ಅಖಾಡಕ್ಕಿಳಿದರು ಸ್ವತಃ ಎಚ್ ಡಿ ಕುಮಾರಸ್ವಾಮಿ: ಬಂಡಾಯ ಶಮನವಾಗುತ್ತಾ?

Recommended Video

      ಜಾರಕಿಹೊಳಿ ಸಹೋದರರ ಕೋಪ ಶಮನ ಮಾಡಲು ಸ್ವತಃ ಎಚ್ ಡಿ ಕೆ ಅಖಾಡಕ್ಕೆ | Oneindia Kannada

      ಬೆಂಗಳೂರು, ಸೆಪ್ಟೆಂಬರ್ 18: ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ನಿರಂತರ ರಾಜಕೀಯ ಬೆಳವಣಿಗೆಯ ನಡುವೆಯೂ ಯಾವ ಪ್ರತಿಕ್ರಿಯೆಯನ್ನೂ ನೀಡದೆ ಮೌನವಾಗಿದ್ದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಇದೀಗ ಅಖಾಡಕ್ಕಿಳಿದಿದ್ದಾರೆ.

      ಜಾರಕಿಹೊಳಿ ಸಹೊದರರ ಬಂಡಾಯ ಶಮನಕ್ಕೆ ಮುಂದಾಗಿರುವ ಅವರು, ಬಂಡಾಯ ಶಾಸಕರು ತಂಗಿರುವ ಬೆಂಗಳೂರಿನ ತಾಜ್ ವೆಸ್ಟೆಂಡ್ ಹೊಟೇಲ್ ಗೆ ತೆರಳಿದ್ದಾರೆ. ಸ್ವತಃ ಮುಖ್ಯಮಂತ್ರಿಗಳೇ ಅಖಾಡಕ್ಕಿಳಿದಿರುವುದು ಕರ್ನಾಟಕದ ರಾಜಕೀಯಕ್ಕೆ ಹೊಸ ತಿರುವು ನೀಡುವ ಸಾಧ್ಯತೆ ಇದೆ.

      ಅತೃಪ್ತರೊಂದಿಗೆ ಸೋಮವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಂಧಾನ ಸಭೆಯೂ ಹೆಚ್ಚು ಫಲ ನೀಡಿದ ಲಕ್ಷಣಗಳಿಲ್ಲ. ಇದೀಗ ಅತೃಪ್ತ ಶಾಸಕರು ಮಹಾರಾಷ್ಟ್ರಕ್ಕೆ ತೆರಳಿ, ಮುಂಬೈನ ರೆಸಾರ್ಟ್ ವೊಂದರಲ್ಲಿ ತಂಗಲಿದ್ದಾರೆ ಎಂಬ ವದಂತಿ ಹಬ್ಬಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಕುಮಾರಸ್ವಾಮಿ ಸ್ವತಃ ಅಖಾಡಕ್ಕಿಳಿಯುವ ನಿರ್ಧಾರ ಮಾಡಿದ್ದಾರೆ.

      HD Kumaraswamy himself try to convince rebel MLAs of Congress

      ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಬೇರೆ ಹಾದಿ ಇಲ್ಲದೆ ತಾಜ್ ವೆಸ್ಟೆಂಡ್ ಗೆ ತೆರಳಿರುವ ಕುಮಾರಸ್ವಾಮಿ ಅವರ ಭೇಟಿ ಫಲ ನೀಡುತ್ತಾ? ಸರ್ಕಾರ ಉಳಿಸಿಕೊಳ್ಳುವುದಕ್ಕಾಗಿ ಅತೃಪ್ತ ಶಾಸಕರ ಎಲ್ಲಾ ಬೇಡಿಕೆಗಳಿಗೂ ಎಚ್ಡಿಕೆ ತಲೆಯಲ್ಲಾಡಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+