ಸಂಸಾರಶರಧಿಯ ದಾಂಟಿಸಿ... ಕುಮಾರಸ್ವಾಮಿ ಟ್ವೀಟಿನ ಅರ್ಥ ಹುಡುಕುತ್ತ..!
ಬೆಂಗಳೂರು, ಸೆಪ್ಟೆಂಬರ್ 26: ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ವಚನ ಚಳಚಳಿ ಹರಿಕಾರ ಬಸವಣ್ಣನವರ ವಚನವೊಂದನ್ನು ಟ್ವೀಟ್ ಮಾಡುವ ಮೂಲಕ ಅತೃಪ್ತ ಶಾಸಕರಿಗೆ ಬಿಸಿ ಮುಟ್ಟಿಸಿದ್ದಾರೆ. ಉಪಚುನಾವಣೆ ಘೋಷಣೆಯಾಗುತ್ತಿದ್ದಂತೆಯೇ ತಲೆಕೆಡಿಸಿಕೊಂಡಿದ್ದ ಅನರ್ಹ ಶಾಸಕರಿಗೆ ಇಂದು ಸುಪ್ರೀಂ ಕೋರ್ಟ್ ರಿಲೀಫ್ ನೀಡಿತ್ತು. ಕರ್ನಾಟಕದಲ್ಲಿ ಅಕ್ಟೋಬರ್ 21 ರಂದು ನಡೆಯಬೇಕಿದ್ದ ಉಪಚುನಾವಣೆಗೆ ತಡೆ ನೀಡಿತ್ತು.
Recommended Video
ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಎಚ್ ಡಿ ಕುಮಾರಸ್ವಾಮಿ ಬಸವಣ್ಣನವರ ವಚನದ ಸಾಲುಗಳನ್ನು ಟ್ವೀಟ್ ಮಾಡಿದ್ದಾರೆ.
"ಕಾಲಲಿ ಕಟ್ಟಿದ ಗುಂಡು
ಕೊರಳಲಿ ಕಟ್ಟಿದ ಬೆಂಡು
ತೇಲಲೀಯದು ಗುಂಡು
ಮುಳುಗಲೀಯದು ಬೆಂಡು
ಇಂತಪ್ಪ ಸಂಸಾರಶರಧಿಯ ದಾಂಟಿಸಿ ಕಾಲಾಂತಕನೆ ಕಾಯೋ
ಕೂಡಲಸಂಗಮ.
ಕಾಲಲಿ ಕಟ್ಟಿದ ಗುಂಡು
— H D Kumaraswamy (@hd_kumaraswamy) September 26, 2019
ಕೊರಳಲಿ ಕಟ್ಟಿದ ಬೆಂಡು
ತೇಲಲೀಯದು ಗುಂಡು
ಮುಳುಗಲೀಯದು ಬೆಂಡು
ಇಂತಪ್ಪ ಸಂಸಾರಶರಧಿಯ ದಾಂಟಿಸಿ ಕಾಲಾಂತಕನೆ ಕಾಯೋ
ಕೂಡಲಸಂಗಮ.
ಅರ್ಹತೆ ಕಳೆದುಕೊಂಡ ಶಾಸಕರ ಪಾಡು ನೋಡಿ ಹೇಳಬೇಕೆನಿಸಿದ್ದು.
ಅರ್ಹತೆ ಕಳೆದುಕೊಂಡ ಶಾಸಕರ ಪಾಡು ನೋಡಿ ಹೇಳಬೇಕೆನಿಸಿದ್ದು" ಇವು ಎಚ್ ಡಿ ಕುಮಾರಸ್ವಾಮಿ ಅವರ ಟ್ವೀಟ್ ಸಾಲುಗಳು.

'ಅನರ್ಹ ಶಾಸಕರ ಪಾಡು, ಕಾಲಲ್ಲಿ ಗುಂಡು ಕಟ್ಟಿಕೊಂಡು, ಕೊರಳಲ್ಲಿ ಬೆಂಡು ಕಟ್ಟಿಕೊಂಡು ನೀರಲ್ಲಿ ಬಿದ್ದ ಪರಿಸ್ಥಿತಿಯಾಗಿದೆ. ಮುಳುಗೋಕೆ ಬೆಂಡು ಬಿಡೋಲ್ಲ, ತೇಲೋಕೆ ಗುಂಡು ಬಿಡೋಲ್ಲ! ಹೀಗಿರುವಾಗ ಸಂಸಾರದ ಸಾಗರವನ್ನು ನೀನೇ ದಾಟಿಸಬೇಕು ಕೂಡಲ ಸಂಗಮದೇವ' ಎಂಬುದು ಇದರ ತಾತ್ಪರ್ಯ.
ಈ ವಾಕ್ಯಗಳನ್ನು ಅನರ್ಹ ಶಾಸಕರ ಇಂದಿನ ಪರಿಸ್ಥಿತಿಗೆ ಹೋಲಿಸಿ ಎಚ್ ಡಿ ಕುಮಾರಸ್ವಾಮಿ ಅವರು ಉಲ್ಲೇಖಿಸಿದ್ದಾರೆ.












Click it and Unblock the Notifications