ಎಚ್‌.ಡಿ.ಕುಮಾರಸ್ವಾಮಿ ಅದ್ಧೂರಿ ಷಷ್ಠಿಪೂರ್ತಿ: ವಿಡಿಯೋ ವೈರಲ್

ಬೆಂಗಳೂರು, ಡಿಸೆಂಬರ್ 14: ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ 60 ವರ್ಷ ತುಂಬುವ ಸಂದರ್ಭ ಷಷ್ಠಿಪೂರ್ತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದ್ದು, ಧಾರ್ಮಿಕ ವಿಧಿವಿದಧಾನಗಳು ಇಂದು ಜರುಗಿದವು.

ಷಷ್ಠಿಪೂರ್ತಿಯ ವಿಡಿಯೋ ವೈರಲ್ ಆಗಿದ್ದು, ಅನಿತಾ ಕುಮಾರಸ್ವಾಮಿ-ಕುಮಾರಸ್ವಾಮಿ ಅವರು ಹಾರ ಬದಲಾಯಿಸಿಕೊಳ್ಳುತ್ತಿರುವ. ನಿಖಿಲ್ ಕುಮಾರಸ್ವಾಮಿ ಅವರು ಪೋಷಕರಿಗೆ ನೀರು ಹಾಕುತ್ತಿರುವ ದೃಶ್ಯಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಡಿಸೆಂಬರ್ 16 ಕ್ಕೆ ಕುಮಾರಸ್ವಾಮಿ ಅವರ ಹುಟ್ಟುಹಬ್ಬವಿದ್ದು, ಅಂದಿಗೆ ಕುಮಾರಸ್ವಾಮಿ ಅವರಿಗೆ 60 ತುಂಬುತ್ತದೆ. ಹಾಗಾಗಿ ಷಷ್ಠಿಪೂರ್ತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನಿನ್ನೆಯಿಂದಲೇ ಹಲವು ಧಾರ್ಮಿಕ ಕಾರ್ಯಗಳು ಕುಮಾರಸ್ವಾಮಿ ನಿವಾಸದಲ್ಲಿ ನಡೆಯುತ್ತಿವೆ.

HD Kumaraswamy Turning 60, Performed Rituals In Residence

ದೇವೇಗೌಡ, ಪತ್ನಿ ಚೆನ್ನಮ್ಮ ದೇವೇಗೌಡ ಸೇರಿದಂತೆ ಕುಟುಂಬದ ಹಲವು ಬಂಧುಗಳು ಷಷ್ಠಿಪೂರ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಜೆಡಿಎಸ್‌ ನ ಕೆಲವು ಶಾಸಕರೂ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ.

ಕುಮಾರಸ್ವಾಮಿ ಅವರ 60 ನೇ ಹುಟ್ಟುಹಬ್ಬವನ್ನೂ ಸಹ ಅದ್ಧೂರಿಯಾಗಿ ಆಚರಣೆ ಮಾಡಲು ಯೋಜನೆ ಹಾಕಲಾಗಿದ್ದು, ಜೆಡಿಎಸ್‌ ನ ಎಲ್ಲ ಶಾಸಕರು ಒಂದೇ ವೇದಿಕೆಯಲ್ಲಿ ಸೇರಿ ಹುಟ್ಟುಹಬ್ಬ ಆಚರಣೆ ಮಾಡಲು ಸಿದ್ಧತೆ ನಡೆಯುತ್ತಿದೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+