ಕೆರೆ ಒತ್ತುವರಿ ತೆರವು, ಹೋರಾಟ ಆರಂಭಿಸಲಿದೆ ಜೆಡಿಎಸ್
ಬೆಂಗಳೂರು, ಮೇ 11 : ಬೆಂಗಳೂರಿನಲ್ಲಿ ನಡೆಯುತ್ತಿರುವ ಕೆರೆ ಒತ್ತುವರಿ ತೆರವು ವಿರುದ್ಧ ಜೆಡಿಎಸ್ ಹೋರಾಟ ಆರಂಭಿಸಲಿದೆ. ಎಚ್.ಡಿ.ಕುಮಾರಸ್ವಾಮಿ ತೆರವು ಕಾರ್ಯಾಚರಣೆ ನಡೆದ ಸ್ಥಳಗಳಿಗೆ ಮಂಗಳವಾರ ಭೇಟಿ ನೀಡಲಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್, ವಿಧಾನಪರಿಷತ್ ಸದಸ್ಯ ಶರವಣ ಅವರು ಮಂಗಳವಾರ ಕೆರೆ ಜಾಗದಲ್ಲಿ ನಿರ್ಮಾಣಗೊಂಡಿದ್ದ ಮನೆಗಳ ನೆಲಸಮಗೊಳಿಸಿದ ಸ್ಥಳಗಳಿಗೆ ಭೇಟಿ ನೀಡಿ, ಜನರನ್ನು ಭೇಟಿ ಮಾಡಲಿದ್ದಾರೆ.['ಸರ್ಕಾರದ ತಪ್ಪಿಗೆ ಜನರನ್ನು ನೇಣಿಗೆ ಹಾಕುವುದು ಸರಿಯಲ್ಲ']

ಭೇಟಿ ನೀಡುವ ಸ್ಥಳಗಳು
* ಬೆಳಗ್ಗೆ 10.15 ಬಾಣಸವಾಡಿ
* 11.30 ಪುಟ್ಟೇನಹಳ್ಳಿ
* 12.15 ಸಾರಕ್ಕಿ [ಬೆಂಗಳೂರಿಗರ ಆತಂಕ ದೂರ ಮಾಡಿದ ಸರ್ಕಾರ]
* 01 ಗಂಟೆ ಜರಗನಹಳ್ಳಿ
* 01.30 ಇಟ್ಟಮಡು
ಕುಮಾರಸ್ವಾಮಿ ಅವರ ಭೇಟಿಯ ಸಂದರ್ಭದಲ್ಲಿ ನೆಲಸಮಗೊಂಡ ಮನೆ ಮತ್ತು ಕಟ್ಟಡಗಳ ಮಾಲೀಕರು ದಾಖಲೆಗಳ ನಕಲು ಪ್ರತಿಯನ್ನು ನೀಡುವಂತೆ ಜೆಡಿಎಸ್ ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದೆ. [ಒತ್ತುವರಿ ಕಾರ್ಯಾಚರಣೆ ವಿರುದ್ಧ ಹೋರಾಟಕ್ಕೆ ಇಳಿದ ಬಿಜೆಪಿ]
ಸರ್ಕಾರದ ವಿರುದ್ಧ ಆಕ್ರೋಶ : ಬೆಂಗಳೂರಿನಲ್ಲಿ ನಡೆಯುತ್ತಿರುವ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ವಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಹಿರಿಯ ಕಾಂಗ್ರೆಸ್ ನಾಯಕ ಮತ್ತು ವಿಧಾನಸಭೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸಹ ಕಾರ್ಯಾಚರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಬೆಂಗಳೂರು ನಗರ ಜಿಲ್ಲಾಧಿಕಾರಿ ವಿ.ಶಂಕರ್ ಅವರು ನೀಡಿರುವ ಮಾಹಿತಿಯಂತೆ ಸಾರಕ್ಕಿ, ಪುಟ್ಟೇನಹಳ್ಳಿ, ಜರಗನಹಳ್ಳಿ ಕೆರೆಯ 82.23 ಎಕರೆ ಪ್ರದೇಶದ ಪೈಕಿ 34.20 ಎಕರೆ ಒತ್ತುವರಿಯಾಗಿತ್ತು. ಇವುಗಳಲ್ಲಿ ಶೇ.99ರಷ್ಟು ತೆರವುಗೊಳಿಸಲಾಗಿದೆ. ಬಾಣಸವಾಡಿ ಕೆರೆಯ 3 ಎಕರೆಯಲ್ಲಿ ನಿರ್ಮಿಸಿದ್ದ ವಾಣಿಜ್ಯ ಕಟ್ಟಡಗಳನ್ನು ತೆರವು ಮಾಡಲಾಗಿದೆ. ಚಿಕ್ಕಲಸಂದ್ರ ಕೆರೆ ಒತ್ತುವರಿ ತೆರವು ಸಂಬಂಧ ನೋಟಿಸ್ ನೀಡಲಾಗಿದೆ.












Click it and Unblock the Notifications