ಬಿಜೆಪಿ ಪಾದಯಾತ್ರೆಗೆ ಹೆಚ್‌ಡಿಕೆ ವಿರೋಧ: ಮೈತ್ರಿ ಪಕ್ಷಗಳ ಮುನಿಸು ಕಾಂಗ್ರೆಸ್‌ಗೆ ವರದಾನ?
ಬೆಂಗಳೂರು ಜುಲೈ 31: ರಾಜ್ಯದಲ್ಲಿ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಬಿರುಕು ಕಾಣಿಸಿಕೊಂಡಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪಾದಯಾತ್ರೆಗೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಬೆಂಬಲ ನೀಡುವುದಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್ ಪಾದಯಾತ್ರೆ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡುವಾಗ ಡಿಸಿಎಂ ಡಿಕೆ ಶಿವಕುಮಾರ್ ಅವರು ಬಿಜೆಪಿ ಪಾದಯಾತ್ರೆಗೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ಬೆಂಬಲ ನೀಡದೇ ಇರುವ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದಿದ್ದಾರೆ. ಈ ಬಗ್ಗೆ ನನಗೆ ಪ್ರಶ್ನೆ ಕೇಳಬೇಡಿ ಎಂದು ಡಿಕೆ ಶಿವಕುಮಾರ್ ಸುದ್ದಿಗಾರರಿಗೆ ಹೇಳಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿದ್ದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ನಡುವೆ ಸಣ್ಣದಾಗಿ ಬಿರುಕು ಕಾಣಿಸಿಕೊಳ್ಳಲು ಆರಂಭವಾಗಿದೆ. ಅದರಲ್ಲೂ ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪಾದಯಾತ್ರೆಗೆ ಮುಂದಾಗಿರುವ ಬಿಜೆಪಿಗೆ ಹೆಚ್‌ಡಿ ಕುಮಾರಸ್ವಾಮಿ ಬೆಂಬಲ ನೀಡದೇ ಇರುವುದು ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿದೆ.
ಹೆಚ್‌ಡಿ ಕುಮಾರಸ್ವಾಮಿ ಅವರ ಈ ಹೇಳಿಕೆಯಿಂದ ಬಿಜೆಪಿ ಹಾಗೂ ಜೆಡಿಎಸ್ ನಡುವೆ ಎಲ್ಲವೂ ಸರಿಯಾಗಿಲ್ಲ ಎನ್ನುವುದು ಸ್ಪಷ್ಟವಾಗಿದೆ.
ಬಿಜೆಪಿ ಪಾದಯಾತ್ರೆಗೆ ಹೆಚ್‌ಡಿಕೆ ಬೆಂಬಲ ನೀಡದಿರಲು ಕಾರಣವೇನು?
ಬಿಜೆಪಿ ಪಾದಯಾತ್ರೆಯ ಬಗ್ಗೆ ತಮ್ಮ ಗಮನಕ್ಕೆ ತಂದಿಲ್ಲ ಎಂದು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ತಮ್ಮ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಪಾದಯಾತ್ರೆ ನಡೆಸುತ್ತಿದ್ದಾರೆ. ಆ ಬಗ್ಗೆ ಜೆಡಿಎಸ್ ಕೋರ್ ಕಮಿಟಿ ತೀರ್ಮಾನ ಮಾಡುತ್ತದೆ ಎಂದು ಹೇಳಿದ್ದಾರೆ.

ಬೆಂಗಳೂರಿನಿಂದ ಮೈಸೂರಿನವರೆಗೆ ನಮ್ಮ ಪ್ರಾಬಲ್ಯ ಇದೆ. ಚುನಾವಣೆ ಸಂದರ್ಭದಲ್ಲಿ ಒಟ್ಟಿಗೆ ಇರುವುದು ಬೇರೆ ರಾಜಕಾರಣ ಬೇರೆ, ಬಿಜೆಪಿ ನಡೆಸಿಕೊಂಡಿರುವ ರೀತಿ ಮನಸ್ಸಿಗೆ ಬೇಸರ ತಂದಿದೆ ಎಂದು ಹೆಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಪ್ರೀತಂ ಗೌಡ ವಿರುದ್ಧ ಹೆಚ್‌ಡಿಕೆ ಗರಂ
ಪಾದಯಾತ್ರೆ ಮುಖ್ಯಸ್ಥರು ಯಾರು? ಪ್ರೀತಂ ಗೌಡ ಯಾರು? ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಕುಟುಂಬಕ್ಕೆ ವಿಷ ಹಾಕಿ, ಸರ್ವನಾಶ ಮಾಡಲು ಹೊರಟ ಪ್ರೀತಂ ಗೌಡರನ್ನು ಕರೆಸಿ ನನ್ನ ಪಕ್ಕದಲ್ಲಿ ಕೂರಿಸಿ ಸಭೆ ಮಾಡುತ್ತಾರೆ. ಯಾರು ಹಾಸನದಲ್ಲಿ ಪೆನ್fಡ್ರೈವ್ ಹಂಚಿದವರು? ಅಂಥವರನ್ನು ನನ್ನ ಪಕ್ಕ ಕೂರಿಸಿ ಸಭೆ ಮಾಡ್ತಾರೆ. ಹಾಸನದಲ್ಲಿ ಏನೇನಾಗಿದೆ ಎಂದು ಅವರಿಗೆ ಗೊತ್ತಿಲ್ಲವೇ ಎಂದು ಕುಮಾರಸ್ವಾಮಿ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ಮೈತ್ರಿಯಲ್ಲಿ ಬಿರುಕು ಕಾಂಗ್ರೆಸ್‌ಗೆ ವರವಾಗುವುದೇ?
ಮುಡಾ ಹಗರಣದಲ್ಲಿ ಕಾಂಗ್ರೆಸ್ ವಿರುದ್ಧ ಹೋರಾಡಬೇಕಿದ್ದ ಮೈತ್ರಿ ಪಕ್ಷಗಳಲ್ಲಿ ಮಸ್ತಾಪಗಳು ಶುರುವಾಗಿವೆ. ಹೀಗಾಗಿ ಪಾದಯಾತ್ರೆಗೆ ಹೆಚ್‌ಡಿ ಕುಮಾರಸ್ವಾಮಿ ಬೆಂಬಲ ನೀಡುವುದಿಲ್ಲ ಎಂದು ನೇರವಾಗಿ ಹೇಳಿದ್ದಾಗಿದೆ. ಇದರಿಂದ ಪಾದಯಾತ್ರೆ ಬಿಜೆಪಿ ನಿರೀಕ್ಷೆಯಂತೆ ನಡೆಯುವುದು ಕಷ್ಟ ಎನ್ನಲಾಗುತ್ತಿದೆ. ಈ ಬೇಸರ ಮುಂದುವರೆದಿದ್ದೇ ಆದರೆ ಮೈತ್ರಿ ಒಡೆಯುವ ಸಾಧ್ಯತೆಯೂ ಇದೆ. ಹೀಗಾದರೆ ಈ ಮೈತ್ರಿ ಪಕ್ಷಗಳ ಮನಸ್ತಾಪ ಕಾಂಗ್ರೆಸ್‌ಗೆ ವರವಾಗುವುದು ಗ್ಯಾರಂಟಿ.












Click it and Unblock the Notifications