ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ನಗರದಲ್ಲಿ ಕೈಗಾರಿಕೆಗಳಿಗೆ ಕಡಿವಾಣ : ಕುಮಾರಸ್ವಾಮಿ

By Gururaj
|
Google Oneindia Kannada News

ಬೆಂಗಳೂರು, ಆಗಸ್ಟ್ 29 : ಬೆಂಗಳೂರು ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಹೊಸ-ಹೊಸ ಕೈಗಾರಿಕೆಗಳು ಸ್ಥಾಪನೆಯಾಗುತ್ತಿದ್ದು, ಇದರಿಂದ ನಗರದ ಮೇಲೆ ಒತ್ತಡ ಹೆಚ್ಚುತ್ತಿದೆ. ಆದರೆ, ನಗರದಲ್ಲಿನ ಇನ್ನು ಮುಂದೆ ಕೈಗಾರಿಕೆಗಳ ಸ್ಥಾಪನೆಗೆ ಕಡಿವಾಣ ಬೀಳುವ ನಿರೀಕ್ಷೆ ಇದೆ.

ಹೌದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಈ ಕುರಿತು ಭರವಸೆ ನೀಡಿದ್ದಾರೆ. ' ಬೆಂಗಳೂರು ನಗರದ ಮೇಲೆ ಉಂಟಾಗುತ್ತಿರುವ ಒತ್ತಡ ಕಡಿಮೆ ಮಾಡಲು ಕೈಗಾರಿಕೆಗಳಿಗೆ ಕಡಿವಾಣ ಹಾಕಲಾಗುತ್ತದೆ' ಎಂದು ಹೇಳಿದ್ದಾರೆ.

ಧಾರವಾಡದಲ್ಲಿ ಹೀರೋಹೊಂಡಾ ಘಟಕಧಾರವಾಡದಲ್ಲಿ ಹೀರೋಹೊಂಡಾ ಘಟಕ

'ನಗರದ ಮೇಲೆ ಈಗಾಗಲೇ ಒತ್ತಡ ಹೆಚ್ಚಾಗುತ್ತಿದೆ. ಇದರಿಂದ ಕೈಗಾರಿಕೆಗಳಿಗೆ ಕಡಿವಾಣ ಹಾಕಲಾಗುತ್ತದೆ ಮತ್ತು 2ನೇ ದರ್ಜೆಯ ನಗರಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಉತ್ತೇಜನ ನೀಡಲಾಗುತ್ತದೆ' ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

HD Kumaraswamy to restrict industries in Bengaluru city

ಟೀಕೆ ಮಾಡುತ್ತಾರೆ : 'ಬಿಜೆಪಿ ಮತ್ತು ಜೆಡಿಎಸ್‌ ಸರ್ಕಾರದಲ್ಲಿ ಹಲವು ಅಸಮಾಧಾನಗಳಿತ್ತು. ಈಗ ಅವರು ವಿರೋಧ ಪಕ್ಷವಾಗಿ ಸರ್ಕಾರವನ್ನು ಟೀಕಿಸುವ ಕೆಲಸವನ್ನು ಮಾಡುತ್ತಿದ್ದಾರೆ. ನಾನು ಭರವಸೆ ನೀಡುತ್ತೇನೆ ಸರ್ಕಾರ ಸ್ಥಿರವಾಗಿದೆ ಮತ್ತು ಐದು ವರ್ಷಗಳನ್ನು ಪೂರೈಸಲಿದೆ' ಎಂದರು.

ಹತ್ತಿ ಗಿರಣಿಗಳಿಂದ ವಾಯುಮಾಲಿನ್ಯ: ಮಾಲೀಕರಿಗೆ ಎಚ್ಚರಿಕೆಹತ್ತಿ ಗಿರಣಿಗಳಿಂದ ವಾಯುಮಾಲಿನ್ಯ: ಮಾಲೀಕರಿಗೆ ಎಚ್ಚರಿಕೆ

'ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಮಾಡಿದ ಸಾಲವನ್ನು ಮನ್ನಾ ಮಾಡಲಾಗಿದೆ. ಬ್ಯಾಂಕ್‌ ನವರು ಸಾಲಮನ್ನಾದ ಹಣ ಪಡೆಯಲು ನಾಲ್ಕು ವರ್ಷ ಕಾಯುವುದು ಬೇಡ, ಮುಂದಿನ ಜುಲೈನಲ್ಲಿ ಹಣ ಬಿಡುಗಡೆ ಮಾಡಲಾಗುತ್ತದೆ' ಎಂದು ತಿಳಿಸಿದರು.

ಮೈಸೂರು: ಕುಮಾರಸ್ವಾಮಿ ವಿರುದ್ಧ ರೈತರ ಪ್ರತಿಭಟನೆಮೈಸೂರು: ಕುಮಾರಸ್ವಾಮಿ ವಿರುದ್ಧ ರೈತರ ಪ್ರತಿಭಟನೆ

'ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರವನ್ನು ಬೀಳಿಸುವ ಕೆಲಸವನ್ನು ಮಾಡುವುದಿಲ್ಲ. ಅವರಿಂದಾಗಿಯೇ ನಾವು ಸೆಕ್ಯುಲರ್ ಸರ್ಕಾರ ನಡೆಸುತ್ತಿದ್ದೇವೆ. ಸರ್ಕಾರ ಅಸ್ಥಿರಗೊಳಿಸುವ ಚಟುವಟಿಕೆಗಳಿಗೆ ಸಿದ್ದರಾಮಯ್ಯ ಬೆಂಬಲ ನೀಡುವುದಿಲ್ಲ' ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

English summary
Karnataka Chief Minister H.D.Kumaraswamy said he will restrict industries in Bengaluru city and request to set up industries in tier two city's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X