವಿಲ್ಲ. ವೈದ್ಯರ ಸಲಹೆ ಮೇರೆಗೆ ನಾನು ವಿಶ್ರಾಂತಿ ಪಡೆಯಬೇಕಿತ್ತು ಆ ಕಾರಣಕ್ಕಾಗಿ ಹಾಜರಾಗಿಲ್ಲ, ಇದಕ್ಕೆ ಬೇರಾವುದೇ ಅರ್ಥ ಇಲ್ಲ ಎಂದು ಸ್ಪಷ್ಟನೆ ನೀಡಿದರು.

   ಇದೇ ವೇಳೆ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಸಿಸಿಬಿ ತನಿಖೆ ನಡೆಸುತ್ತಿರುವ ಕುರಿತಂತೆ ಪ್ರತಿಕ್ರಿಯಿಸಿದ ಅವರು ಜನಾರ್ದನ ರೆಡ್ಡಿ ವಿರುದ್ಧ ಯಾವುದೇ ದ್ವೇಷದ ರಾಜಕಾರಣ ಮಾಡುತ್ತಿಲ್ಲ, ಆಂಬಿಡೆಂಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತಮ್ಮ ಕೆಲಸವನ್ನು ತಾವು ಮಾಡುತ್ತಿದ್ದಾರೆ ಎಂದು ಹೇಳಿದರು.

   ಅವಹೇಳನಕಾರಿ ಹೇಳಿಕೆ ನೀಡುವ ಎಲ್ಲರ ವಿರುದ್ಧ ಕ್ರಮ: ಪರಮೇಶ್ವರ್‌

   ಇದೇ ವೇಳೆ ರೆಡ್ಡಿಯ ಆಪ್ತರೊಬ್ಬರು 18 ಕೋಟಿರೂಗಳನ್ನು ತಿರುಪತಿ ತಿಮ್ಮಪ್ಪನ ಹುಂಡಿಗೆ ಹಾಕಿರುವುದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಇದು ಯಾವ ರೀತಿ ಅರ್ಥ ಬರುತ್ತದೆ ಎಂಬುದನ್ನು ಜವಾಬ್ದಾರಿ ಸ್ಥಾನದಲ್ಲಿರುವವರು ಯೋಚನೆ ಮಾಡಬೇಕು.

   ಸಾರ್ವಜನಿಕರ ಹಣ ತೆಗೆದುಕೊಂಡು ಹೋಗಿ ತಿರುಪತಿಯ ಹುಂಡಿಗೆ ಹಾಕಿದ್ದೇನೆ ಎಂದು ಹೇಳುವ ಹಿಂದಿನ ಅರ್ಥ ಆ ಹಣ ಗುಳುಂ ಆಯಿದತೆಂದೋ ಅಥವಾ ದೇವರಿಗೆ ಹೋಯಿತೆಂದೋ ಯಾವ ರೀತಿ ಅಂದುಕೊಳ್ಳಬೇಕು ಎಂದು ಪ್ರಶ್ನಿಸಿದರು.

   English summary
   Chief minister H.D.Kumaraswamy has been clarified that Tipu Jayanti will be continued next year as the previous government had took decision to celebrate every year.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X