ನಿರ್ಗತಿಕರಿಗೆ ಊಟ, ಬ್ಲಾಂಕೆಟ್ಸ್ ವಿತರಿಸಿ ಕುಮಾರಣ್ಣನ ಹುಟ್ಟುಹಬ್ಬ ಆಚರಣೆ
ಬೆಂಗಳೂರು, ಡಿಸೆಂಬರ್ 16: ರಾಜ್ಯರಾಜಕೀಯದಲ್ಲಿ ತಮ್ಮದೇ ಆದ ಜನಸೇವೆಯಿಂದ ಗುರುತಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿಯವರಿಗೆ ಇಂದು (ಶನಿವಾರ) 59ನೇ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನಲೆ ಕುಮಾರಣ್ಣನ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಸೇರಿ ಹುಟ್ಟುಹಬ್ಬ ಆಚರಿಸಿದರು.
ಸಿ ವಿ ರಾಮನ್ ನಗರದ ಜೆಡಿಎಸ್ ಅಧ್ಯಕ್ಷರಾದ ಲಕ್ಷ್ಮಿ ಮೂರ್ತಿ ಹಾಗೂ ಅವರ ಕಾರ್ಯಕರ್ತರು, ಮೆಜೆಸ್ಟಿಕ್ ಹಾಗೂ ಸಿಟಿ ರೈಲ್ವೆ ನಿಲ್ದಾಣದಲ್ಲಿ ಬಿಕ್ಷೆ ಬೇಡಿ ಜೀವನ ಕಳೆಯುವ ನಿರ್ಗತಿಕರಿಗೆ ಊಟ, ಬ್ಲಾಂಕೆಟ್ಸ್ ಗಳನ್ನ ನೀಡಿ ಕುಮಾರಸ್ವಾಮಿಯವರ ಹುಟ್ಟುಹಬ್ಬವನ್ನ ವಿಭಿನ್ನವಾಗಿ ಆಚರಣೆ ಮಾಡಿದರು.

ಈ ವೇಳೆ ಮಾತನಾಡಿದ ಲಕ್ಷ್ಮಿ ಮೂರ್ತಿ ಅವರು, "ಇವತ್ತು ಭಿಕ್ಷುಕರಿಗೆ, ಬಡವರಿಗೆ ಊಟ, ಬೆಡ್ ಶೀಟ್ ಗಳನ್ನ ನಮ್ಮ ನಾಯಕರಾದ ಕುಮಾರಸ್ವಾಮಿಯವರ ಹುಟ್ಟುಹಬ್ಬವನ್ನು ಆಚರಿಸಿದ್ದೇವೆ.
ಜೆಡಿಎಸ್ ಸದಾ ಬಡವರ ಪರವಾಗಿಯೇ ಇರುತ್ತದೆ. ಬಡವರ ಅಭಿವೃದ್ಧಿಗೆ ನಮ್ಮ ಮೊದಲ ಆದ್ಯತೆ. ಉಳಿದ ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಬಡವರನ್ನ ನಿರ್ಲಕ್ಷಸುತ್ತಿದ್ದಾರೆ.

ಆದರೆ, ಬಡವರಿಗೆ ಉತ್ತಮ ಗುಣಮಟ್ಟದ ಆಹಾರ ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿಯತ್ತ ಸಾಗಲು ಜೆಡಿಎಸ್ ಸಹಾಯ ಮಾಡುತ್ತದೆ. ಮುಂಬರುವ ಎಲೆಕ್ಷನ್ ನಲ್ಲಿ ಜೆಡಿಎಸ್ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications