HD Revanna: ಹೆಚ್‌ಡಿ ರೇವಣ್ಣ ಬಿಡುಗಡೆ ವೇಳೆ ಗಲಾಟೆ ಲಾಠಿಪ್ರಹಾರ!

ಬೆಂಗಳೂರು ಮೇ 14: ಅಪಹಾರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಮಾಜಿ ಸಚಿವ ಮಾಜಿ ಶಾಸಕ ಹೆಚ್‌ಡಿ ರೇವಣ್ಣ ಅವರನ್ನು ಇಂದು ಬಿಡುಗಡೆ ಮಾಡಲಾಯಿತು. ಇಂದು ಅವರ ಜಾಮೀನು ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೆ ಅವರನ್ನು ಬಿಡುಗಡೆಗೊಳಿಸಲಾಯಿತು.

ಪರಪ್ಪನ ಅಗ್ರಹಾರ ಜೈಲಿನಿಂದ ಹೆಚ್‌ಡಿ ರೇವಣ್ಣ ಬಿಡುಗಡೆಯಾದ ವೇಳೆ ತಳ್ಳಾಟ ನೂಕಾಟ ನಡೆದಿದೆ. ರೇವಣ್ಣ ಅವರ ಕಾರಿನ ಮೇಲೆ ಕಾರ್ಯಕರ್ತರು ಮುಗಿ ಬಿದ್ದ ಘಟನೆ ನಡೆದಿದೆ. ಇದರಿಂದಾಗಿ ಪೊಲೀಸರು ಕಾರ್ಯಕರ್ತರನ್ನು ಚದುರಿಸಲು ಲಾಠಿ ಪ್ರಹಾರ ಮಾಡಿದ್ದಾರೆ.

HD Revanna Release Riot and caning during the release of HD Revanna

ಜೈಲಿನಿಂದ ಹೊರಬರುತ್ತಿದ್ದಂತೆ ಹೆಚ್‌ಡಿ ರೇವಣ್ಣ ಅವರ ಪರ ಕಾರ್ಯಕರ್ತರು ಘೋಷಣೆಯನ್ನು ಕೂಗಿದರು. ಅವರ ಪರ ಘೋಷಣೆ ಕೂಗುತ್ತಾ ಅವರನ್ನು ನೋಡಲು ಮುಗಿಬಿದ್ದರು. ಈ ವೇಳೆ ಕಾರ್ಯಕರ್ತರು ಕಾರಿಗೆ ಅಡ್ಡಿ ಹಾಕಿದರು. ಕೂಡಲೆ ಕಾರ್ಯಕರ್ತರನ್ನು ಚದುರಿಸಲು ಪೊಲೀಸರು ಲಘುಲಾಠಿ ಪ್ರಹಾರ ಮಾಡಿದರು.

ಇದರಿಂದಾಗಿ ಕಾರ್ಯಕರ್ತರು ಪೊಲೀಸರು ತಮ್ಮ ಮೇಲೆ ಸುಖಾ ಸುಮ್ಮನೆ ಲಾಠಿಪ್ರಹಾರ ಮಾಡಿದ್ದಾರೆಂದು ಆಕ್ರೋಶ ಹೊರಹಾಕಿದ್ದಾರೆ. ಹತ್ತು ದಿನಗಳ ಸೆರೆಮನೆ ವಾಸದ ಬಳಿಕ ಹೆಚ್‌ಡಿ ರೇವಣ್ಣ ಅವರು ಬೆಂಗಳೂರಿನ ತಮ್ಮ ನಿವಾಸಕ್ಕೆ ತೆರಳಿದರು. ಈ ವೇಳೆ ರೇವಣ್ಣ ಅವರನ್ನು ಕಂಡು ಕುಟುಂಬಸ್ಥರು ಭಾವುಕರಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+