ವಿವಾದಿತ ಜಾಗ ಕಬ್ಜಾ: ಅಧಿಕಾರ ದುರಪಯೋಗ: HD ಕುಮಾರಸ್ವಾಮಿ

ಹುಬ್ಬಳ್ಳಿ, ಜನವರಿ 09: ಕಾಂಗ್ರೆಸ್ ಸರ್ಕಾರ ದಬ್ಬಾಳಿ ಮಾಡುತ್ತಿದ್ದಾರೆ. ಹುಬ್ಬಳ್ಳಿಯ ವಿವಾದಿತ ಜಾಗ ಕಾಂಗ್ರೆಸ್ ನಿಂದ ಕಬ್ಜಾ ಮಾಡಿದ್ದಾರೆ. ಈ ಬಗ್ಗೆ ಮೂಲ ದಾಖಲೆಗಳನ್ನ ತೆಗೆಸುವಂತೆ ಸೂಚನೆ ನೀಡಲಾಗಿದೆ. ಸೂಕ್ತ ದಾಖಲಾತಿಗಳ ಮೂಲಕ ಸತ್ಯಾ ಸತ್ಯತೆ ಏನಿದೆ ಎಂಬುದು ಗೊತ್ತಾಗಲಿದೆ ಎಂದು ಸಂಸದ ಮತ್ತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

ನಗರದಲ್ಲಿಂದು ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಜಾಗ ಕಬ್ಜಾ ಮಾಡುವ ಮೂಲಕ ದಬ್ಬಾಳಿಕೆ ಮಾಡಿದ್ದಾರೆ. ಇಲ್ಲಿ ಅಧಿಕಾರಿಗಳ ಅಧಿಕಾರ ದುಪಯೋಗವಾಗಿದೆ. ಮೊದಲಿನಿಂದಲೂ ಕಾಂಗ್ರೆಸ್ ಸ್ವಪಕ್ಷದ ಸ್ವತ್ತು ಅನ್ನೋದು ಇತ್ತು. ಜಾಗಕ್ಕೆ ಸಂಬಂಧಿಸಿದಂತೆ ಜ್ಯಾತ್ಯಾತೀತ ಜನತಾದಳ, ಜನತಾ ದಳದ ತಕಾರರು ತೆಗೆಯಲಾಗಿತ್ತು.

HD Kumaraswamy Criticises Congress for Controversial Land Possession at Hubballi

ಹೀಗಿದ್ದರೂ ಶನಿವಾರ ಏಕಾಏಕಿ ಕಾಂಗ್ರೆಸ್ ಅಧಿಕಾರ ದರ್ಬಳಕೆ ಮಾಡಿಕೊಂಡು ಸ್ಥಳೀಯ ಕೈ ನಾಯಕರು ಹಾಗೂ ಅಧಿಕಾರಿಗಳು ಜಾಗ ಕಬ್ಜಾ ಮಾಡಿದ್ದಾರೆ. ಸರ್ಕಾರಿ ಅಧಿಕಾರಿಗಳ ಅಧಿಕಾರ ದುರುಪಯೋಗ ಆಗಿದೆ. ಏಕಾಏಕಿ ಕಬ್ಜಾ ಮಾಡಲಾಗಿದೆ. ಕಾನೂನು ಪ್ರಕಾರ ಮುಂದುವರೆಯಲಾಗುವುದು ಎಂದು ತಿಳಿಸಿದ ಅವರು ಸರ್ಕಾರ ನಡೆ ಖಂಡಿಸಿದೆ.

ಬಿಜೆಪಿ ಬಣ ರಾಜಕೀಯ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಲಿಲ್ಲ. ಈ ಬಗ್ಗೆ ಬಿಜೆಪಿಯವರೇ ತೀರ್ಮಾನ ಮಾಡಬೇಕು. ಆ ಬಗ್ಗೆ ನಾನು ಮಾತನಾಡೋದು ತಪ್ಪು. ಸರಿ ಪಡಿಸಿಕೊಳ್ಳಲು ನಾನು ಸ್ನೇಹಿತರಿಗೆ ಹೇಳಿದ್ದೇನೆ. ಅದು ರಾಷ್ಟ್ರೀಯ ಪಕ್ಷ ಅವರೇ ಕೂತು ಚರ್ಚೆ ಮಾಡಬೇಕು. ಇದು ಬಿಜೆಪಿ ಪಕ್ಷದ ಆಂತರಿಕ ವಿಚಾರ ಎಂದು ಹೇಳಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಾಹ ಕುಂಭಮೇಳ ಪ್ರಯಾಣ ವಿಚಾರ, ಇದು ಅವರವರ ಭಕ್ತಿ ಭಾವಕ್ಕೆ ಬಿಟ್ಟದ್ದು. ಕುಂಭಮೇಳಕ್ಕೆ ಹೋಗುವ ವಿಚಾರಕ್ಕೆ ಯಾವುದೇ ವ್ಯಾಖ್ಯಾನ ಮಾಡುವ ಅಗತ್ಯವಿಲ್ಲ ಎಂದರು.

ದೆಹಲಿ ಬಿಜೆಪಿ ಗೆಲುವು: ಎಚ್‌ಡಿಕೆ ಹರ್ಷ

ದೆಹಲಿ ರಾಜ್ಯ ವಿಧಾನಸಭಾ ಚುನಾವಣೆ 2025 ಯಲ್ಲಿ ಬಿಜೆಪಿ ಅಧಿಕಾರ ಗದ್ದುಗೆ ಮರಳಿದೆ. ಆಮ್ ಆದ್ಮಿ ಪಕ್ಷ ಸೋತಿದೆ. ಈ ಬಗ್ಗೆ ಉತ್ತರಿಸಿದ ಎಚ್‌ಡಿ ಕುಮಾರಸ್ವಾಮಿ ಅವರು, ಫಲಿತಾಂಶ ಪ್ರಾರಂಭಿಕವಾಗಿ ಎಲ್ಲರೂ‌ ನಿರೀಕ್ಷೆ ಮಾಡಿದ್ದ ಫಲಿತಾಂಶವೆ ಬಂದಿದೆ. ಕಳೆದ ಎರಡು ದಶಕಗಳಿಂದ ಭ್ರಷ್ಟಾಚಾರ ಹೆಚ್ಚಾಗಿತ್ತು. ಅಧಿಕಾರಕ್ಕೆ‌ ಬಂದ ಎಎಪಿ ಪಕ್ಷ ಸಾಕಷ್ಟು ಧಕ್ಕೆ ತಂದಿತ್ತು. ದೆಹಲಿಯಲ್ಲಿ ಮೂಲಭೂತ ಸೌಕರ್ಯಗಳ ಮೇಲಿನ ಸರ್ಕಾರ ನಿರ್ಲಕ್ಷೆಗೆ ಜನರ ಆಕ್ರೋಶಗೊಂಡಿದೆ. ಇದೆಲ್ಲ ಕಾರಣದಿಂದ ಈ ಬಾರಿ ದೆಹಲಿಯಲ್ಲಿ ಜನರು ಅಭಿವೃದ್ಧಿ ವಿಚಾರ ಗಮನದಲ್ಲಿಟ್ಟುಕೊಂಡು ಸೂಕ್ತ ತೀರ್ಮಾನ ಕೈಗೊಂಡಿದ್ದಾರೆ ಎಂದು ವಿವರಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+